ತೊಳುಗಳಲ್ಲಿನ ಬೊಜ್ಜು ಕರಗಿಸಲು ಸರಳವಾದ ಯೋಗಾಸನಗಳು

ತೊಳುಗಳಲ್ಲಿನ ಬೊಜ್ಜು ಕರಗಿಸಲು ಸರಳವಾದ ಯೋಗಾಸನಗಳು

ದೇಹದಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸಲು ಅನೇಕರು ವಿವಿಧ ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ. ಹೊಟ್ಟೆ , ಸೊಂಟ , ನಿತಂಬ , ತೋಳು , ಭುಜ ಮತ್ತು ಮೊಣಕೈ ಭಾಗದಲ್ಲಿ ಬೇಗ ಕೊಬ್ಬು ಶೇಖರಣೆಗೊಳ್ಳುತ್ತದೆ.

ದೇಹದಲ್ಲಿ ಸೇರಿಕೊಂಡ ಬೊಜ್ಜನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು. ಆದರೆ ಸೊಂಟ ಮತ್ತು ತೋಳುಗಳಲ್ಲಿನ ಕೊಬ್ಬನ್ನು ಕರಗಿಸುವುದು ಸ್ವಲ್ಪ ಕಷ್ಟ. ತೋಳುಗಳಲ್ಲಿ ಕೆಳಭಾಗದಲ್ಲಿ ಜೋಲುಬೀಳುವ ಕೊಬ್ಬು ಮುಜುಗರ ತರುತ್ತದೆ.

ಈ ಕೊಬ್ಬು ಮಹಿಳೆಯರಲ್ಲಿ ವಿಕಾರವಾಗಿ ಕಾಣುತ್ತದೆ. ಕೊಬ್ಬನ್ನು ಕರಗಿಸಲು ಉತ್ತಮ ರೀತಿಯ ಆಹಾರ ಕ್ರಮ ಅನುಸರಿಸುವುದರ ಜೊತೆಗೆ ಯೋಗಾಭ್ಯಾಸ ಕೂಡ ಕ್ರಮಬದ್ದವಾಗಿ ಅಭ್ಯಾಸ ಮಾಡುವುದು ಅತ್ಯಂತ ಅವಶ್ಯಕ. ಕೊಬ್ಬು ಕರಗಿಸುವ ವಿವಿಧ ಆಸನಗಳು ಇಲ್ಲಿವೆ.

1) ಭುಜ ಸಂಚಲನ

ವಜ್ರಾಸನ ಸ್ಥಿತಿಯಲ್ಲಿ ಬೆನ್ನು ನೇರವಾಗಿಸಿ ಕುಳಿತುಕೊಳ್ಳಿ. ಕೈಗಳನ್ನು ಒಂದೊಂದಾಗಿ ವೃತ್ತಾಕಾರವಾಗಿ ತಿರುಗಿಸಿ. ಬಲದಿಂದ ಎಡಕ್ಕೆ ಮತ್ತು ಎಡದಿಂದ ಬಲಕ್ಕೆ ಐದೈದುಬಾರಿ ಪನರಾವರ್ತಿಸಿ. ಇಲ್ಲಿ ಉಸಿರಾಟ ಮತ್ತು ಕೈಗಳ ಚಲನೆಗೆ ಹೊಂದಾಣಿಕೆ ಇರಲಿ. ಎರಡು ಕೈಗಳನ್ನು ಒಂದೇ ಬಾರಿಗೆ ಬಲದಿಂದ ಎಡಕ್ಕೆ ಮತ್ತು ಎಡದಿಂದ ಬಲಕ್ಕೆ ವೃತ್ತಾಕಾರವಾಗಿ 5 ಬಾರಿ ತಿರುಗಿಸಿ ನಂತರ ವಿಶ್ರಾಂತಿ ತೆಗೆದುಕೊಳ್ಳಿ.

