ಯೋಗ ಎನ್ನುವುದು ಭಾರತೀಯ ಸಂಸ್ಕೃತಿಯ ಅತ್ಯುನ್ನತ ಜೀವನ ಪದ್ಧತಿ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜತೆಗೆ ಮಾನಸಿಕ ಸದೃಢತೆ, ಸುಂದರ ದೇಹ ಹೊಂದಲು ನೆರವಾಗುತ್ತದೆ. ಆರೋಗ್ಯ ಚಿಕಿತ್ಸೆಯಲ್ಲಿ ಯೋಗ ಚಿಕಿತ್ಸೆ ಕೂಡ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿಯಾಗುತ್ತಿದೆ.

ಹಾಗಾದರೆ ಯೋಗ ಮಾಡುವುದು ಯಾವಾಗ. ಯೋಗ ಮಾಡುವ ಮೊದಲು ಏನೆಲ್ಲ ತಯಾರಿ ಮಾಡಿಕೊಂಡಿರಬೇಕು ಎನ್ನುವುದು ಬಹುತೇಕರ ಪ್ರಶ್ನೆ. ನಿಜ ಯೋಗ ಮಾಡುವುದಕ್ಕೆ ಮೊದಲು ನಮ್ಮ ದೇಹವನ್ನು ಸಜ್ಜುಗೊಳಿಸಬೇಕು. ಅದಕ್ಕೆ ಕೆಲ ಕ್ರಮಗಳನ್ನು ಅನುಸರಿಸಬೇಕು.

ಇದನ್ನೂ ಓದಿ: ತೂಕ ಇಳಿಸಲು ಸೂರ್ಯ ನಮಸ್ಕಾರ

ಯೋಗಾಸನ ಮಾಡುವಾಗ ಗಮನಿಸಬೇಕಾದ ಕ್ರಮಗಳು

1) ಆಸನಾಭ್ಯಾಸಕ್ಕೆ ಮೊದಲು ಶೌಚಕ್ರಿಯೆ ಮುಗಿಸಿದ್ದರೆ ಒಳ್ಳೆಯದು.

2) ಶುದ್ಧವಾದ ಪರಿಸರ ಮತ್ತು ಏರು ತಗ್ಗುಗಳಿಲ್ಲದ ಸಮತಟ್ಟಾದ ನೆಲವನ್ನು ಆಯ್ಕೆ ಮಾಡಿಕೊಳ್ಳಿ.

ಇದನ್ನೂ ಓದಿ: ಪಕ್ಕೆಲುಬಿನ ಕೊಬ್ಬು ಕರಗಿಸಲು ಪಾರ್ಶ್ವ ಕೋನಾಸನ

3) ಬೆಳಗಿನ ಜಾವ ಅಥವಾ ಸಂಜೆಯ ಸಮಯದಲ್ಲಿ ಅಭ್ಯಾಸ ಮಾಡುವುದು ಹೆಚ್ಚು ಉತ್ತಮ ಮತ್ತು ಫಲಕಾರಿ.

4) ಸ್ನಾನದ ನಂತರ ಅಭ್ಯಾಸ ಮಾಡಿದರೆ ಶರೀರದ ಚಲನೆ ಸುಲಭವಾಗುತ್ತದೆ

5) ಶರೀರದ ಯಾವುದೇ ಭಾಗ ನೆಲಕ್ಕೆ ತಾಗದಂತೆ ಅಗತ್ಯವಾದ ಜಮಖಾನವನ್ನು ಹಾಸಿ ಅಭ್ಯಾಸ ಮಾಡುವುದು ಅವಶ್ಯಕ.

ಇದನ್ನೂ ಓದಿ: ಉಸಿರಾಟ ಸಾಮರ್ಥ್ಯ ಹೆಚ್ಚಿಸಲು ಅರ್ಧ ಚಕ್ರಾಸನ

6) ಊಟವಾದ ನಂತರ ಕನಿಷ್ಠ ನಾಲ್ಕು ಗಂಟೆಗಳ ಅವಧಿಯವರೆಗೆ ಆಸನಗಳ ಅಭ್ಯಾಸ ಬೇಡ.

7) ಲಘು ಉಪಹಾರ ಮಾಡಿದ ಎರಡು ಗಂಟೆಗಳ ನಂತರ ಅಭ್ಯಾಸ ಒಳ್ಳೆಯದು.

8) ಅಭ್ಯಾಸ ಆರಂಭಿಸುವುದಕ್ಕೂ ಸ್ವಲ್ಪ ಮೊದಲು ನೀರು ಸೇವಿಸುವುದು ಒಳ್ಳೆಯದು.

