ಪರಿವೃತ್ತ ಪಾರ್ಶ್ವ ಕೋನಾಸನ ಎಂದರೆ ದೇಹವನ್ನು ತಿರುಗಿಸಿ ಮಾಡುವಂತ ಆಸನದ ಭಂಗಿಯಾಗಿದೆ. ಇದು ದೇಹದ ಒಳ ಅಂಗಗಳ ಶುದ್ಧೀಕರಣಕ್ಕೆ ಅತ್ಯಂತ ಸಹಾಯಕಾರಿ. ದಿನನಿತ್ಯ ಯೋಗಾಭ್ಯಾಸ ಮಾಡುವಾಗ ಕೆಲವೊಂದು twisting ಆಸನ ಮಾಡುವುದು ಅವಶ್ಯಕ.

ಯೋಗ ಎಂದರೇನು?

ವಿವಿಧ ರೀತಿಯ twisting ಆಸನಗಳನ್ನು ಮಾಡುವ ಸಮಯದಲ್ಲಿ ನಮ್ಮ ಸೊಂಟದ ಭಾಗದಿಂದ ಕತ್ತಿನವರೆಗೆ ದೇಹದ ಮದ್ಯಭಾಗವು ತಿರುಗುವುದರಿಂದ ಬೆನ್ನುಮೂಳೆ ಮತ್ತು ಬೆನ್ನಿನ ನರಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಇದರಿಂದ ದೇಹದ ನರಗಳಲ್ಲಿನ ಹಾಗೂ ಮಾಂಸಖಂಡಗಳಲ್ಲಿನ ಒತ್ತಡ ಕಡಿಮೆ ಮಾಡಲು ಸಹಾಯಕಾರಿ.

ಯೋಗ ಆರಂಭಿಸುವುದು ಹೇಗೆ?

ಮಾಡುವ ವಿಧಾನ

1) ನೇರವಾಗಿ ನಿಂತುಕೊಳ್ಳಿ ( ಸಮಸ್ಥಿತಿ)

2) ನಿಮ್ಮ ಕಾಲುಗಳ ನಡುವೆ 3-4 ಅಡಿಗಳಷ್ಟು ಅಂತರ ವಿರಲಿ ಎರಡು ಕೈ ಭುಜದ ಅಂತರಕ್ಕೆ ಮೇಲೆತ್ತಿ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ( ಪೂರಕ)

3) ದೇಹವನ್ನು ಬಲಗಡೆ ತಿರುಗಿಸಿಕೊಳ್ಳುತ್ತ ಬಲ ಪಾದ ಬಲಕ್ಕೆ ಮತ್ತು ಎಡಪಾದ ಒಳಕ್ಕೆ ತೀರುಗಿಸಿಕೊಳ್ಳಿ.

ಪಕ್ಕೆಲುಬಿನ ಕೊಬ್ಬು ಕರಗಿಸಲು ಪಾರ್ಶ್ವ ಕೋನಾಸನ

4) ಬಲ ಮಂಡಿಯನ್ನು ಮಡಚಿ ಉಸಿರನ್ನು ಹೊರಗೆ ಹಾಕುತ್ತಾ (ರೇಚಕ) ಎಡ ಹಸ್ತವನ್ನು ಬಲ ಪಾದದ ಹೊರಗೆ ಚಾಚಿ.

5) ಉಸಿರನ್ನು ತೆಗೆದು ಕೊಳ್ಳುತ್ತಾ (ಪೂರಕ) ಬಲಗೈ ತಲೆಯ ನೇರಕ್ಕೆ ಮೇಲಕ್ಕೆತ್ತಿ. ಇಲ್ಲಿ ನಿಮ್ಮ ಹಸ್ತ ಮತ್ತು ಪಾದದವರೆಗೆ ಒಂದೇ ಸರಳ ರೇಖೆಯಲ್ಲಿರಲಿ. ಬಲಹಸ್ತವನ್ನು ನೋಡುತ್ತ ಐದು ಬಾರಿ ಆಳವಾಗಿ ಉಸಿರಾಟ ಮಾಡಿ.

6) ನಂತರ ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲಕ್ಕೆ ಬಂದು ಇನ್ನೊಂದು ಬದಿಗೆ ಅಭ್ಯಾಸ ಮಾಡಿ.

ಥೈರಾಯಿಡ್, ಬೆನ್ನು, ಕುತ್ತಿಗೆ ನೋವು ಪರಿಹರಿಸಲು ಅರ್ಧ ಕಟಿ ಚಕ್ರಾಸನ

ಈ ಆಸನದಿಂದ ಉಪಯೋಗಗಳು

1) ದೇಹ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತದೆ.

2) ಕಾಲು, ಮಂಡಿ ಮತ್ತು ಮೊಣಕಾಲುಗಳ ಬಲವರ್ಧನೆಗೆ ಸಹಾಯಕ.

ತೂಕ ಇಳಿಸಲು ಸೂರ್ಯ ನಮಸ್ಕಾರ

3) ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

4) ಎದೆ ಮತ್ತು ಭುಜಗಳನ್ನು ವಿಸ್ತರಿಸುತ್ತದೆ.

5)ಕಿ ಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ.

ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಗೆ ಪಾದಹಸ್ತಾಸನ

ವಿಶೇಷ ಸೂಚನೆ

ತಲೆನೋವು, ಅಧಿಕ ಮತ್ತು ಕಡಿಮೆ ರಕ್ತದೊತ್ತಡ, ನಿದ್ರಾಹೀನತೆ ಸಮಸ್ಯೆ ಇರುವವರು ಈ ಆಸನ ಮಾಡಬಾರದು.