ಈ ಬಾರಿ ನಿರೀಕ್ಷೆಯಂತೆ ಎಲ್ಲೆಡೆ ಉತ್ತಮ ಮಳೆಯಾಗಿರುವುದರಿಂದ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಕಡಿಮೆ ದರ ಎನ್ನುವ ಕಾರಣಕ್ಕೆ ಯೂರಿಯಾ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬಂದಿದೆ. ಹಾಗಂತ ಅಳತೆ ಮೀರಿ ಯೂರಿಯಾ ಬಳಸಿದರೆ ಇದ್ದ ಬೆಳೆಯೂ ನಷ್ಟವಾಗಲಿದೆ.

ಯೂರಿಯಾ ಗೊಬ್ಬರ ಬೆಳೆಗಳಿಗೆ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ. ಹಾಗಾಗಿಯೇ ರೈತರು ಚೆನ್ನಾಗಿ ಬೆಳೆದ ಬೆಳೆಗಳನ್ನು ರೋಗ ಬಾಧೆಗಳಿಂದ ಕಳೆದುಕೊಳ್ಳುತ್ತಿರುತ್ತಾರೆ ಅಥವಾ ಭೂಮಿಯ ಫಲವತ್ತತೆ ಕಳೆದುಕೊಂಡು ಬೆಳೆಗಳು ಬೆಳೆಯುವ ಮುನ್ನವೇ ಕುಬ್ಜವಾಗಿ ಬಿಡುತ್ತದೆ.

ಇದನ್ನೂ ಓದಿ-ಸ್ವಯಂ ಉದ್ಯೋಗಕ್ಕೆ ಹೈನುಗಾರಿಕೆ, ಗೊಬ್ಬರ ತಯಾರಿಕೆ ತರಬೇತಿ – ಸಾಲ

ಹಾಗಾದರೆ ಯೂರಿಯಾ ಬಳಸುವುದೇ ಬೇಡ ಅಂತಲ್ಲ. ಯೂರಿಯಾ ಗೊಬ್ಬರವನ್ನು ಯಾವ ರೀತಿ ಬಳಸಬೇಕು ಎನ್ನುವ ಬಗ್ಗೆ ಕೃಷಿ ಇಲಾಖೆ ಒಂದಷ್ಟು ಸಲಹೆಗಳನ್ನು ನೀಡಿದೆ. ರೈತರು ತಪ್ಪದೆ ಆ ಮಾಹಿತಿ ತಿಳಿದರೆ ಯೋಗ್ಯ ಕೃಷಿಯೊಂದಿಗೆ ಉತ್ತಮ ಇಳುವರಿ ಗಳಿಸಬಹುದು.

ಇದನ್ನೂ ಓದಿ-ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

ಯೂರಿಯಾ ಬಳಕೆ ಹೀಗಿರಲಿ

ಯೂರಿಯಾ ಅಧಿಕ ಬಳಕೆಯಿಂದ ಬೆಳೆಗಳು ಹುಲುಸಾಗಿ ಬೆಳೆದು, ಕೀಟ ಮತ್ತು ರೋಗ ಬಾಧೆಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಯೂರಿಯಾ ನೀರಿನಲ್ಲಿ ಬೇಗನೆ ಕರಗುತ್ತದೆ. ಭೂಮಿಯಲ್ಲಿ ಇಂಗಿ, ಗಾಳಿಯಲ್ಲಿ ಆವಿಯಾಗಿ ಪೋಷಕಾಂಶಗಳು ನಷ್ಟವಾಗಿ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ.

ಇದನ್ನೂ ಓದಿ-ಶಿಥಿಲ ಪಾಲಿಥೀನ್ ಶೀಟ್‍ಗಳ ಬದಲಾವಣೆಗೆ ಸಹಾಯಧನ

ಅಧಿಕ ಬಳಕೆಯಿಂದ ಮಣ್ಣಿನ ರಚನೆ ಹಾಳಾಗಿ, ಭೂಮಿಯ ಫಲವತ್ತತೆ ಕಡಿಮೆ ಆಗುತ್ತದೆ. ಅಲ್ಲದೇ ಕಾಳು ಕಟ್ಟುವಿಕೆ ಸೀಮಿತಗೊಂಡು ಇಳುವರಿ ಕಡಿಮೆ ಆಗುತ್ತದೆ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಅಪಾಯ ಇದೆ.

