ದೇಹದ ಕೊಬ್ಬು ಕರಗಿಸಬೇಕು ಎನ್ನುವವರಿಗೆ ಮಾರ್ಶ್ವ ಕೋನಾಸನ ಕೂಡ ಉಪಯುಕ್ತ ಆಸನವಾಗಿದೆ. ದೇಹದ ಪಕ್ಕೆಲುಬಿನ ಕೊಬ್ಬು ಕರಗಿಸಲು ಈ ಆಸನ ನೆರವಾಗುತ್ತದೆ. ಇದು ಸರಳ ಆಸನವಾಗಿದ್ದು, ಹೊಸದಾಗಿ ಯೋಗಾಸನ ಮಾಡಬೇಕು ಎನ್ನುವವರು ಕಷ್ಟವಿಲ್ಲದೆ ಮಾಡಬಹುದು.

ಉಸಿರಾಟ ಸಾಮರ್ಥ್ಯ ಹೆಚ್ಚಿಸಲು ಅರ್ಧ ಚಕ್ರಾಸನ

ಪಾರ್ಶ್ವ ಕೋನಾಸನ ಎಂದರೆ ದೇಹದ ಬದಿಗೆ ಬಾಗಿ ಮಾಡುವಂಥ ಆಸನವಾಗಿದೆ. ಈ ಆಸನದ ದಿನನಿತ್ಯ ಅಭ್ಯಾಸದಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು. ಈ ಆಸನ ಹೇಗೆ ಮಾಡಬಹುದು ಎನ್ನುವುದನ್ನು ತಿಳಿಯಲು ಈ ಕೆಳಗಿನ ವಿಡಿಯೊ ನೋಡಿ.

ತೂಕ ಇಳಿಸಲು ಸೂರ್ಯ ನಮಸ್ಕಾರ

ಥೈರಾಯಿಡ್, ಬೆನ್ನು, ಕುತ್ತಿಗೆ ನೋವು ಪರಿಹರಿಸಲು ಅರ್ಧ ಕಟಿ ಚಕ್ರಾಸನ

ಪಾರ್ಶ್ವ ಕೋನಾಸನದ ಉಪಯೋಗಗಳು

1) ಈ ಆಸನದಿಂದ ಕಾಲುಗಳು ಸದೃಢವಾಗುತ್ತದೆ.

2) ಮಂಡಿ ಮತ್ತು ತೊಡೆಗಳ ತೊಂದರೆ ನಿವಾರಣೆಯಾಗುತ್ತದೆ.

3) ಪಕ್ಕೆಲುಬಿನ ಕೊಬ್ಬು ಕರಗುತ್ತದೆ.

4) ಮಲಬದ್ಧತೆ ನಿವಾರಣೆ.

5) ಬೆನ್ನು ನೋವು ನಿವಾರಣೆ.

6) ಲಿವರ್ ಮತ್ತು ಮೇದೋಜೀರಕ ಗ್ರಂಥಿ ಉತ್ತೇಜನ ಗೊಳ್ಳುವುದು.

ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಗೆ ಪಾದಹಸ್ತಾಸನ

ಪಾರ್ಶ್ವ ಕೋನಾಸನ ಮಾಡುವ ಮುನ್ನ ಎಚ್ಚರಿಕೆಗಳು

ಅಧಿಕ ರಕ್ತದೊತ್ತಡದಿಂದ ಬಳಲುವ ಜನರು, ಹೊಟ್ಟೆಯ ಯಾವುದೇ ಭಾಗದ ಶಸ್ತ್ರಚಿಕಿತ್ಸೆ, ಸ್ಲೀಪ್ ದಿಸ್ಕ್ ಆಗಿರುವವರು, ಮಹಿಳೆಯರು ಮುಟ್ಟಿನ ಅವಧಿಯಲ್ಲಿ, ಗರ್ಭಿಣಿಯರು ಹಾಗೂ ಹೃದಯ ತೊಂದರೆ ಇರುವವರು ಈ ಆಸನ ಮಾಡಬಾರದು.

ಯೋಗ ಎಂದರೇನು?