ಬಿಎಸ್ ಎನ್ ಎಲ್ (ಭಾರತ್ ಸಂಚಾರ ನಿಗಮ್ ಲಿ.), ತೆಲಂಗಾಣ ವೃತ್ತದಲ್ಲಿ ಪದವೀಧರ ಮತ್ತು ಡಿಪ್ಲೊಮ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಎಲೆಕ್ಟ್ರಾನಿಕ್ಸ್‌ ಮತ್ತು ಕಂಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ನೇರ ನೇಮಕಾತಿ ನಡೆಯಲಿದೆ. 2020 ಮಾರ್ಚ್‌ 4 ರಿಂದಲೇ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದ್ದು, 2020 ಮಾರ್ಚ್‌ 16 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಅರ್ಜಿ ಸಲ್ಲಿಸಲು ಮತ್ತು ಆದೇಶ ಪತ್ರಿಗೆ ಕೆಳಗಡೆ ಲಿಂಕ್ ನೀಡಲಾಗಿದೆ.

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

75 ಗ್ರಾಜುಯೇಟ್‌ ಮತ್ತು 25 ಟೆಕ್ನಿಕಲ್ (ಡಿಪ್ಲೊಮ) ಸೇರಿ ಒಟ್ಟು 100 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಬಿಇ / ಬಿಟೆಕ್‌ / ಡಿಪ್ಲೊಮ ವಿದ್ಯಾರ್ಹತೆಯನ್ನು ಎಲೆಕ್ಟ್ರಾನಿಕ್ಸ್‌ ಮತ್ತು ಕಂಮ್ಯೂನಿಕೇಷನ್‌ ವಿಭಾಗದಲ್ಲಿ ಪಾಸ್‌ ಮಾಡಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು NATS (ನ್ಯಾಷನಲ್ ಅಪ್ರೆಂಟಿಸಿಪ್ ಟ್ರೇನಿಂಗ್ ಸ್ಕೀಮ್) ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ದಿನಾಂಕ 19-03-2020 ರಂದು ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ನಡೆಸಲಿದೆ.
ಸಂದರ್ಶನ ನಡೆಯುವ ವಿಳಾಸ – ‘O/o PGM TD, BSNL Bhavan, Adarsh Nagar, Hyderabad – 500063’.

 ಅರ್ಜಿ ಸಲ್ಲಿಸಿ Click Hear

ನೋಟಿಪಿಕೇಶನ್ Click Hear