ತೊಡೆಯ ಬೊಜ್ಜು ಕರಗಿಸಲು ಈ ಅಭ್ಯಾಸ ಮಾಡಿ

ತೊಡೆಯ ಬೊಜ್ಜು ಕರಗಿಸಲು ಈ ಅಭ್ಯಾಸ ಮಾಡಿ

ಕೆಲವರಿಗೆ ತೊಡೆಗಳೂ ದಪ್ಪವಾಗಿ ನಡೆದಾಡಲು ತೊಂದರೆ ಆಗುತ್ತದೆ. ತೊಡೆ ಭಾಗದಲ್ಲಿ ಬೊಜ್ಜು ಶೇಖರಣೆಗೊಳ್ಳುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಅಂತವರಿಗೆ ಸರಳ ಪರಿಹಾರ ಇಲ್ಲಿದೆ. ಯೋಗದ ಅಭ್ಯಾಸದಿಂದ ತೊಡೆ ಭಾಗದಲ್ಲಿ ಬೊಜ್ಜು ಕರಗುವುದಲ್ಲದೆ ಗೂನು ಬೆನ್ನು ಸಮಸ್ಯೆ ಸಹ ನಿವಾರಣೆ ಆಗುತ್ತದೆ. ಕಾಲುಗಳು ಸದೃಢವಾಗುತ್ತವೆ.

ಉತ್ಕಟಾಸನ
ಉತ್ಕಟಾಸನ ಎಂದರೆ ಕುರ್ಚಿ ಎಂದರ್ಥ ಸೂಚಿಸುತ್ತದೆ. ಕುರ್ಚಿಯ ರೀತಿಯಲ್ಲಿ ಕೂರುವ ಯೋಗದ ಒಂದು ಭಂಗಿ ಇದಾಗಿದೆ.

ಇದನ್ನೂ ಓದಿ: ಯೋಗ ಆರಂಭಿಸುವುದು ಹೇಗೆ?

ಮಾಡುವ ವಿಧಾನ

1) ನೇರವಾಗಿ ಸ್ಥಿತಿ ತಾಡಾಸನದಲ್ಲಿ ನಿಂತುಕೊಳ್ಳಿ.

2) ಎರಡು ಪಾದಗಳ ನಡುವೆ ಅರ್ಧ ಅಡಿಗಳಷ್ಟು ಅಂತರವಿರಲಿ.

3) ನಿದಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎರಡು ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆತ್ತಿ.

4) ಈಗ ನಿದಾನವಾಗಿ ಉಸಿರನ್ನು ಹೊರ ಹಾಕುತ್ತಾ ( ರೇಚಕ) ಮಂಡಿಯನ್ನು ಬಗ್ಗಿಸಿ ಕುರ್ಚಿಯ ಹಾಗೆ ಕುತುಕೊಳ್ಳುವ ಸ್ಥಿತಿಗೆ ಬನ್ನಿ. ಇಲ್ಲಿ ನಿಮ್ಮ ಹಸ್ತದಿಂದ ಸೊಂಟದವರೆಗೆ ಒಂದೇ ಸರಳ ರೇಖೆಯಲ್ಲಿರಲಿ. ಇದೇ ಸ್ಥಿತಿಯಲ್ಲಿ ಐದು ಬಾರಿ ಆಳವಾದ ಉಸಿರಾಟ ಮಾಡಿ.

5) ಉಸಿರಾಟ ಆದ ನಂತರ ಉಸಿರನ್ನು (ಪೂರಕ) ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿ.

6) ಈಗ ಉಸಿರನ್ನು ಹೊರ ಹಾಕುತ್ತಾ (ರೇಚಕ)  ನಿಧಾನವಾಗಿ ಎರಡು ಕೈಗಳನ್ನು ಕೆಳಗಡೆ ತಂದು ಶಿಥಿಲ ತಾಡಾಸನದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ.

ಇದನ್ನೂ ಓದಿ: ಕಾಲು, ಬೆನ್ನು ನೋವು ನಿವಾರಣೆಗೆ ಪರೀವೃತ್ತ ತ್ರಿಕೋನಾಸನ

ವಿಡಿಯೊ ಮೂಲಕ ಆಸನ ಅಭ್ಯಾಸ ಮಾಡಿ

ಉಪಯೋಗಗಳು

1) ಗೂನು ಬೆನ್ನು ಮಾಯವಾಗಿ ಬೆನ್ನು ನೇರವಾಗುತ್ತದೆ.

2) ಆಸ್ತಮ ಸಮಸ್ಯೆ ನಿವಾರಣೆ.

3) ಕಾಲುಗಳು ಬಲಿಷ್ಠಗೊಳ್ಳುವುದು.

4) ಉಸಿರಾಟದ ಕ್ರಮ ದೀರ್ಘ ಗೊಳ್ಳುವುದು.

5) ಹೊಟ್ಟೆ ಮತ್ತು ತೊಡೆಗಳ ಕೊಬ್ಬಿನಾಂಶ ಕರಗುವುದು.

6) ಮಲಬದ್ಧತೆ ಮತ್ತು ಪೈಲ್ಸ್ ನಿವಾರಣೆಗೆ ಉತ್ತಮ ಆಸನ.

7) ಕಾಲುಗಳಲ್ಲಿನ ದೋಷಗಳ ನಿವಾರಣೆ .

ಇದನ್ನೂ ಓದಿ: ಸೊಂಟದ ಬೊಜ್ಜು ಕರಗಿಸಲು ತ್ರಿಕೋನಾಸನ

ಸೂಚನೆ

ತಲೆನೋವು, ನಿದ್ರಾಹೀನತೆ, ಕಡಿಮೆ ರಕ್ತದೊತ್ತಡ ಇರುವವರು ಉತ್ಕಟಾಸನ ಅಭ್ಯಾಸ ಮಾಡಬಾರದು.

Leave a reply

Your email address will not be published. Required fields are marked *