ದಿನವಿಡಿ ಕುಳಿತು ಕೆಲಸ ಮಾಡುವಂಥವರಿಗೆ ಅತ್ಯಂತ ಉತ್ತಮವಾದ ಆಸನವಾಗಿದೆ. ಅಷ್ಟೇ ಅಲ್ಲದೆ ದೇಹದ ಕೆಳಭಾಗದಲ್ಲಿರುವ ಕೊಬ್ಬನ್ನು ಕರಗಿಸಲು ಹಾಗೂ ತೊಡೆಯ ಹೊರಗಿನ ಮತ್ತು ಒಳಭಾಗವನ್ನು ಶಕ್ತಿಯುತಗೊಳಿಸಲು ಸಹಾಯವಾಗುತ್ತದೆ.

ಮಾಡುವ ವಿಧಾನ:

1) ನೇರವಾಗಿ ದಂಡಾಸನದಲ್ಲಿ ನಿಂತುಕೊಳ್ಳಿ.

2) ನಿಮ್ಮ ಎರಡು ಪಾದಗಳ ನಡುವೆ ಸ್ವಲ್ಪ ಅಂತರವೀರಲಿ. ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎರಡು ಕೈಗಳನ್ನು ಭುಜದ ಅಂತರಕ್ಕೆ ಮೇಲೆತ್ತಿ. ಹಾಗೆಯೇ ಮಂಡಿಯನ್ನು ಮಡಚಿ ಕೂಳಿತುಕೊಳ್ಳುವ ಸ್ಥಿತಿಗೆ ಬನ್ನಿ.

3) ಈಗ ನಿಮ್ಮ ಎರಡು ಮೊಣಕೈ ಮಂಡಿಯ ಒಳಭಾಗದಲ್ಲಿ ಇರಿಸಿ. ಉಸಿರನ್ನು ಹೊರ ಹಾಕುತ್ತಾ (ರೇಚಕ) ಸಾಧ್ಯವಾದಷ್ಟು ಮಂಡಿಯನ್ನು ವಿಸ್ತರಿಸಿ. ನಿಮ್ಮ ಎರಡು ಹಸ್ತವನ್ನು ಕೂಡಿಸಿ ಸಂಸ್ಕಾರ ಮುದ್ರೆ ಸ್ಥಿತಿಗೆ ಬನ್ನಿ.ಇಲ್ಲಿ ನಿಮ್ಮ ಬೆನ್ನು ನೇರವಾಗಿರಲಿ. ಇದೇ ಸ್ಥಿತಿಯಲ್ಲಿ 30 ಸೆಕೆಂಡುಗಳ ಕಾಲ ಇರಿ.

4) ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಕೈಗಳನ್ನು ನೇರ ಮಾಡಿ ಮೇಲಕ್ಕೆ ಬಂದು ಶಿಥಿಲ ದಂಡಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಉಪಯೋಗಗಳು:

1) ದೇಹದ ಕೆಳಭಾಗದಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

2) ತೊಡೆಯ ಒಳಭಾಗ ಹಾಗೂ ಹೊರಭಾಗ ಶಕ್ತಿಯುತಗೊಳ್ಳುತ್ತದೆ.

3) ಬೆನ್ನು ಮತ್ತು ಕುತ್ತಿಗೆಯಭಾಗ ವಿಸ್ತರಿಸುತ್ತದೆ.

4) ಸೊಂಟ ಮತ್ತು ತೊಡೆಯ ಸಂದು ತೆರೆಯಲು ಸಹಾಯ ಮಾಡುತ್ತದೆ.

5) ಚಯಾಪಚಯ ಕ್ರಿಯೆ ಬಲಪಡಿಸುತ್ತದೆ.

6) ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ.

7) ಮಲಬದ್ಧತೆ ನಿವಾರಣೆ ಆಗುತ್ತದೆ.

ಸೂಚನೆ:

ಕೆಳಬೆನ್ನು ನೋವು, ಮಂಡಿಗಳಲ್ಲಿನ ನೋವು ಹಾಗೂ ತೊಡೆಯ ಭಾಗದಲ್ಲಿ ಯಾವುದೇ ಸಮಸ್ಯೆ ಇದ್ದರೆ ಈ ಆಸನ ಮಾಡಬಾರದು.

ಮತ್ತಷ್ಟು ಯೋಗದ ಪ್ರಕಾರಗಳು