ಇದನ್ನೂ ಓದಿ: ಥೈರಾಯಿಡ್, ಬೆನ್ನು, ಕುತ್ತಿಗೆ ನೋವು ಪರಿಹರಿಸಲು ಅರ್ಧ ಕಟಿ ಚಕ್ರಾಸನ

9) ಸಾಧ್ಯವಾದಷ್ಟು ಕನಿಷ್ಠ ಹಾಗೂ ಸಡಿಲ ಉಡುಪು ಧರಿಸಿ. ಬಿಗಿಯಾದ ಉಡುಪು ಬೇಡ.

10) ಶರೀರ ಬೆವರಿದರೆ ಫ್ಯಾನ್ ಬಳಸುವುದು ಬೇಡ. ಮೈ ಬೆವರಲಿ.

11) ಅಭ್ಯಾಸದ ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಸ್ನಾನ ಮಾಡಿದರೆ ಮೈ ಮನಸ್ಸು ಹಗುರವಾಗುತ್ತದೆ.

12) ಶರೀರ ಹೆಚ್ಚು ದಣಿದಿರುವಾಗ, ಮನಸ್ಸು ತುಂಬಾ ಉದ್ವೇಗ, ಒತ್ತಡ ಸ್ಥಿತಿಯಲ್ಲಿರುವಾಗ ಅಭ್ಯಾಸ ಬೇಡ.

ಇದನ್ನೂ ಓದಿ: ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಗೆ ಪಾದಹಸ್ತಾಸನ

13) ಎಷ್ಟು ಆಸನವನ್ನು ಮಾಡುತ್ತೇವೆ ಎನ್ನುವುದು  ಮುಖ್ಯವಲ್ಲ. ಮಾಡಿದಷ್ಟೂ ಆಸನ ಎಷ್ಟು ಪರಿಣಾಮಕಾರಿಯಾಗಿ, ಸಮರ್ಪಕವಾಗಿ ಮಾಡುತ್ತೇವೆ ಎನ್ನುವುದು ಮುಖ್ಯ.

14) ಆಸನದಲ್ಲಿ ಆರಂಭದಲ್ಲಿ ಪರಿಪೂರ್ಣತೆ ಸಾಧ್ಯವಿಲ್ಲ, “ಅಭ್ಯಾ ಸಾತ್ ಸಿದ್ದಿಮಾಪ್ನೋತಿ ‘ ನಿರಂತರ ಅಭ್ಯಾಸದಿಂದ ಅದರಲ್ಲಿ ಸಿದ್ದಿ ದೊರಕುತ್ತದೆ.

15) ಬಲವಂತವಾಗಿ ಅಭ್ಯಾಸ ಮಾಡುವ ಬದಲು ಪ್ರೀತಿಯಿಂದ ಅಭ್ಯಾಸ ಮಾಡುವುದು ಒಳ್ಳೆಯದು.

ಇದನ್ನೂ ಓದಿ: ಯೋಗ ಎಂದರೇನು?

16) ಎಲ್ಲರೂ ಎಲ್ಲಾ ಆಸನ ಅಭ್ಯಾಸ ಮಾಡಬಹುದೆಂಬ ತಪ್ಪುಕಲ್ಪನೆ ಬೇಡ.

17) ಹೃದಯ ತೊಂದರೆ, ರಕ್ತದೊತ್ತಡ, ಸ್ಪಾಂಡಿಲೈಟಿಸ್ ಇತ್ಯಾದಿ ತೊಂದರೆ ಇರುವವರು ಕೆಲವು ಆಸನಗಳ ಭ್ಯಾಸ ಮಾಡಬಾರದು.

18) ಯಾವ ತೊಂದರೆಗಳಿಗೆ ಯಾವ ಆಸನ ಮಾಡಬಾರದು ಎಂದು ತಿಳಿದುಕೊಳ್ಳುವುದು ಮುಖ್ಯ.

19) ಅನಾರೋಗ್ಯ ಸಂದರ್ಭದಲ್ಲಿ ಅಂದರೆ ಜ್ವರ, ನೆಗಡಿಯಿಂದಾಗಿ ಮೈ, ಕೈ ನೋವು ಇರುವಾಗ ಅಭ್ಯಾಸ ಬೇಡ.

ಇದನ್ನೂ ಓದಿ: ತೂಕ ಇಳಿಸಲು ಸೂರ್ಯ ನಮಸ್ಕಾರ

20) ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಆಸನಗಳ ಅಭ್ಯಾಸ ಬೇಡ.

21) ಗರ್ಭಿಣಿಯರು ವೈದ್ಯರು ಹಾಗೂ ಯೋಗ ತಜ್ಞರ ಸಲಹೆ ಪಡೆದು ಅಭ್ಯಾಸ ಮಾಡುವುದು ಒಳ್ಳೆಯದು.