ಇದನ್ನೂ ಓದಿ-ರೇಷ್ಮೆಗೆ ಬಂಗಾರದ ಬೆಲೆ: ತಜ್ಞರ ಭವಿಷ್ಯ

ರೈತರು ಕೇವಲ ಯೂರಿಯಾ ರಸಗೊಬ್ಬರವನ್ನು ಬಳಸದೇ ಶಿಫಾರಸ್ಸಿನ ಅನ್ವಯ ಸಮತೋಲಿತ ರಸಗೊಬ್ಬರಗಳನ್ನು ಬಳಸಬೇಕು. ಅಂದರೆ ಕಾಂಪ್ಲೇಕ್ಸ್, ಡಿ.ಎ.ಪಿ. ಹಾಗೂ ಪೋಟ್ಯಾಶ್ ಗೊಬ್ಬರಗಳನ್ನು ಸಹ ಬಳಸಬೇಕು. ಮೇಲು ಗೊಬ್ಬರವಾಗಿ ಕೇವಲ ಒಂದು ಬಾರಿ ಮಾತ್ರ ಯೂರಿಯಾ ಗೊಬ್ಬರ ಬಳಸುವುದು ಸೂಕ್ತ.

ಇದನ್ನೂ ಓದಿ-ತೋಟ ಆರಂಭಿಸಲು ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ

ಯೂರಿಯಾ ಬಳಕೆಯ ಯಾವುದೇ ಮಾಹಿತಿಗಾಗಿ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳನ್ನು ಸಂಪರ್ಕಿಸಬೇಕು.

ಇದನ್ನೂ ಓದಿ-ಟಾರ್ಪಾಲಿನ (ತಾಡಪತ್ರಿ)ಗಾಗಿ ರೈತರಿಂದ ಅರ್ಜಿ ಆಹ್ವಾನ

ಖರೀದಿ ವೇಳೆ ಎಚ್ಚರ

ಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಒಂದು ವೇಳೆ ಆ ಗೊಬ್ಬರ ಕಳಪೆ ಅಥವಾ ದೋಷ ಪೂರಿತವಾಗಿದ್ದರೆ ಆ ರಶೀದಿ ಮೂಲಕ ಪರಿಹಾರ ಪಡೆಯಲು ಅನುಕೂಲ ಆಗುತ್ತದೆ. ಅಲ್ಲದೆ, ಕೃಷಿ ಪರಿಕರಗಳ ಮಾರಾಟಗಾರರೂ ರೈತರಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು.

ಇದನ್ನೂ ಓದಿ-ಉಚಿತವಾಗಿ ತೋಟ ಮಾಡಿ ನರೇಗಾ ಯೋಜನೆಯಡಿ ಹಣ ಗಳಿಸಿ

ರಸಗೊಬ್ಬರಗಳನ್ನು ಕಡ್ಡಾಯವಾಗಿ “ಪಾಯಿಂಟ್ ಆಫ್ ಸೇಲ್” ಮುಖಾಂತರವೇ ಮಾರಾಟ ಮಾಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಥವಾ ನಿಯಮ ಮೀರಿದರೆ ಪರವಾನಿಗೆ ಅಮಾನತ್ತು ಅಥವಾ ರದ್ದು ಮಾಡಿ, ಕಾನೂನು ಕ್ರಮ ಕೈಗೊಳುವ ಅವಕಾಶ ಕೃಷಿ ಇಲಾಖೆಗೆ ಇದೆ ಎಂದು ಜಂಟಿ ನಿರ್ದೇಶಕ ರಾಜಶೇಖರ.ಐ.ಬಿ ತಿಳಿಸಿದ್ದಾರೆ.