ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ, ಖಿನ್ನತೆಯಿಂದ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಇವುಗಳಿಗೆ ಚಿಕಿತ್ಸೆ ಪಡೆಯುವುದು ಸವಾಲಾಗಿದೆ. ಮನೆಯಲ್ಲಿಯೇ ಯೋಗದ ಸೇತುಬಂದಾಸನ ಅಭ್ಯಾಸ ಮಾಡಿದರೆ ಇಂಥ ಕಾಯಿಲೆಗಳಿಂದ ದೂರ ಇರಬಹುದು. ಸೇತುಬಂದಾಸನ ಪುನಶ್ಚೇತನ್ಯಕಾರಿ ಭಂಗಿಯಾಗಿದೆ.

ಮಾಡುವ ವಿಧಾನ:

1) ಶವಾಸನದಲ್ಲಿ ಬೆನ್ನಮೇಲೆ ಮಲಗಿ.

2) ಎರಡು ಮಂಡಿಗಳನ್ನು ಮಡಚಿ ಪಾದಗಳನ್ನು ಪ್ರಷ್ಠದ ಮುಂಭಾಗದಲ್ಲಿ ಇರಿಸಿ ಎರಡು ಕೈಗಳನ್ನು ಪ್ರಷ್ಠದ ಪಕ್ಕದಲ್ಲಿ ಇರಿಸಿ ಹಸ್ತ ಕೆಳಮುಖವಾಗಿ ಇರಲಿ.

3) ಆಳವಾಗಿ ಉಸಿರು ತೆಗೆದುಕೊಳ್ಳುತ್ತಾ (ಪೂರಕ) ನಿಧಾನವಾಗಿ ಸೊಂಟದ ಭಾಗವನ್ನು ಮೇಲೆತ್ತಿ. ಉಸಿರನ್ನು ಹೊರ ಹಾಕುತ್ತಾ (ರೇಚಕ) ಸೊಂಟದ ಭಾಗ ಕೆಳಕ್ಕೆ ತನ್ನಿ. ಇದೇ ರೀತಿ ಐದು ಬಾರಿ ಪುನರಾವರ್ತಿಸಿ.

4) ನಂತರ ಮತ್ತೆ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಸೊಂಟದ ಬಾಗವನ್ನು ಮೇಲೆತ್ತಿ. 30 ಸೆಕೆಂಡುಗಳ ಕಾಲ ಸರಳವಾಗಿ ಉಸಿರಾಟ ನಡೆಸಿ.

5) ನಂತರ ಉಸಿರನ್ನು ಹೊರಕ್ಕೆ ಹಾಕುತ್ತಾ (ರೇಚಕ) ಸೊಂಟದ ಬಾಗವನ್ನು ಕೆಳಗಡೆ ತಂದು ಕಾಲನ್ನು ನೇರ ಮಾಡಿ ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಉಪಯೋಗಗಳು:

1) ರಕ್ತ ಪರಿಚಲನೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

2) ನರಮಂಡಲವನ್ನು ಶಾಂತಗೊಳಸಲು ಉತ್ತಮ ಆಸನ.

3) ಒತ್ತಡ ಮತ್ತು ಖಿನ್ನತೆ ನಿವಾರಿಸುತ್ತದೆ.

4) ಥೈರಾಯಿಡ್ ಮತ್ತು ಪ್ಯಾರಾಥೈರಾಯ್ಡ್ , ಶ್ವಾಸಕೋಶ, ಹೃದಯ ಮತ್ತು ಹೊಟ್ಟೆಯನ್ನು ಉತ್ತೇಜಿಸುತ್ತದೆ.

5) ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದವರಿಗೆ ಉತ್ತಮ ಆಸನ.

6) ಆಸ್ತಮಾ ನಿವಾರಿಸುತ್ತದೆ.

7) ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ದಣಿದ ಬೆನ್ನನ್ನು ತ್ವರಿತವಾಗಿ ನಿವಾರಿಸುತ್ತದೆ. ಎದೆ, ಕುತ್ತಿಗೆ ಮತ್ತು ಬೆನ್ನು ಹುರಿಗೆ ಉತ್ತಮ ವಿಸ್ತರಣೆಯನ್ನು ನೀಡುತ್ತದೆ.

ಸೂಚನೆ:

ಕಡಿಮೆ ಬೆನ್ನಿನ ಸಂವೇದನೆ, ಭುಜದ ಗಾಯ ಮತ್ತು  ಕುತ್ತಿಗೆ ಗಾಯಗೊಂಡ ವ್ಯಕ್ತಿ ಹಾಗೂ ಗರ್ಬಿಣಿಯರು ಈ ಆಸನ ಮಾಡಬಾರದು.