ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ ಮಾಡುತ್ತಿವೆ. ಅಂಥದ್ದೇ ಪ್ರಯೋಗದಿಂದ ಕತ್ತೆಗೂ ವಸಂತಕಾಲ ಬಂದಿದೆ. ಕತ್ತೆ ಸಾಕಾಣಿಕೆಯ ಲಾಭದಾಯಕ ಕೃಷಿಯ ಕುರಿತ ವರದಿ ಇದು.

ಮಂಗಳೂರಿನ ಹೊರವಲಯದ ಕೊಣಾಜೆ ಸಮೀಪದ ಇರಾದಲ್ಲಿ ಕತ್ತೆ ಸಾಕಾಣಿಕೆ ಕೇಂದ್ರವೊAದು ಆರಂಭಗೊAಡಿದೆ. ಇದು ರಾಜ್ಯದ ಪ್ರಪ್ರಥಮ ಕತ್ತೆ ಸಾಕಾಣಿಕೆ ಕೇಂದ್ರ (Donkey Farming Center) ಎಂದೂ ಹೇಳಲಾಗುತ್ತಿದೆ. ದೇಶದ ಮೊದಲ ಕತ್ತೆ ಸಾಕಾಣಿಕೆ ಕೇಂದ್ರ ಕೇರಳದ ಎರ್ನಾಕುಲಂನಲ್ಲಿದೆ. ಅದರ ಬಳಿಕ ದೇಶದ ಎರಡನೇ ಕತ್ತೆ ಸಾಕಾಣಿಕೆ ಕೇಂದ್ರ ಇದು.

ಬೆಂಗಳೂರಿನಲ್ಲಿ ಐಟಿ (IT Job) ಉದ್ಯೋಗಿಯಾಗಿದ್ದ ಕನಕಪುರ ರಾಮನಗರದ ಡಾ. ಶ್ರೀನಿವಾಸ ಗೌಡ ಅವರು ಮಂಗಳೂರಿನಲ್ಲಿ ಕತ್ತೆ ಸಾಕಾಣಿಕೆ ಕೇಂದ್ರ ಆರಂಭಿಸಿದ್ದಾರೆ. ಇರಾದಲ್ಲಿ ಐವರು ಸ್ನೇಹಿತರ ಸಹಾಯದಿಂದ 2.35 ಎಕರೆ ಜಾಗವನ್ನು ಲೀಸ್‌ಗೆ (Lease) ಪಡೆದು ಆಡು ಮತ್ತು ಕುರಿ (Sheep) ಸಾಕಾಣಿಕ ಆರಂಭಿಸಿದ್ದಾರೆ.

ಎರಡು ವರ್ಷಗಳ ಬಳಿಕ ಕತ್ತೆ ಸಾಕಾಣಿಕೆಗೆ ನಿರ್ಧರಿಸಿ ಕಾರ್ಯಾರಂಭ ಮಾಡಿಯೇ ಬಿಟ್ಟಿದ್ದಾರೆ. ಐಸಿರಿ ಫಾರ್ಮ್ಸ್ (Aisiri) ಹೆಸರಿನಲ್ಲಿ ಸಾಕಾಣಿಕೆ ಕೇಂದ್ರ ಆರಂಭಿಸಿದ್ದಾರೆ. ಈಗ ಅಲ್ಲಿಯೇ ಕತ್ತೆ ಸಾಕಾಣಿಕೆ ತರಬೇತಿ ಕೇಂದ್ರವನ್ನೂ ತೆರೆದಿದ್ದಾರೆ. ಇವರ ಫಾರ್ಮ್ನಲ್ಲಿ ಉತ್ಪಾದನೆ ಆಗುವ ಕತ್ತೆ ಹಾಲಿಗೆ ತುಂಬಾ ಬೇಡಿಕೆ ಇದೆ.

