ಯೋಗದ ಕಲೆ ಬಲ್ಲವನಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಅಥವಾ ಭೋಜ್ಜಿನ ಸಮಸ್ಯೆ ಕಾಡುವುದಿಲ್ಲ. ಆಕರ್ಷಕ ಮೈಕಟ್ಟು ಬೇಕೆನ್ನುವವರು ಈ ಯೋಗಾಸನದ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಸನವನ್ನು ದಿನನಿತ್ಯ ನಿಯಮಿತ ಹಾಗೂ ಕ್ರಮಬದ್ದವಾಗಿ ಅಭ್ಯಾಸ ಮಾಡುವುದು ಒಳ್ಳೆಯದು.

ಇದನ್ನೂ ಓದಿ: ಯೋಗ ಆರಂಭಿಸುವುದು ಹೇಗೆ?

ಇದರ ಜತೆಗೆ ಉತ್ತಮ ರೀತಿಯ ಆಹಾರ ಕ್ರಮವನ್ನು ಜೀವನದಲ್ಲಿ ಅನುಸರಿಸುವುದು ಕೂಡ ಮುಖ್ಯ. ಈ ಯೋಗಾಭ್ಯಾಸ ಮಾಡುವುದರಿಂದ ಕೇವಲ ದೇಹದ ಭೂಜ್ಜನ್ನು ಮಾತ್ರ ಕರಗಿಸುವುದಲ್ಲದೆ ಆಕರ್ಷಕ ಹಾಗೂ ಆರೋಗ್ಯಕರ ಮೈಕಟ್ಟನ್ನು ಪಡೆಯಬಹುದು. ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಕೂಡ ಹೋಗಲಾಡಿಸಬಹುದು.

ಇದನ್ನೂ ಓದಿ: ತೂಕ ಇಳಿಸಲು ಸೂರ್ಯ ನಮಸ್ಕಾರ

ಈ ಸಂಚಿಕೆಯಲ್ಲಿ ತ್ರಿಕೋನಾಸನ ಮಾಡುವ ವಿಧಾನ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿಯೋಣ. ತ್ರಿಕೋನಾಸನ ಎಂದರೆ, ನಮ್ಮ ದೇಹವನ್ನು ತ್ರಿಕೋನದ ಆಕೃತಿಯಲ್ಲಿ ಭಾಗಿಸಿ ಮಾಡುವಂತಹ ಒಂದು ಆಸನ ಭಂಗಿ.

ಇದನ್ನೂ ಓದಿ: ಯೋಗ ಎಂದರೇನು?

ಮಾಡುವ ವಿಧಾನ

1)ಸಮಸ್ಥಿತಿಯಲ್ಲಿ ನಿಂತುಕೊಳ್ಳಿ, ನಿಮ್ಮ ಎರಡು ಪಾದ ಒಂದಕ್ಕೊಂದು ಜೋಡಣೆ ಯಾಗಿರಲಿ, ಕೈ ಹಸ್ತ ತೊಡೆಯ ಪಕ್ಕ ತಂದು ನಿಮ್ಮ ದೇಹವನ್ನು ಸರಳ ರೇಖೆಯಲ್ಲಿರಿಸಿ.

2)ಎರಡು ಕಾಲುಗಳನ್ನು ನಡುವೆ 2-3 ಅಡಿಗಳಷ್ಟು ಅಂತರದಲ್ಲಿ ವಿಸ್ತರಿಸಿ. ಬಲ ಪಾದ ಬಲಕ್ಕೆ ಮತ್ತು ಎಡಪಾದ ಒಳಕ್ಕೆ ತಿರುಗಿಸಿ.

ಇದನ್ನೂ ಓದಿ: ಪಕ್ಕೆಲುಬಿನ ಕೊಬ್ಬು ಕರಗಿಸಲು ಪಾರ್ಶ್ವ ಕೋನಾಸನ

3)ಆಳವಾದ ಉಸಿರನ್ನು (ಪೂರಕ) ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ಭುಜದ ಅಂತರಕ್ಕೆ ಮೇಲೆತ್ತಿ.

4)ಈಗ ನಿದಾನವಾಗಿ ಉಸಿರನ್ನು ಹೊರಗೆ (ರೇಚಕ) ಹಾಕುತ್ತಾ ನಿಮ್ಮ ಸೊಂಟದ ಭಾಗದಿಂದ ಬಲಗಡೆ ಭಾಗಿ, ಬಲಹಸ್ತದಿಂದ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ.

ಇದನ್ನೂ ಓದಿ: ಉಸಿರಾಟ ಸಾಮರ್ಥ್ಯ ಹೆಚ್ಚಿಸಲು ಅರ್ಧ ಚಕ್ರಾಸನ

5)ಎಡ ಕೈ ಮೇಲಕ್ಕೆತ್ತಿ ಎಡಹಸ್ತವನ್ನು ನೋಡುತ್ತಾ 5 ಬಾರಿ ಆಳವಾಗಿ ಉಸಿರಾಟ ಮಾಡಿ.

6) ಉಸಿರಾಟ ಆದನಂತರ  ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ನಿದಾನವಾಗಿ ಮೇಲಕ್ಕೆ ಬಂದು ಇನ್ನೊಂದು ಬದಿಗೆ ಅಭ್ಯಾಸ ಮಾಡಿ.

ಇದನ್ನೂ ಓದಿ: ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಗೆ ಪಾದಹಸ್ತಾಸನ

ಇದನ್ನೂ ಓದಿ: ಕಾಲು, ಮಂಡಿ ಬಲವರ್ಧನೆಗೆ ಪರಿವೃತ್ ಪಾರ್ಶ್ವ ಕೋನಾಸನ

ಪ್ರಯೋಜನ

* ಕಾಲುಗಳು ಮತ್ತು ತೊಡೆಗಳ ಮಾಂಸಖಂಡ ಬಲಗೊಳ್ಳುವುದು.

* ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಕರಗುವುದು.

* ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಉತ್ತಮ ಆಸನ.

* ಕತ್ತಿನ ಉಳುಕು ನಿವಾರಣೆಯಾಗುವುದು.

* ಶ್ವಾಸಕೋಶಗಳ ಆರೋಗ್ಯ ಉತ್ತಮಗೊಳ್ಳುವುದು.

ಸೂಚನೆಗಳು

* ಮೈಗ್ರೇನ್, ಕುತ್ತಿಗೆ ಮತ್ತು ಬೆನ್ನುನೋವು, ಅಧಿಕ ರಕ್ತದೊತ್ತಡ ಇರುವವರು ಈ ಆಸನ ಮಾಡಬಾರದು.