ಮಧುಮೇಹಿಗಳ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ನ್ಯೂನ್ಯತೆಗಳಿಂದ ಈ ರೀತಿಯ ಸಮಸ್ಯೆಯಾಗುತ್ತಿರುತ್ತವೆ. ಮಧುಮೇಹ ಬರದಂತೆ ತಡೆಯಲು ದಿನನಿತ್ಯ ಯೋಗಾಭ್ಯಾಸ ಮಾಡುವುದು ಒಳ್ಳೆಯದು. ವಕ್ರಾಸನ ಅಭ್ಯಾಸ ಮಾಡುವುದರಿಂದ ಮಧುಮೇಹ ಕಾಯಿಲೆ ಬರದಂತೆ ತಡೆಯಬಹುದು.

ಮಾಡುವ ವಿಧಾನ:

1) ಈ ಆಸನ ಮಾಡಲು ಮೊದಲು ಸ್ಥಿತಿ ದಂಡಾಸನದಲ್ಲಿ ಕುಳಿತುಕೊಳ್ಳಿ.

2) ಬಲ ಮಂಡಿಯನ್ನು ಮಡಚಿ ಬಲ ಪಾದ ಎಡ ಮಂಡಿಯ ಬದಿಗಿರಿಸಿ. ಬಲಗೈಯನ್ನು ಬೆನ್ನ ಹಿಂದೆ ಇಡಿ.

3) ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ( ಪೂರಕ) ಎಡಗೈಯನ್ನು ತಲೆಯ ನೇರ ಮೇಲಕ್ಕೆತ್ತಿ ಹಾಗೆ ಉಸಿರನ್ನು ಹೊರ ಹಾಕುತ್ತಾ (ರೇಚಕ) ಎಡಗೈ ಮೋಣಕೈಗನ್ನು ಬಲ ಮಂಡಿಯ  ಹೊರಗಡೆ ಇಡುತ್ತಾ ಎಡಗೈಯಿಂದ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ದೇಹವನ್ನು ಬಲಗಡೆ ತಿರುಗಿಸಿ ಹಿಂದಕ್ಕೆ ನೋಡುತ್ತಾ ಐದು ಬಾರಿ ಆಳವಾಗಿ ಉಸಿರಾಟ ಮಾಡಿ.

4) ನಂತರ ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎಡಗೈಯನ್ನು ಮೇಲಕ್ಕೆತ್ತಿ ನಿಮ್ಮ ದೇಹವನ್ನು ಮಧ್ಯಕ್ಕೆ ತೆಗೆದುಕೊಂಡು ಬನ್ನಿ. ಈಗ ಉಸಿರನ್ನು ಹೊರ ಹಾಕುತ್ತಾ ( ರೇಚಕ) ಕೈಯನ್ನು ಕೆಳಗೆ ಇಳಿಸಿ ಕಾಲನ್ನು ನೇರಮಾಡಿ ಇನ್ನೊಂದು ಬದಿಗೆ ಪುನರಾವರ್ತಿಸಿ.

ಉಪಯೋಗಗಳು:

1) ಬೆನ್ನುಮೂಳೆ ಶಕ್ತಿಯುತವಾಗಿ ಸುತ್ತದೆ.

2) ಜೀರ್ಣಕ್ರಿಯೆಗೆ ಉತ್ತಮ.

3) ಕತ್ತಿನ ಮಾಂಸ ಖಂಡಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ.

4) ಮಧುಮೇಹ ನಿಯಂತ್ರಣದಲ್ಲಿಡುತ್ತದೆ.

5) ಭುಜಗಳು ಶಕ್ತಿಶಾಲಿ ಯಾಗುವುದು.

6) ಪ್ಯಾಂಕ್ರಿಯಸ್ ಗೆ ಒಳ್ಳೆಯದು.

7) ಬೆನ್ನುನೋವಿಗೆ ಉತ್ತಮ ಆಸನ.

ಎಚ್ಚರಿಕೆ:

ಕತ್ತು ಮತ್ತು ಬೆನ್ನು ನೋವು ಇದ್ದಾಗ, ಸ್ಲೀಪ್ ಡಿಸ್ಕ್ ಅಥವಾ ಸ್ಪಾಂಡಿಲೈಟಿಸ್ ತೊಂದರೆ ಇದ್ದವರು ಈ ಆಸನವನ್ನು ಅಭ್ಯಾಸ ಮಾಡಬಾರದು.