ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ ಚಹಾ ಕುಡಿದರೆ ಅದರ ಆನಂದವೇ ಬೇರೆ. ಕೆಲವರಿಗಂತೂ ಚಹಾ ಕುಡಿಯದೆ ಇದ್ದರೆ ದಿನವೇ ಕಳೆಯುವುದಿಲ್ಲ. ಇನ್ನು ಕೆಲವರಿಗೆ ಚಹಾ ಇಲ್ಲ ಎಂದರೆ ತಲೆ ನೋವು ಬಂದು ಬಿಡುತ್ತದೆ. ಆದರೀಗ ಕೊರೊನಾ ಆತಂಕದಿಂದಾಗಿ ಕೆಲವು ಕಡೆ ಹಾಲು ಸಿಗುತ್ತಿಲ್ಲ. ಸಿಕ್ಕರೂ ಹಾಲು ಬಳಸಬೇಕೊ ಬೇಡವೋ ಎನ್ನುವ ಗೊಂದಲ.

ಹಾಗಾದರೆ ಚಹಾಗೆ ಪರ್ಯಾವೇ ಇಲ್ಲವೇ ಎಂದು ಚಿಂತಿಸಬೇಡಿ. ