ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಫೆಬ್ರುವರಿ 07 ರೊಳಗೆ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ
ಸಿಬ್ಬಂದಿ ಮೇಲ್ವಿಚಾರಕರು: 2
ಲೆಕ್ಕಪತ್ರ ಮೇಲ್ವಿಚಾರಕ: 1
ಪ್ರಥಮ ದರ್ಜೆ ಸಹಾಯಕರು: 7
ದ್ವಿತೀಯ ದರ್ಜೆ ಸಹಾಯಕರು: 18
ಕಛೇರಿ ಸಹಾಯಕರು: 11, ಸೇರಿದಂತೆ ಒಟ್ಟು 39 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವೇತನ ವಿವರ
ಸಿಬ್ಬಂದಿ ಮೇಲ್ವಿಚಾರಕರು: ₹ 33450 ರಿಂದ 62600
ಲೆಕ್ಕಪತ್ರ ಮೇಲ್ವಿಚಾರಕ: ₹ 33450 ರಿಂದ 62600
ಪ್ರಥಮ ದರ್ಜೆ ಸಹಾಯಕರು: ₹ 27650 ರಿಂದ 52650
ದ್ವಿತೀಯ ದರ್ಜೆ ಸಹಾಯಕರು: ₹ 21400 ರಿಂದ 42000
ಕಛೇರಿ ಸಹಾಯಕರು: ₹ 18600 ರಿಂದ 32,6 00 ರ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.
ವಿಶೇಷ ಸೂಚನೆ: ಮೇಲ್ಕಂಡ ವೇತನದ ಜೊತೆಗೆ ಸಂಘದ ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿಗದಿಪಡಿಸುವ ತುಟ್ಟಿಭತ್ಯೆ ಮತ್ತು ಮನೆ ಬಾಡಿಗೆಯನ್ನು ನೀಡುವುದ.

ವಿದ್ಯಾರ್ಹತೆ

ಸಿಬ್ಬಂದಿ ಮೇಲ್ವಿಚಾರಕ, ಲೆಕ್ಕಪತ್ರ ಮೇಲ್ವಿಚಾರಕ, ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಆಪರೇಟ್ ಮತ್ತು ಅಪ್ಲಿಕೇಶನ್ ಜ್ಞಾನದ ಜೊತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರವನ್ನು ಹೊಂದಿರಬೇಕು. ಕಡ್ಡಾಯವಾಗಿ ಕನ್ನಡ ಓದಲು, ಬರೆಯಲು ಬರಬೇಕು.

ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು. ಕಂಪ್ಯೂಟರ್ ಆಪರೇಟ್ ಮತ್ತು ಅಪ್ಲಿಕೇಶನ್ ಜ್ಞಾನದ ಜೊತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರ ಹೊಂದಿರಬೇಕು. ಕಡ್ಡಾಯವಾಗಿ ಕನ್ನಡ ಓದಲು, ಬರೆಯಲು ಬರಬೇಕು. ಇನ್ನು ಕಛೇರಿ ಸಹಾಯಕರಾಗಲು ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರಬೇಕು. ಜೊತೆಗೆ ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಓದಿರಬೇಕು.

ವಯೋಮಿತಿ

ಅರ್ಜಿ ಹಾಕಲು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಕೆಟಗರಿ ಅಭ್ಯರ್ಥಿ ಆಗಿದ್ದಲ್ಲಿ ಗರಿಷ್ಠ 35 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮೀರಿರಬಾರದು. ಎಸ್‌ಸಿ-ಎಸ್‌ಟಿ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಇನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು ಸಂಘವು ನಿಗಧಿಪಡಿಸಿರುವ ಅರ್ಜಿ ನಮೂನೆಯನ್ನು ಸಂಘದ ಪ್ರಧಾನ ಕಛೇರಿ, ಶಾಂತಿನಗರ, ಕೆ.ಹೆಚ್‌.ರಸ್ತೆ, ಬೆಂಗಳೂರು-27 ಇಲ್ಲಿ ಕಛೇರಿ ಅವಧಿಯಲ್ಲಿ ಪಡೆಯಬಹುದು. ₹ 500 ನಗದು ಶುಲ್ಕ ಪಾವತಿಸಿ ಅರ್ಜಿ ಪಡೆದುಕೊಳ್ಳಬುದು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ ದಿನಾಂಕ 07-02-2023 ರೊಳಗೆ ಇದೇ ಕಛೇರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿ, ಸ್ವೀಕೃತಿ ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು KSRTC ಕೇಂದ್ರ ಕಚೇರಿ, ಕೆ.ಹೆಚ್.ರಸ್ತೆ, ಬೆಂಗಳೂರು, ಪಿನ್ ಕೋಡ್ – 560027

ದೂರವಾಣಿ ಸಂಖ್ಯೆ: 080-22223421 ಇ-ಮೇಲ್ ವಿಳಾಸ: Ksrtceccs@yahoo.co.in