ಕರ್ನಾಟಕ ಅರಣ್ಯ  ಇಲಾಖೆ ಅಧೀನದಲ್ಲಿ ಬರುವ ಎಲ್ಲಾ ಅರಣ್ಯ ವೃತ್ತಗಳಲ್ಲಿ ಬೇಕಾಗಿರುವ 339 ಅರಣ್ಯ ರಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳು ಆನ್‌ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಲಿಂಕ್ ಗಳನ್ನು ಕೆಳಗಡೆ ನೀಡಲಾಗಿದೆ.

ಹುದ್ದೆಗಳ ವಿವರ
ಅರಣ್ಯ ರಕ್ಷಕ ಹುದ್ದೆಗಳ ಸಂಖ್ಯೆ – 339
ಒಟ್ಟು 339 ಹುದ್ದೆಗಳಲ್ಲಿ 12 ಬ್ಯಾಕ್‌ಲಾಗ್ ಹುದ್ದೆಗಳು ಇವೆ.
ಅರ್ಜಿ ಸಲ್ಲಿಕೆ ಆರಂಭ- 16-3-2020
ಅರ್ಜಿ ಸಲ್ಲಿಕೆ ಕೊನೆ ದಿನಾಂಕ- 15-4-2020


ವಿದ್ಯಾರ್ಹತೆ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಸೂಚನೆಯ ದಿನಾಂಕದೊಳಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ
ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 32 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು, ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್‌ ಸಿದ್ಧಪಡಿಸಿ, ಹುದ್ದೆಗಳಿಗೆ ವೃತ್ತವಾರು 1:20 ಅನುಪಾತದಲ್ಲಿ ದೇಹದಾರ್ಢ್ಯತೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರಿಗಣಿಸಿ ಲಿಖಿತ ಪರೀಕ್ಷೆಗೆ ಹಾಜರಾಗಲು ಆಯ್ಕೆಪಟ್ಟಿ ಪ್ರಕಟಿಸಲಾಗುತ್ತದೆ. ಬಳಿಕ ಈ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳನ್ನು ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ.

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಹೇಗೆ?
ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.aranya.gov.in ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.
ಅಧಿಸೂಚನೆಯಲ್ಲಿ ನೀಡಿರುವ ವೃತ್ತಗಳಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಮಾತ್ರ ಆಯ್ಕೆ ಬಯಸಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ವೃತ್ತವಾರು ಖಾಲಿ ಹುದ್ದೆಗಳ ಸಂಖ್ಯೆಯನ್ನು ಅಧಿಸೂಚನೆಯಲ್ಲಿ ಚೆಕ್‌ ಮಾಡಬಹುದು.
ಮಾರ್ಚ್‌ 16 ರಿಂದ ಏಪ್ರಿಲ್‌ 15, 2020 ರ ಸಂಜೆ 05-30 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಕ್ಷಿಪ್ತ ವಿವರ
ಹುದ್ದೆಯ ಹೆಸರು– ಅರಣ್ಯ ರಕ್ಷಕ
ಹುದ್ದೆಗಳು– 399
ವಿದ್ಯಾರ್ಹತೆ– ದ್ವಿತೀಯ ಪಿಯುಸಿ
ವೇತನ– 21,000 ರೂ.ದಿಂದ 41,000 ರೂ.
ಉದ್ಯೋಗ ಸ್ಥಳ– ಕರ್ನಾಟಕ

ಅರ್ಜಿ ಸಲ್ಲಿಸಿ Click Hear

ನೇಮಕಾತಿ ಅಧಿಸೂಚನೆ Click Hear