ಕೊರೊನಾ ಬಂದ ಮೇಲೆ ನಮ್ಮ ಅಡುಗೆ ಪದ್ಧತಿಯ ಅರಿವು ಹೆಚ್ಚಾಗಿದೆ. ಇಷ್ಟು ದಿನ ಅಂಗಡಿಯಲ್ಲಿ ಸಿಗುತ್ತಿದ್ದ ಉತ್ತರ ಕರ್ನಾಟಕ ಶೈಲಿಯ ಶೇಂಗಾ ಚಟ್ನಿ, ಕರಗಾಯಿ, ಮೆಣಸಿನಹಿಂಡಿ ಈಗ ಅಷ್ಟಾಗಿ ಸಿಗುತ್ತಿಲ್ಲ. ಸಿಕ್ಕರೂ ಪ್ಯಾಕೆಟ್ ನಲ್ಲಿರುವುದು ತಿನ್ನಲು ಕೊರೊನಾ ಭಯ.

ಹಾಗಂತ ನಮ್ಮ ಉತ್ತರ ಕರ್ನಾಟಕ ಶೈಲಿಯ ರುಚಿ ಖಾದ್ಯಗಳನ್ನು ತಿನ್ನದೆ ಇರಲು ಆಗುವುದೇ, ನಾಲಗೆ ಕೇಳಬೇಕಲ್ಲ. ಎಷ್ಟೋ ದಿನಗಳಿಂದ ಶೇಂಗಾ ಚಟ್ನಿ, ಕರಗಾಯಿ ತಿನ್ನಬೇಕು. ರುಚಿಯನ್ನು ಆಸ್ವಾಧಿಸಬೇಕು ಎನ್ನುವವರಿಗಾಗಿ ಈ ಲೇಖನ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು

ಶೇಂಗಾ ಚಟ್ನಿ, ಮೆಣಸಿನ ಹಿಂಡಿ, ಕರಗಾಯಿ ರುಚಿ ತಿಂದವರೇ ಬಲ್ಲರು. ಉತ್ತರ ಕರ್ನಾಟಕದ ಅಡುಗೆ ಖಾರ ಎಂದು ಬಾಯಿ ತೆರೆಯುವವರು ಕೂಡ ಒಮ್ಮೆ ಶೇಂಗಾ ಚಟ್ನಿ, ಕರಗಾಯಿ ತಿಂದರೆ, ಮತ್ತೆಂದರೂ ಮರೆಯುವುದಿಲ್ಲ. ಅಷ್ಟು ರುಚಿ.

ಇದನ್ನೂ ಓದಿ: ಕೊರೊನಾ ಎದುರಿಸಲು ಮನೆಯಲ್ಲೇ ಶಕ್ತಿ ವೃದ್ಧಿಸಿಕೊಳ್ಳಿ: ಇಲ್ಲಿದೆ ವೈದ್ಯರ ಸಲಹೆ

ಈ ಖಾದ್ಯಗಳನ್ನು ಮಾಡಲು ದೊಡ್ಡ ತರಬೇತಿ ಏನೂ ಬೇಕಾಗಿಲ್ಲ. ಮನೆಯಲ್ಲಿ ಇರುವ ಸರಳ ಸಾಮಗ್ರಿಗಳನ್ನೇ ಬಳಸಿ ಮಾಡಬಹುದು. ಅದು ಹೇಗೆ ಎನ್ನುವ ವಿವರಣೆ ಇಲ್ಲಿದೆ. ತಪ್ಪದೆ ಪೂರ್ತಿ ಲೇಖನ ಓದಿ, ಮನೆಯಲ್ಲೇ ಉತ್ತರ ಕರ್ನಾಟಕದ ರುಚಿ ಆಸ್ವಾಧಿಸಿ.

