ಕರ್ನಾಟಕ ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಸ್ಥಳೀಯ ವೃಂದದ ಹುದ್ದೆಗಳು ಮತ್ತು ಹೈದೆರಾಬಾದ್‌ ಕರ್ನಾಟಕ ಹುದ್ದೆಗಳ ನೇಮಕಾತಿಗೆ ಈ ಅಧಿಸೂಚನೆ ಹೊರಡಿಸಲಾಗಿದೆ. 2020ರ ಫೆಬ್ರುವರಿ 20ರಿಂದಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮಾರ್ಚ್ 18 ಅರ್ಜಿ ಸಲ್ಲಿಸಲು ಕೊನೆ ದಿನ. ಮಾರ್ಚ್ 20 ರೊಳಗೆ ಅಧಿಕೃತ ಬ್ಯಾಂಕ್‌ ಹಾಗೂ ಅಂಚೆ ಕಛೇರಿಯಲ್ಲಿ ಶುಲ್ಕವನ್ನು ಪಾವತಿಸಬೇಕು.

ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಫೆ.26 ಲಾಸ್ಟ್ ಡೇಟ್

ಹುದ್ದೆಗಳ ವಿವರ
ವೈಜ್ಞಾನಿಕ ಅಧಿಕಾರಿ (ಸ್ಥಳೀಯ ವೃಂದ)- 50
ವೈಜ್ಞಾನಿಕ ಅಧಿಕಾರಿ (ಹೈದೆರಾಬಾದ್-ಕರ್ನಾಟಕ)- 4
ಒಟ್ಟೂ ಹುದ್ದೆಗಳು- 54

ಹುದ್ದೆಗಳ ವಿಸ್ತ್ರತ ವಿವರ

ಬಿಎಸ್ ಎಫ್ ನಲ್ಲಿ 317 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ಮಾರ್ಚ್ 18- 2020 ಕ್ಕೆ ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ವಿವರ ಇಲ್ಲಿದೆ.
– ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ.
– ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ.
– ಪ.ಜಾ / ಪ.ಪಂಗಡ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ.

ಅರ್ಜಿ ಶುಲ್ಕ ಎಷ್ಟು?
– ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.250.
– ಪ.ಜಾ / ಪ.ಪಂಗಡ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.100.
ಶುಲ್ಕವನ್ನು ಎಚ್ ಡಿಎಫ್ ಸಿ ಅಥವಾ ಅಂಚೆ ಕಚೇರಿಯಲ್ಲಿ ಪಾವತಿಸಬೇಕು.

KSRTC: 3745 ಕಂಡಕ್ಟರ್, ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ

ಗಮನಿಸಿ
ವಿದ್ಯಾರ್ಹತೆ, ನೇಮಕಾತಿ ಪರೀಕ್ಷೆ ಪಠ್ಯ ಮತ್ತು ಹೆಚ್ಚಿನ ವಿವರಗಳಿಗಾಗಿ ಇಲ್ಲಿಗೆ www.ksp.gov.in ಅಥವಾ  http://fsl20.ksp-online.in/  ಭೇಟಿ ನೀಡಿ.

ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು www.ksp.gov.in ಗೆ ಭೇಟಿ ನೀಡಿ.

ಸೇನಾ ನೇಮಕಾತಿ ರ್ಯಾಲಿ ಆನ್ ಲೈನ್ ನೋಂದಣಿ ಆರಂಭ