ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಬೆಳೆಗಳಲ್ಲಿಯೂ ಅಲ್ಲಲ್ಲಿ ರೋಗ ಬಾಧೆ ಕಾಣಿಸಿಕೊಳ್ಳಲಾರಂಭಿಸಿದೆ. ಅದೇ ರೀತಿ ಈಗತಾನೆ ಬೆಳೆಯುತ್ತಿರುವ ಈರುಳ್ಳಿ ಬೆಳೆಯಲ್ಲಿಯೂ ಹಳದಿ ರೋಗ, ಕುಬ್ಜವಾಗುವುದು ಅಥವಾ ಸಸಿಗಳು ಮುರಿದಂತೆ ಬಾಗಿ ಬೀಳುತ್ತಿವೆ. ಇಂಥ ಸಮಸ್ಯೆಗಳಿಗೆ ತಜ್ಞರು ಸೂಕ್ತ ಪರಿಹಾರ ಸೂಚಿಸಿದ್ದಾರೆ.

ರಾಜ್ಯದಲ್ಲಿ ಬಹುತೇಕ ಅರ್ಕಾ ಕಲ್ಯಾಣ, ಇಂಡೋ ಅಮೇರಿಕನ್, ಭೀಮಾ ಸೂಪರ್ ಮತ್ತು ಸ್ಥಳೀಯ ಈರುಳ್ಳಿ ತಳಿಗಳನ್ನು ಬೆಳೆಯಲಾಗುತ್ತಿದೆ. ಸದ್ಯ ಈ ಬೆಳೆಗಳು 30 ರಿಂದ 60 ದಿನಗಳ ಹಂತದಲ್ಲಿವೆ.

ಇದನ್ನೂ ಓದಿ: ಶಿಥಿಲ ಪಾಲಿಥೀನ್ ಶೀಟ್‍ಗಳ ಬದಲಾವಣೆಗೆ ಸಹಾಯಧನ

ಆರಂಭದಲ್ಲಿ ಬಿತ್ತನೆ ಮಾಡಿದ ಬೆಳೆಗೆ ಅತೀವ ಸಾಪ್ಟ ರೋಟ್ ರೋಗ ಬಾಧೆ, ಎಂಟರ್‍ಬ್ಯಾಕ್ಟರ್ ಕ್ಲೋಕೆಯಿಂದ ಹಾಗೂ ಪರಪಲ್ ಬ್ಲೋಚ್ ರೋಗ ಬಾಧೆ, ಅಲ್ಟರ್ನಾರಿಯಾ ಪಾರ್ರಿ ಇಂದ ಮತ್ತು ತಡವಾಗಿ ಬಿತ್ತನೆ ಮಾಡಿದ ಬೆಳೆಗೆ ಸ್ವಾಭಾವಿಕವಾಗಿ ಆರೋಗ್ಯವಾಗಿದ್ದು, ಅಲ್ಪ ಪ್ರಮಾಣದಲ್ಲಿ ಟ್ರಿಪ್ಸ್ ನುಸಿ ಹಾಗೂ ಬೋರ್ನ ಕೊರತೆಯಿಂದ ಬಾಧಿತವಾರಿರುವುದು ಕಂಡುಬಂದಿರುತ್ತದೆ.

ಇದನ್ನೂ ಓದಿ: ತೋಟ ಆರಂಭಿಸಲು ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ

ರೋಗ ಬಾಧೆಯು ಆರಂಭದಲ್ಲಿ ಬಿತ್ತನೆಯಾದ ಬೆಳೆಗೆ ಶೇ.50 ರಿಂದ 80 ರಷ್ಟು ಹಾಗೂ ತಡವಾಗಿ ಬಿತ್ತನೆಯಾದ ಬೆಳೆಗೆ ಶೇ.10 ರಿಂದ 20 ರಷ್ಟು ಕಂಡು ಬಂದಿರುತ್ತದೆ.

ಇದನ್ನೂ ಓದಿ: ರೇಷ್ಮೆಗೆ ಬಂಗಾರದ ಬೆಲೆ: ತಜ್ಞರ ಭವಿಷ್ಯ

ರೋಗ ಬಾಧೆಯು ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದ ಕಾರಣದಿಂದಾಗಿ ಅಧಿಕ ತೇವಾಂಶ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ರೋಗ ತೀವ್ರವಾಗಲು ಕಾರಣ.

ಇದನ್ನೂ ಓದಿ: ಸ್ವಯಂ ಉದ್ಯೋಗಕ್ಕೆ ಹೈನುಗಾರಿಕೆ, ಗೊಬ್ಬರ ತಯಾರಿಕೆ ತರಬೇತಿ – ಸಾಲ

ರೈತ ಬಾಂಧವರಿಗೆ ವಿಜ್ಞಾನಿಗಳು ಔಷಧಗಳ ಸಲಹೆ ನೀಡಿದ್ದಾರೆ. ಸ್ಟ್ರೇಪ್ಟೋಸಿಲಿನ್ 0.5 ಗ್ರಾಂ+ ಕಾಫರ್ ಆಕ್ಸಿಕ್ಲೋರೈಡ್ 2.5 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಸಿಂಪರಣೆ ಮಾಡಬೇಕು.

ಇದನ್ನೂ ಓದಿ: ಯೂರಿಯಾ ಬಳಸುವ ಮುನ್ನ ಎಚ್ಚರ: ತಜ್ಞರು ಕೊಟ್ಟ ಸಲಹೆ ಏನು?

ನಂತರ ಡಿಪೆನ್ ಕೋನಾಜೋಲ 1.0 ಎಂ.ಎಲ್ + ಅಸೆಟಾಮಿಪ್ರಿಡ್ 0. ಗ್ರಾಂ + ಬೋರ್ನ 1 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಸಿಂಪರಣೆ ಮಾಡಲು ಶಿಫಾರಸ್ಸು ಮಾಡಿದ್ದಾರೆ ಎಂದು ಬಾಗಲಕೋಟೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: ರೈತರ ಬೆಳೆ ರೈತರಿಂದಲೇ ಸಮೀಕ್ಷೆ: ಆ್ಯಪ್ ಬಿಡುಗಡೆ