ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಪವನ ಮುಕ್ತಾಸನ

ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಪವನ ಮುಕ್ತಾಸನ

ಶರೀರದಲ್ಲಿ ತುಂಬಿರುವ ಅನಾವಶ್ಯಕ ಗಾಳಿಯನ್ನು ಹೊರಹಾಕಲು ಉತ್ತಮ ಪವನ ಮುಕ್ತಾಸನ. ನಿರಂತರವಾಗಿ ಈ ಆಸನ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ಎರಡು ರೀತಿಯ ಆಸನಗಳು ಇವೆ. ಏಕಪಾದ ಪವನ ಮುಕ್ತಾಸನ ಮತ್ತು ಪೂರ್ಣ ಪವನ ಮುಕ್ತಾಸನ.

ಇತರ ಪ್ರಯೋಜನಗಳು:

1) ಮೂಲವ್ಯಾಧಿ ಸಮಸ್ಯೆ ಹೋಗಲಾಡಿಸಲು ಸಹಾಯಕಾರಿ.

2) ಪೈಲ್ಸ್, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆ ಆಗುತ್ತದೆ.

3) ಸೊಂಟದ ಪ್ರದೇಶದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

4) ಕೆಳಗಿನ ಬೆನ್ನಿನಲ್ಲಿ ಒತ್ತಡವನ್ನು ಸರಾಗಗೊಳಿಸುತ್ತದೆ.

5) ಇದು ತೊಡೆಯ, ಪ್ರಷ್ಠದ ಮತ್ತು ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ:

ಏಕ ಪಾದ ಪವನ ಮುಕ್ತಾಸನ

ಮೊದಲು ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ. ನಿಮ್ಮ ಬಲಗಾಲನ್ನು ಮಡಚಿ ಮಂಡಿಯನ್ನು ಎದೆಯ ಹತ್ತಿರ ತೆಗೆದುಕೊಂಡು ಬನ್ನಿ. ತೊಡೆಯು ಹೊಟ್ಟೆಗೆ ತಾಗುವಂತಿರಲಿ. ಎರಡು ಕೈಗಳ ಸಹಾಯದಿಂದ ಬಲಗಾಲನ್ನು ಹಿಡಿದುಕೊಂಡು ಮಂಡಿಯನ್ನು ಸಾಧ್ಯವಾದಷ್ಟು ಎದೆಯ ಹತ್ತಿರ ತನ್ನಿ. ಇದೇ ಭಂಗಿಯಲ್ಲಿ ಕನಿಷ್ಠ 10 ಸೆಕೆಂಡುಗಳ ಕಾಲ ಇರಿ. ನಂತರ ಕೈಗಳನ್ನು ಬಿಡಿಸಿ ಕಾಲನ್ನು ನೇರ ಮಾಡಿ ಸ್ಥಿತಿಗೆ ಬಂದು ಇನ್ನೊಂದು ಬದಿಗೆ ಪುನರಾವರ್ತಿಸಿ.

ಪೂರ್ಣ ಪವನ ಮುಕ್ತಾಸನ:

ಎರಡು ಕಾಲುಗಳನ್ನು ಮಡಚಿ ಕೈಗಳ ಸಹಾಯದಿಂದ ಕಾಲನ್ನು ಹಿಡಿದುಕೊಂಡು ತೋಡೆಯು ಹೊಟ್ಟೆಗೆ ತಾಗುವ ರೀತಿಯಲ್ಲಿ ಮಂಡಿಯನ್ನು ಎದೆಯ ಹತ್ತಿರ ತೆಗೆದುಕೊಂಡು ಬನ್ನಿ. ಈಗ ನಿಮ್ಮ ತಲೆಯನ್ನು ಮೇಲೆತ್ತಿ ಮೂಗನ್ನು ಮಂಡಿಯ ಮಧ್ಯದಲ್ಲಿ ತಾಗಿಸಬೇಕು. ಇದೇ ಸ್ಥಿತಿಯಲ್ಲಿ 10 ಸೆಕೆಂಡುಗಳ ಕಾಲ ಇರಿ. ಉಸಿರಾಟ ಸಹಜವಾಗಿರಲಿ. ನಂತರ ಕೈಗಳನ್ನು ಬಿಡಿಸಿ ಕಾಲುಗಳನ್ನು ಮುಂದಕ್ಕೆ ಚಾಚಿ ವಿಶ್ರಾಂತಿ ತೆಗೆದುಕೊಳ್ಳಿ.

ವಿಡಿಯೊ ಮೂಲಕ ಆಸನ ಅಭ್ಯಾಸ ಮಾಡಿ

Leave a reply

Your email address will not be published. Required fields are marked *