ಡಯಾಬಿಟಿಸ್ (ಮಧುಮೇಹ) ಮಾನವನ ಸಂಕುಲವನ್ನು ಅತಿಯಾಗಿ ಕಾಡುತ್ತಿರುವ ರೋಗವಾಗಿದೆ. ಮಧುಮೇಹ ರೋಗ ಅಂಟಿಕೊಳ್ಳಲು ಕಾರಣ ಇವತ್ತಿನ ಆಧುನಿಕ ಜೀವನ ಶೈಲಿ, ಆಹಾರದ ಪದ್ಧತಿಯಲ್ಲಿನ ಬದಲಾವಣೆ ಹಾಗೂ ಸರಿಯಾದ ವ್ಯಾಯಾಮದ ಅಭಾವ ಮತ್ತು ದಿನದ ಒತ್ತಡ ಕೂಡ ಈ ರೋಗವನ್ನು ಉಲ್ಬಣಿಸಲುತ್ತವೆ.

ಡಯಾಬಿಟಿಸ್ ರೋಗವನ್ನು ಕಡಿಮೆ ಮಾಡಲು ಪ್ರಾಣಾಯಾಮ, ಯೋಗ, ದ್ಯಾನ, ಹಾಗೂ ಯೋಗಿಕ ಅಭ್ಯಾಸಗಳನ್ನು ನಮ್ಮ ದಿನನಿತ್ಯ  ಜೀವನದಲ್ಲಿ  ಅಳವಡಿಸಿಕೊಂಡು ಅದನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಯೋಗಾಭ್ಯಾಸವನ್ನು ನಿಮ್ಮ ದಿನನಿತ್ಯದ ಕೆಲಸಗಳಿಗೆ ಅನುಗುಣವಾಗಿ ಬೆಳಿಗ್ಗೆ ಅಥವಾ ಸಂಜೆ ಒಂದೇ ಸಮಯದಲ್ಲಿ ಅಭ್ಯಾಸ ಮಾಡಬೇಕು.

ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಕೆಳಗಿನ ಆಸನಗಳನ್ನು ಅಭ್ಯಾಸ ಮಾಡಿ. ಕೊನೆಯಲ್ಲಿರುವ ವಿಡಿಯೊ ನೋಡಿ ಅಭ್ಯಾಸ ಮಾಡಬಹುದು.

1) ಪವನ ಮುಕ್ತಾಸನ

ಈ ಆಸನ ದಿನನಿತ್ಯ ಅಭ್ಯಾಸದಿಂದ ಮೇದೋಜೀರಕ ಗ್ರಂಥಿ, ಗುಲ್ಮ, ಹೊಟ್ಟೆ ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಹೊಟ್ಟೆಯಿಂದ ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಲು ಸಹಾಯಮಾಡುವ ಮೂಲಕ ಪ್ಲಾಟುಲೆನ್ಸ್ ಅನ್ನು ನಿವಾರಿಸುತ್ತದೆ. ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ.

2) ಪಾದ ಉತ್ತನಾಸನ

ಈ ಆಸನವು ಕೆಳಬೇನ್ನು, ಸೊಂಟ ಮತ್ತು ಕಾಲುಗಳ ಸ್ನಾಯುಗಳನ್ನು ಬಲಪಡಿಸಲು ಮತ್ತು ಟೋನ್ ಮಾಡಲು ಸಹಾಯ ಮಾಡುತ್ತದೆ. ಅಜೀರ್ಣದಿಂದ ಮಲಬದ್ಧತೆ ಮತ್ತು ಅನಿಲದಂತಹ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿ. ಇದು ನಿಮ್ಮ ಭಂಗಿಯನ್ನು ಸುಧಾರಿಸಿ ಮೂತ್ರ ಪಿಂಡಗಳ ಕಾರ್ಯ ನಿರ್ವಹಣೆಗೆ ಉತ್ತೇಜನ ನೀಡುತ್ತದೆ.

3) ಸೇತು ಬಂಧಾಸನ

ಬೆನ್ನಿನ ಒತ್ತಡವನ್ನು ನಿವಾರಿಸಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಈ ಆಸನವು ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಖಿನ್ನತೆ ಆತಂಕವನ್ನು ಕಡಿಮೆ ಮಾಡುತ್ತದೆ ಹಾಗು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.

4)  ಪಾದಂಗುಷ್ಠಾಸನ:

ಪಾದಂಗುಷ್ಠಾಸನ ನಮ್ಮ ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ. ಕಾಲು ಮತ್ತು ತೊಡೆಗಳ ಭಾಗಕ್ಕೆ ರಕ್ತ ಪರಿಚಲನೆ ಹೆಚ್ಚಿಸಿ ತೊಡೆಯ ಸಂದಿಯನ್ನು ತೆರೆಯಲು ಸಹಾಯ ಮಾಡುತ್ತದೆ.

5) ಭಸ್ತ್ರಿಕ ಪ್ರಾಣಾಯಾಮ

ಭಸ್ತ್ರಿಕ ಪ್ರಾಣಾಯಾಮ ದೇಹ ಮತ್ತು ಮನಸ್ಸನ್ನು ಉಲ್ಲಸಾಗೊಳಿಸುತ್ತದೆ. ಇಡಿ ದೇಹದ ಮೇಲೆ ಪುನರುತ್ಥಾನ ಮತ್ತು ಪುನರ್ರ್ ಯೌವ್ವನಗೊಳಿಸುವ ಪ್ರಭಾವವನ್ನು ಹೊಂದಿದೆ. ಸ್ಮರಣೆಯನ್ನು ಸುಧಾರಿಸುತ್ತದೆ. ರಕ್ತ ಪರಿಚಲನೆಯು ಉತ್ತೇಜಿಸಲ್ಪಟ್ಟು ತಲೆಗೆ ಹೆಚ್ಚಿನ ರಕ್ತ ಪೂರೈಕೆ ಆಗಿ ದೃಷ್ಠಿ ಮತ್ತು ಶ್ರವಣ ಶಕ್ತಿಯನ್ನು ಹಾಗೂ ಶ್ವಾಸಕೋಶವು ಬಲಗೊಳ್ಳುತ್ತದೆ.