ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು
ಹೆಚ್ಚಿನ ರೈತರು, ನೌಕರಿ ಮಾಡುವವರು ವಯಸ್ಸಿಗೆ ಬರುವ ಮೊದಲೇ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಸಿಲುಕುತ್ತಾರೆ. ನಮ್ಮ ಕಣ್ಣಮುಂದೆ ಇರುವ ಔಷಧಗಳ ಬಗ್ಗೆಯೇ ನಮಗೆ ತಿಳಿದೇ ಇರುವುದಿಲ್ಲ.
ಹಾಗಾಗಿ ಜಾಹೀರಾತಿನಲ್ಲಿ ತೋರಿಸುವ ಆ ಎಣ್ಣೆ, ಈ ಎಣ್ಣೆ ಹಚ್ಚಿ ಇರುವ ಕೂದಲನ್ನು ಕಳೆದುಕೊಂಡು ಚಿಂತೆಗೆ ಬೀಳುತ್ತೇವೆ.
ಮನೆಯಲ್ಲಿ ಇರುವ ವಸ್ತುಗಳನ್ನೇ ಬಳಸಿ ಕೂದಲ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಒಗ್ಗರಣೆ ಎಲೆ ಅಥವಾ ಕರಿ ಬೇವು ಎಂದು ಕರೆಯುವ ಗಿಡ ಮೂಲಿಕೆ ಕೂದಲಿನ ಸಮಸ್ಯೆಯನ್ನು ಬಹುಪಾಲು ದೂರವಾಗಿಸುತ್ತದೆ.
ಒಗ್ಗರಣೆ ಸೊಪ್ಪಿನ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿ ಹಚ್ಚಿದರೆ ನಾಲ್ಕೇ ವಾರದಲ್ಲಿ ಕೂದಲು ಕಪ್ಪಗಾಗಲು ಆರಂಭಿಸುತ್ತದೆ. ಅಲ್ಲದೆ, ಮಹಿಳೆಯರಲ್ಲಿ ಕೂದಲು ಚಿಕ್ಕದಿದ್ದರೆ ಅವರೂ ಈ ಎಣ್ಣೆ ಹಚ್ಚ ಬಹುದು. ಇದು ರೂಢಿಯಿಂದ ಬಂದ ಔಷಧವಾದ್ದರಿಂದ ಬಳಕೆಗೆ ಯಾರೂ ಹೆದರಬೇಕಿಲ್ಲ.
ಈಗಂತೂ ಒಗ್ಗರಣೆ ಸೊಪ್ಪಿಗೆ ಮಾರುಕಟ್ಟೆ ಚೆನ್ನಾಗಿದೆ. 10 ರೂ.ಗೆ ಆರೇಳು ಚಿಗುರಿನ ಕಡ್ಡಿಗಳು ಸಿಗುತ್ತವೆ.
ವಯಸ್ಸಿದ್ದಾಗಲೇ ಚಪ್ಪರಿಸಿ ಕಾಡಿನ ಕವಳೆ ಹಣ್ಣು
ಎಣ್ಣೆ ತಯಾರಿಸುವ ವಿಧಾನ:
ಅಂಗಡಿಯಿಂದ ತಂದ ಅಥವಾ ಮನೆಯಲ್ಲೇ ಮಾಡಿದ ಕೊಬ್ಬರಿ ಎಣ್ಣೆಯಲ್ಲಿ ಕರಿಬೇವನ್ನು ಹಾಕಿ ಚೆನ್ನಾಗಿ ಕುದಿಸಬೇಕು. ತಣ್ಣಗಾದ ನಂತರ ಶೋಧಿಸಿ ಒಂದು ಪಾತ್ರೆಯಲ್ಲಿ ತುಂಬಿಡಬೇಕು .
ಆ ಎಣ್ಣೆಯನ್ನು ದಿನಾಲು ಬೆಳಿಗ್ಗೆ ಅಥವಾ ಸಂಜೆ ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಅಂದರೆ ಅದು ಕೂದಲಿನ ಮೂಲೆ ಮೂಲೆಗೂ ತಲುಪಬೇಕು. ಆ ರೀತಿ ಎಣ್ಣೆ ಹಚ್ಚಬೇಕು. ಮಾರನೇ ದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಕೂದಲಿಗೆ ಅವಶ್ಯವಾದ ಕ್ಯಾಲ್ಸಿಯಂ ದೊರೆಯುತ್ತದೆ.
ಎಳನೀರ ಬಗ್ಗೆ ನಿಮಗೆಷ್ಟು ಗೊತ್ತು? ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು
ದಿನಾಲೂ ಹೀಗೆ ಮಾಡುವುದರಿಂದ ಎರಡನೇ ವಾರಕ್ಕೆ ಕೂದಲು ಉದುರುವ ಸಮಸ್ಯೆ ಅರ್ಧ ಕಡಿಮೆಯಾಗಿರುತ್ತದೆ. ನಾಲ್ಕನೇ ವಾರದಲ್ಲಿ ಕೂದಲು ಬೆಳೆಯಲು ಪ್ರಾರಂಭವಾಗುವುದನ್ನು ನೀವೇ ಗಮನಿಸಬಹುದು.
ಅಲ್ಲದೆ ಕೂದಲು ಕಪ್ಪಾಗುತ್ತದೆ. ವಯಸ್ಸಾಗುವ ಮೊದಲೇ ಬೆಳ್ಳಗಾಗುವುದಿಲ್ಲ. ಕೂದಲಿಗೆ ಬಣ್ಣ ಹಚ್ಚುವ ರಗಳೆಯೂ ಇಲ್ಲ. ತಲೆ ಹೊಟ್ಟು ಮಾಯವಾಗುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯತ್ತದೆ.
Trackbacks/Pingbacks