ಉಷ್ಟ್ರ ಎಂದರೆ ಒಂಟೆ. ಒಂಟೆಯನ್ನು ಹೋಲುವಂತಹ ಯೋಗದ ಭಂಗಿ. ಇದು ನಮ್ಮ ದೇಹವನ್ನು ಶಕ್ತಿಯುತ ಗೊಳಿಸುವುದಲ್ಲದೆ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ.

ಮಾಡುವ ವಿಧಾನ:

ಪ್ರಕಾರ 1

1) ವಜ್ರಾಸನದಲ್ಲಿ ಕುಳಿತುಕೊಳ್ಳಿ. (ವಿಡಿಯೊ ನೋಡಿ)

2) ಈಗ ವಜ್ರಾಸನ ದಿಂದ ಮೇಲೆ ಬಂದು ನಿಮ್ಮ ಮಂಡಿಯ ಮೇಲೆ ನಿಂತುಕೊಳ್ಳಿ. ಎರಡು ಮಂಡಿ ಭುಜದಷ್ಟು ಅಗಲವಾಗಿರಲಿ.

3) ನಿಮ್ಮ ಎರಡು ಹಸ್ತಗಳನ್ನು ಸೊಂಟದ ಮೇಲಿರಿಸಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎದೆಯ ಭಾಗವನ್ನು ವಿಸ್ತರಿಸುತ್ತಾ ಹಿಂದಕ್ಕೆ ಭಾಗಿ. ನಿಮ್ಮ ಕುತ್ತಿಗೆಯನ್ನು ಹಿಂದಕ್ಕೆ ಚಾಚಿ. ಇದೇ ಸ್ಥಿತಿಯಲ್ಲಿ 30 ಸೆಕೆಂಡುಗಳ ಕಾಲ ಹಾಗೆಯೇ ಇರಿ.

4) ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಧಾನವಾಗಿ ಮಧ್ಯಕ್ಕೆ ಬಂದು ಕೈಯನ್ನು ಕೆಳಗಡೆ ಇಳಿಸಿ ವಜ್ರಾಸನ ಸ್ಥಿತಿಗೆ ಬನ್ನಿ.

ಪ್ರಕಾರ 2

1) ಮೊದಲು ಹೇಳಿದ ಹಾಗೆ ಮಂಡಿಯ ಮೇಲೆ ನಿಂತು ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಹಿಂದಕ್ಕೆ ಭಾಗಿ. ಕೈ ಹಸ್ತಗಳಿಂದ ಹಿಮ್ಮಡಿಗಳನ್ನು ಹಿಡಿದುಕೊಳ್ಳಿ. ಸೊಂಟವನ್ನು ಮುಂದಕ್ಕೆ ದೂಡುತ್ತಾ ಕತ್ತನ್ನು ಹಿಂದಕ್ಕೆ ಚಾಚಿ. ಇಲ್ಲೂ ಕೂಡಾ 30 ಸೆಕೆಂಡುಗಳ ಕಾಲ ಇರಿ.

2) 30 ಸೆಕೆಂಡು ಆದನಂತರ ಉಸಿರನ್ನು ಹೊರಕ್ಕೆ ಹಾಕುತ್ತಾ (ರೇಚಕ ) ಮೇಲಕ್ಕೆ ಬಂದು ವಜ್ರಾಸನ ಸ್ಥಿತಿಗೆ ಬನ್ನಿ.

ತಲೆ ನೋವು ನಿವಾರಿಸಲು ಮರ್ಜರಿ ಆಸನ

ಆಸ್ತಮಾ ನಿವಾರಣೆಗೆ ರಾಮಬಾಣ ಅರ್ಧ ಮತ್ಸೇಂದ್ರಾಸನ

ಉಪಯೋಗಗಳು:

1) ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ.

2) ಬೆನ್ನು ಮತ್ತು ಭುಜಗಳನ್ನು ಶಕ್ತಿಯುತಗೊಳಿಸುತ್ತದೆ.

3) ಬೆನ್ನು ನೋವನ್ನು ನಿವಾರಿಸುತ್ತದೆ.

4) ಉಸಿರಾಟದ ತೊಂದರೆ, ಅಸ್ತಮಾ, ಉಬ್ಬಸ ನಿವಾರಣೆಗೆ ಪೂರಕ.

5) ಹೊಟ್ಟೆ ಮತ್ತು ಎದೆಯ ಭಾಗ ವಿಸ್ತಾರವಾಗುವುದು.

6) ಅಜೀರ್ಣ ಮತ್ತು ಮಲಬದ್ಧತೆ ನಿವಾರಣೆಗೆ ಉತ್ತಮ ಆಸನ.

7) ತಲೆಯ ಭಾಗಕ್ಕೆ ಹೆಚ್ಚಿನ ರಕ್ತ ಸಂಚಾರವಾಗಿ ನಮ್ಮ ಸ್ಮರಣಶಕ್ತಿ, ಗ್ರಹಣಶಕ್ತಿ ಮತ್ತು ಏಕಾಗ್ರತೆ ಹೆಚ್ಚುವುದು.

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ವಕ್ರಾಸನ

ಸೂಚನೆ:

ಅಧಿಕ ಬೆನ್ನು ನೋವು ಮತ್ತು ಕುತ್ತಿಗೆ ನೋವು, ಅಧಿಕ ಮತ್ತು ಕಡಿಮೆ ರಕ್ತದೊತ್ತಡ ಇರುವವರು ಈ ಆಸನ ಮಾಡಬಾರದು.