3) ಸಮತೋಲನಾಸನ

ವಜ್ರಾಸನ ಸ್ಥಿತಿಗೆ ಬನ್ನಿ. ಎರಡು ಕೈಗಳನ್ನು ಮುಂದಕ್ಕೆ ಚಾಚಿ ನಿಮ್ಮ ಸಂಪೂರ್ಣ ದೇಹದ ಭಾರವನ್ನು ಹಸ್ತ ಮತ್ತು ಕಾಲ್ಬೆರಳುಗಳ ಮೇಲಿರಿಸಿ. ಇಲ್ಲಿ ನಿಮ್ಮ ದೇಹ ಒಂದೇ ಸರಳ ರೇಖೆಯಲ್ಲಿರಲಿ. ಇದೆ ಸ್ಥಿತಿಯಲ್ಲಿ 5 ಬಾರಿ ಆಳವಾಗಿ ಉಸಿರಾಟ ನಡೆಸಿ. ನಂತರ ವಜ್ರಾಸನ ಸ್ಥಿತಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳಿ.

4) ಉರ್ಧ್ವಮುಖ ಶ್ವಾನಾಸನ

ವಜ್ರಾಸನ ದಲ್ಲಿ ಕುಳಿತುಕೊಳ್ಳಿ . ಎರಡು ಕೈಗಳನ್ನು ಮುಂದಕ್ಕೆ ಚಾಚಿ ಚತುರಂಗ ದಂಡಾಸನ ಸ್ಥಿತಿಗೆ ಬನ್ನಿ. ಉಸಿರನ್ನು ತೆಗೆದುಕೊಳ್ಳುತ್ತಾ ದೇಹದ ಮೇಲ್ಭಾಗ ಮೇಲಕ್ಕೆತ್ತಿ  ಮೇಲಕ್ಕೆ ಅಥವಾ ಮುಂದಕ್ಕೆ ನೋಡುತ್ತಾ 5 ಬಾರಿ ಆಳವಾಗಿ ಉಸಿರಾಟ ಮಾಡಿ. ಮಂಡಿ ಮತ್ತು ತೊಡೆಯ ಭಾಗ ನೆಲದಿಂದ ಮೇಲಕ್ಕಿರಲಿ. ನಂತರ ಮತ್ತೆ ವಜ್ರಾಸನ ಸ್ಥಿತಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳಿ.

5) ಚತುರಂಗ ದಂಡಾಸನ

ವಜ್ರಾಸನ ಸ್ಥಿತಿಯಲ್ಲಿ ಬೆನ್ನು ನೇರವಾಗಿಸಿ ಕುಳಿತುಕೊಳ್ಳಿ. ಹಸ್ತಗಳನ್ನು ಮುಂದಕ್ಕೆ ಚಾಚಿ ಸಮತೋಲನ ಆಸನದ ಸ್ಥಿತಿಗೆ ಬನ್ನಿ. ಈಗ ನಿಧಾನವಾಗಿ ಮೊಣಕೈ ಮಡಚಿ ಸಂಪೂರ್ಣ ದೇಹ ಒಂದೇ ಸರಳ ರೇಖೆಯಲ್ಲಿ ಇರಲಿ. ದೇಹದ ಭಾರವನ್ನು ಹಸ್ತ ಮತ್ತು ಕಾಲ್ಬೆರಳುಗಳ ಮೇಲಿರುವಂತೆ ನೋಡಿಕೊಳ್ಳಿ. ಇದೆ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಆಳವಾಗಿ ಉಸಿರಾಟ ಮಾಡಿ

6) ವಶಿಷ್ಠಾಸನ

ವಜ್ರಾಸನ ದಿಂದ ಸಮತೋಲನಾಸನ ಸ್ಥಿತಿಗೆ ಬಂದು ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಬಲಗೈಯನ್ನು ನೇರವಾಗಿ ಮೇಲಕ್ಕೆತ್ತಿ. ಬಲ ಹಸ್ತವನ್ನು ನೋಡುತ್ತಾ 5 ಬಾರಿ ಆಳವಾಗಿ ಉಸಿರಾಟ ಮಾಡಿ ಇಲ್ಲಿ ನಿಮ್ಮ ದೇಹದ ಸಮತೋಲನವನ್ನು ಕಾಯ್ದುಕೊಳ್ಳಿ ನಂತರ ಬಲಗೈಯನ್ನು ಕೆಳಗಿಳಿಸಿ ಇದೆ ರೀತಿ ಇನ್ನೊಂದು ಕಡೆ ಪುನರಾವರ್ತಿಸಿ.

Leave a reply

Your email address will not be published. Required fields are marked *