ನಮ್ಮ ದೇಹವನ್ನು ಪಾದಂಗುಷ್ಠದಿಂದ ಹಣೆಯವರೆಗಿನ ಭಾಗವನ್ನು ಪೂರ್ವಭಾಗದ ಎಂದು ಕರೆಯಲಾಗಿದೆ. ಪೂರ್ವೋತ್ತಾನಾಸನ ಇದು ಸಂಸ್ಕೃತದ ಶಬ್ದವಾಗಿದೆ. ಪೂರ್ವ ಎಂದರೆ ಪೂರ್ವ ದಿಕ್ಕು, ಉತ್ತಾನ ಎಂದರೆ ತೀವ್ರವಾಗಿ ಹಿಗ್ಗುವಿಕೆ ಮತ್ತು ಆಸನ ಎಂದರೆ ಭಂಗಿ. ಈ ಆಸನ ದಿನನಿತ್ಯ ಅಭ್ಯಾಸದಿಂದ ನಮ್ಮ ಬೆನ್ನು, ಕಾಲುಗಳು,ಮತ್ತು ಮಣಿಕಟ್ಟಿನ ಭಾಗಗಳು ಬಳಗೊಳ್ಳುತ್ತದೆ. (ಕೊನೆಯಲ್ಲಿ ವಿಡಿಯೊ ನೋಡಬಹುದು)

ಮಾಡುವ ವಿಧಾನ:

1) ಸ್ಥಿತಿ ದಂಡಾಸನದಲ್ಲಿ ಕಾಲನ್ನು ನೇರಮಾಡಿ ಕುಳಿತುಕೊಳ್ಳಿ. ನಿಮ್ಮ ಎರಡು ಹಸ್ತ ಸೊಂಟದ ಹಿಂಭಾಗದಲ್ಲಿ ಇಡಿ.ಕೈ ಬೆರಳು ಒಳಮುಖವಾಗಿ ಇರಲಿ. ನಿಮ್ಮ ಮಂಡಿಯನ್ನು ಮಡಚಿ ಸಂಪೂರ್ಣ ಪಾದ ನೆಲದಮೇಲೆ ಇಡಿ.

2) ಈಗ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಪಾದದ ಒಳಭಾಗ ಮತ್ತು ಹಸ್ತವನ್ನು ನೆಲದಮೇಲೆ ಉರುತ್ತಾ ಸೊಂಟದ ಭಾಗವನ್ನು ಮೇಲೆತ್ತಿ. ಇಲ್ಲಿ ನಿಮ್ಮ ಸಂಪೂರ್ಣ ದೇಹ ಭೂಮಿಗೆ ಸಮಾನಾಂತರವಾಗಿ ಇರಲಿ.

3) ನಿದಾನವಾಗಿ ಉಸಿರನ್ನು ಹೊರ ಹಾಕುತ್ತಾ (ರೇಚಕ) ತಲೆಯನ್ನು ಹಿಂದಕ್ಕೆ ಚಾಚಿ. ಇದೇ ಸ್ಥಿತಿಯಲ್ಲಿ ಐದು ಬಾರಿ ಆಳವಾದ ಉಸಿರಾಟ ಮಾಡಿ.

4) ನಂತರ ಸೊಂಟದ ಭಾಗವನ್ನು ನಿಧಾನವಾಗಿ ಕೆಳಗಿಳಿಸಿ. ಶಿಥಿಲ ದಂಡಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಇದನ್ನೂ ಓದಿ: ವಾತ, ಬೆನ್ನು ನೋವು ಪರಿಹಾರಕ್ಕೆ ದಂಡಾಸನ

ಇದನ್ನೂ ಓದಿ: ತೊಡೆಯ ಬೊಜ್ಜು ಕರಗಿಸಲು ಈ ಅಭ್ಯಾಸ ಮಾಡಿ

ಉಪಯೋಗಗಳು:

1) ಬೆನ್ನು, ಕಾಲುಗಳು ಮತ್ತು ಮಣಿಕಟ್ಟಿನ ಭಾಗಗಳು ಬಲಗೊಳ್ಳುತ್ತದೆ.

2) ಪಾದದ ಮುಂಭಾಗ, ಎದೆ ಮತ್ತು ಭುಜಗಳಿಗೆ ಹೆಚ್ಚಿನ ಹಿಗ್ಗುವಿಕೆ ನೀಡುತ್ತದೆ.

3) ಮನಸ್ಸನ್ನು ಶಾಂತಗೊಳಿಸುತ್ತದೆ.

4) ಖಿನ್ನತೆಯನ್ನು ಹೋಗಲಾಡಿಸುತ್ತದೆ.

ಇದನ್ನೂ ಓದಿ: ಬುದ್ಧಿ ಶಕ್ತಿ ಚುರುಕಾಗಲು ಏಕ ಪಾದ ಉತ್ಕಟಾಸನ

ಸೂಚನೆಗಳು:

ಮಣಿಕಟ್ಟಿನ ಗಾಯ ಮತ್ತು ಕುತ್ತಿಗೆಯ ಗಾಯ ಆಗಿರುವಂಥವರು ಈ ಆಸನ ಮಾಡಬಾರದು.

ಲೇಖನ: ಶ್ರೀ ಗಣೇಶ, ಯೋಗ ತರಬೇತುದಾರ.