ಆಂಧ್ರಪ್ರದೇಶ, ಗುಜರಾತ್‌ನಿಂದ 20 ಕತ್ತೆಗಳನ್ನು ತಂದು ಅವುಗಳನ್ನು ಪ್ರತ್ಯೇಕ ಕೊಟ್ಟಿಗೆಯಲ್ಲಿರಿಸಿದ್ದಾರೆ. ಮಕ್ಕಳಲ್ಲಿ ಬುದ್ಧಿಶಕ್ತಿ ಬೆಳೆಯಲು, ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ತಾಯಿ ಹಾಲಿನಷ್ಟೇ ಪ್ರಯೋಜನಕಾರಿ. ವಾರಕ್ಕೊಮ್ಮೆ ಹತ್ತು ಎಂ.ಎಲ್‌ನಷ್ಟು ಕತ್ತೆ ಹಾಲು ಕುಡಿದರೆ ಮೂರು ತಿಂಗಳಲ್ಲಿ ದೇಹದಲ್ಲಿರುವ ಸಾಮಾನ್ಯ ರೋಗಗಳು ವಾಸಿಯಾಗುತ್ತದೆ ಎನ್ನುವ ಮಾತೂ ಇದೆ.

ತುಳಸಿ ಕೃಷಿ: ಒಂದೇ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ

ಕೆ.ಜಿ.ಗೆ 78 ಸಾವಿರ ರೂ.
ಕತ್ತೆ ಹಾಲಿಗೆ (Donkey Milk) ವಿದೇಶದಲ್ಲೂ ಬೇಡಿಕೆ ಇದೆ. ಲೀಟರ್‌ಗೆ 5 ಸಾವಿರ ರೂ. ದಿಂದ 7 ಸಾವಿರ ರೂ. ವರೆಗೆ ಬೆಲೆ ಇದೆ. ಪನ್ನೀರ್ (Milk Paneer) ಕೂಡ ಮಾಡಬಹುದು. ದನ ಹಾಲಿನ (Cow Milk) ಮತ್ತು ಎಮ್ಮೆ (Buffalo Milk) ಹಾಲಿನ ಪನ್ನೀರ್‌ಗಳಿಗೆ ಒಂದು ಕೆ.ಜಿ.ಗೆ 300 ರೂ.ದಿಂದ 600 ರೂ. ಇದೆ. ಆದರೆ, ಕತ್ತೆ ಹಾಲಿನ ಪನ್ನೀರಿಗೆ ಪ್ರತಿ ಕಿಲೋಗೆ 78 ಸಾವಿರ ರೂ.ವರೆಗೆ ಇದೆ.

ಕೃಷಿಯಲ್ಲಿ ಸಾಪ್ಟವೇರ್ ಎಂಜಿನಿಯರ್‌ಗಳನ್ನೇ ಮೀರಿಸಿದ ಸಾಧಕಿ

ಅಬ್ಬಾ ಎಷ್ಟೊಂದು ದುಬಾರಿ ಎಂದು ಆಶ್ಚರ್ಯವಾದರೂ ನಿಜ. ಕತ್ತೆ ಹಾಲಿನ ಒಂದು ಕೆ.ಜಿ. ಪನ್ನೀರ್ ಮಾರಾಟದಿಂದ 15 ಗ್ರಾಂ ಚಿನ್ನವನೇ ಖರೀದಿಸಬಹುದು. ಕತ್ತೆ ಹಾಲಿನ ಪನ್ನೀರನ್ನು ವಿದೇಶಿಗರೇ ಹೆಚ್ಚಾಗಿ ಖರೀದಿ ಮಾಡುತ್ತಾರೆ. ಇದರ ಪನ್ನೀರ ಉತ್ಪಾದನೆ ಕೂಡ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ. ಇದೇ ಉದ್ಯಮ ಮಾಡುವವರಿಗೂ ಅವಕಾಶ ಜಾಸ್ತಿ ಇದೆ.