ಜನರು ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಅನೇಕ ರೀತಿಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಜತೆಗೆ ಯಾವ ಮಾರ್ಗ ಅನುಸರಿಸಿದರೆ ಉತ್ತಮ ಎನ್ನುವ ಗೊಂದಲದಲ್ಲಿಯೂ ಸಿಲುಕಿಕೊಂಡಿದ್ದಾರೆ.

ಇತ್ತೀಚೆಗೆ ಕಾಲಿನ ಸಮಸ್ಯೆಯನ್ನು ಹೆಚ್ಚು ಜನರು ಅನುಭವಿಸುತ್ತಿದ್ದಾರೆ. ನಿಂತು ಕೆಲಸ ಮಾಡುವ ಪೊಲೀಸರು, ಶಿಕ್ಷಕರು ಹೆಚ್ಚಾಗಿ ಇದರ ನೋವು ಕಾಣುತ್ತಿದ್ದಾರೆ. ಸದೃಢ ದೇಹಕ್ಕೆ ಸದೃಢ ಕಾಲುಗಳು ಅತ್ಯಂತ ಅವಶ್ಯಕ. ಹಾಗಾಗಿ ಕಾಲುಗಳನ್ನು ಬಲಗೊಳಿಸಲು ಜನರು ಜಂಪಿಂಗ್, ಓಟ, ಜಾಗಿಂಗ್, ನಡಿಗೆ ಹೀಗೆ ಅನೇಕ ರೀತಿಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

ಸೊಂಟದ ಬೊಜ್ಜು ಕರಗಿಸಲು ತ್ರಿಕೋನಾಸನ

ಕಾಲುಗಳು ಸದ್ರಢವಾಗಿದ್ದರೆ ಮಾತ್ರ ದೇಹ ಲವಲವಿಕೆ ಯಿಂದಿರಲು ಸಾಧ್ಯ. ಹಾಗಾದರೆ ಬನ್ನಿ ಕಾಲುಗಳನ್ನು ಬಲಗೊಳಿಸುವ ಸರಳವಾದ ಯೋಗಾಸನ ಅಭ್ಯಾಸ ಮಾಡೋಣ.

ಕಾಲು, ಮಂಡಿ ಬಲವರ್ಧನೆಗೆ ಪರಿವೃತ್ ಪಾರ್ಶ್ವ ಕೋನಾಸನ

ಪರೀವೃತ್ತ ತ್ರಿಕೋನಾಸನ:

ಪರೀವೃತ್ತ ತ್ರಿಕೋನಾಸನ ಇದು ಸಂಸ್ಕೃತದ ಪದವಾಗಿದೆ, ಪರೀವೃತ್ತ ಎಂದರೆ ತಿರುಗಿದ, ತ್ರಿಕೋನಾಸನ ಎಂದರೆ ತ್ರಿಭುಜ ದಂತಹ ಆಸನ ಎಂಬರ್ಥ ನೀಡುತ್ತದೆ. ಇದು ತ್ರಿಕೋನಾಸನದಂತೆ ಕಂಡರೂ ಸ್ವಲ್ಪ ಭಿನ್ನವಾಗಿದೆ.

ಯೋಗ ಆರಂಭಿಸುವುದು ಹೇಗೆ?

ಮಾಡುವ ವಿಧಾನ

1) ಸಮಸ್ಥಿತಿಯಲ್ಲಿ ನಿಂತುಕೊಳ್ಳಿ, ನಿಮ್ಮ ಎರಡು ಪಾದ ಒಂದಕ್ಕೊಂದು ಜೋಡಣೆ ಯಾಗಿರಲಿ, ಕೈ ಹಸ್ತ ತೊಡೆಯ ಪಕ್ಕ ತಂದು ನಿಮ್ಮ ದೇಹ ಒಂದೇ ಸರಳ ರೇಖೆಯಲ್ಲಿರಿಸಿ.

2) ಎರಡು ಕಾಲುಗಳ ನಡುವೆ 2-3 ಅಡಿಗಳಷ್ಟು ಅಂತರದಲ್ಲಿ ವಿಸ್ತರಿಸಿ ಬಲ ಪಾದ ಬಲಕ್ಕೆ ಮತ್ತು ಎಡಪಾದ ಒಳಕ್ಕೆ ತಿರುಗಿಸಿ.

ಪಕ್ಕೆಲುಬಿನ ಕೊಬ್ಬು ಕರಗಿಸಲು ಪಾರ್ಶ್ವ ಕೋನಾಸನ

3) ಆಳವಾದ ಉಸಿರನ್ನು (ಪೂರಕ) ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ಭುಜದ ಅಂತರಕ್ಕೆ ಮೇಲೆತ್ತಿ.

4) ಈಗ ಉಸಿರನ್ನು ನಿಧಾನ ಮತ್ತು ಸಂಪೂರ್ಣವಾಗಿ ಹೊರಹಾಕುತ್ತ (ರೇಚಕ) ಸೊಂಟದ ಭಾಗದಿಂದ ಬಲಗಡೆ ತಿರುಗಿ. ನಿಮ್ಮ ಎಡಹಸ್ತ ಬಲ ಪಾದದ ಹೊರಗಡೆ ಇಡುತ್ತಾ ಬಲಗೈ ನೇರವಾಗಿ ಮೇಲಕ್ಕೆತ್ತಿ. ಬಲ ಹಸ್ತವನ್ನು ನೋಡುತ್ತಾ 5 ಬಾರಿ ಆಳವಾಗಿ ಉಸಿರಾಟ ಮಾಡಿ.

5) ಉಸಿರಾಟ ಆದನಂತರ ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ನಿದಾನವಾಗಿ ಮೇಲಕ್ಕೆ ಬಂದು ಇನ್ನೊಂದು ಬದಿಗೆ ಪುನರಾವರ್ತಿಸಿ.

ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಗೆ ಪಾದಹಸ್ತಾಸನ

ಪ್ರಯೋಜನಗಳು

1) ಕಾಲುಗಳು ಸದೃಢವಾಗುತ್ತದೆ.

2) ಹೊಟ್ಟೆಭಾಗದ ಅಂಗಗಳನ್ನು ಉದ್ದಿಪಿಸಲು ಸಹಾಯ ಮಾಡುತ್ತದೆ.

3) ಬೆನ್ನು ನೋವು ನಿವಾರಣೆ ಸಾಧ್ಯ.

4) ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

5) ಮಲಬದ್ಧತೆ ಸಮಸ್ಯೆ ನಿವಾರಣೆ.

6) ಸೊಂಟ, ತೊಡೆ, ಮತ್ತು ಬೆನ್ನು ಮೂಳೆಗಳ ಬಲವರ್ಧನೆಗೆ ಉತ್ತಮ ಆಸನ.

7) ಉಸಿರಾಟವನ್ನು ಸುಧಾರಿಸುತ್ತದೆ.

ಉಸಿರಾಟ ಸಾಮರ್ಥ್ಯ ಹೆಚ್ಚಿಸಲು ಅರ್ಧ ಚಕ್ರಾಸನ

ಎಚ್ಚರಿಕೆ : ಬೆನ್ನು ಮೂಳೆಯ ಗಾಯ, ನರದ ತೊಂದರೆ, ಕೆಳಬೆನ್ನಿನ ನೋವು, ತಲೆನೋವು ಹಾಗೂ ಮೈಗ್ರೇನ್ ತೊಂದರೆ ಇರುವವರು ಈ ಆಸನ ಮಾಡಬಾರದು.