ಇದನ್ನೂ ಓದಿ: ಹಾಲು ಇಲ್ಲದೆ ಚಹಾ ಆನಂದ ಸ್ವಾದಿಸಿ; ಇಲ್ಲಿದೆ ಸರಳ ಉಪಾಯ

ಶೇಂಗಾ ಚಟ್ನಿಪುಡಿ ಮಾಡುವ ವಿದಾನ

1/4 ಕೆಜಿ ಶೇಂಗಾ ಚೆನ್ನಾಗಿ ಹುರಿಯಬೇಕು. ಸ್ವಲ್ಪ ಬೆಳ್ಳುಳ್ಳಿ, ಸ್ವಲ್ಪ ಕಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಪುಡಿ ಮಾಡಿದರೆ ಚಟ್ನಿಪುಡಿ ತಯಾರಾಗುತ್ತೆ. ಇದರೊಂದಿಗೆ ಮೊಸಲು ಬೆರೆಸಿ ತಿಂದರೆ ಆಹಾ… ಅದರ ರುಚಿ ಅನುಭವಿಸಿದವರೇ ಬಲ್ಲರು.

ಇದನ್ನೂ ಓದಿ: ಅರಣ್ಯದೊಳಗೆ ಅವಿತುಕೊಂಡಿದೆ ರೋಚಕ ಇತಿಹಾಸದ ಜೈನರ ನೆಲೆ

ಕೆಂಪು ಮೆಣಸಿನಹಿಂಡಿ

ಸ್ವಲ್ಪ ಹಣ್ಣು ಮೆಣಸು ಚೆನ್ನಾಗಿ ಹುರಿದು ಅದಕ್ಕೆ 1/2 ಸ್ಪೂನ್ ಹುರಿದ ಮೆಂತೆ, ಸ್ವಲ್ಪ ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು ಸ್ವಲ್ಪ, ಬೆಳ್ಳುಳ್ಳಿ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಬೇಕು. ಇದಕ್ಕೆ ಮೊಸರು ಅಥವಾ ಬೆಣ್ಣೆ, ತುಪ್ಪ ಸೇರಿಸಿ ಕೊಂಡು ರೊಟ್ಟಿ, ಚಪಾತಿ ಜೊತೆ ತಿಂದರೆ ಅದರ ಮಜವೇ ಬೇರೆ. ಅನ್ನದ ಜೊತೆಗೆ ಕೂಡ ತಿನ್ನಬಹುದು.

ಇದನ್ನೂ ಓದಿ: ವಯಸ್ಸಿದ್ದಾಗಲೇ ಚಪ್ಪರಸಿ ಕಾಡಿನ ಕವಳೆ ಹಣ್ಣು

ಕರಗಾಯಿ

ದಪ್ಪ ಮೆಣಸಿನ ಕಾಯಿ ತೆಗೆದುಕೊಂಡು ಒಂದು ಬದಿ ಮಾತ್ರ ಉದ್ದಕ್ಕೆ ಸೀಳಬೇಕು. ಅದರೊಳಗೆ ಉಪ್ಪು ತುಂಬಿ ಮೆದು ಆಗುವ ವರೆಗೆ ಎಣ್ಣೆಯಲ್ಲಿ ಹುರಿಯಬೇಕು. ಎಣ್ಣೆಯಿಂದ ತೆಗೆದ ಬಳಿಕ ಕರಗಾಯಿ ಸಿದ್ಧ. ಇದನ್ನು ರೊಟ್ಟಿ, ಅನ್ನದ ಜೊತೆ ಸವಿಯಲು ಚೆನ್ನಾಗಿರುತ್ತದೆ.

ಇದನ್ನೂ ಓದಿ: ಅಂಗನವಾಡಿ ಹಿಟ್ಟಿನುಂಡೆ, ಕನ್ನಡ ಶಾಲೆ ಬಾಸುಂಡೆ; ಮರಳಿ ಕರೆಯುತ್ತಿದೆ ಬಾಲ್ಯ…

ಮೆಣಸಿನಿಂದ ಮಾಡಿದ್ದು ಎಂದು ಇದು ಅಷ್ಟೇನು ಖಾರ ಇರುವುದಿಲ್ಲ. ಯಾರು ಬೇಕಾದರೂ ಇದನ್ನು ತಿನ್ನಬಹುದು. ತಿಂದರೆ ಮತ್ತೊಮ್ಮೆ ತಯಾರಿಸದೆ ಬಿಡುವುದಿಲ್ಲ.

ಚಿತ್ರ, ಲೇಖನ:
ಪವಿತ್ರಾ ಮೂಲಿಮನಿ.