ಬೆಂಗಳೂರು: ತೆಲಂಗಾಣ ಸರ್ಕಾರದ ಆರೋಗ್ಯ ಇಲಾಖೆಯಿಂದ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಕರ್ನಾಟಕ ನರ್ಸಿಂಗ್ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.

ಒಟ್ಟು 5204 ಹುದ್ದೆಗಳು ಖಾಲಿ ಇದ್ದು, ಮಹಿಳೆಯರು ಹಾಗೂ ಪುರುಷರು ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್ ಸೈಟ್ www.mhsrb.telangana.gov.in ಮೂಲಕ 25/1/2023 ರಿಂದ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/2/2023.

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಸಾಮಾನ್ಯ ನರ್ಸಿಂಗ್, ಮಿಡ್ ವೈಫರಿ(GNM), BSc ನರ್ಸಿಂಗ್, ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಸಮಾನತೆಯಲ್ಲಿ ಉತ್ತೀರ್ಣವಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷವಾಗಿರಬೇಕು. ಗರಿಷ್ಠ 48 ವರ್ಷದ ಒಳಗಿರಬೇಕು.

ಅನ್ವಯಿಸುವ ಮೋಡ್: ಕಂಪ್ಯೂಟರ್ ಆಧಾರಿತ ಪರೀಕ್ಷಾ ಸಂದರ್ಶನ ಆಯ್ಕೆಮಾಡಬೇಕು.

ಬೇಕಾಗುವ ದಾಖಲಾತಿ: ಫೋಟೋಸ್ ಮತ್ತು ಸಹಿ, ಇಮೇಲ್ ಐಡಿ (email id), ಮೊಬೈಲ್ ನಂಬರ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಅಂಕ ಪಟ್ಟಿಗಳು, ಕನ್ನಡ ಮಾಧ್ಯಮ ದಾಖಲಾತಿ ಮತ್ತು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಇವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 36,750 ರಿಂದ 1,06,990 ವರೆಗೂ ಇರುತ್ತೆ. ಸರ್ವಿಸ್ ಹೆಚ್ಚಾಗುತ್ತಿದ್ದಂತೆ ನಿಮ್ಮ ಮಾಸಿಕ ವೇತನ ಕೂಡ ಹೆಚ್ಚಾಗುತ್ತೆ.

ಎಲ್ಲಾ ಇತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 120 ಹಾಗೂ SC/ ST, BC, EWS, PH ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕವಿರುವುದಿಲ್ಲ.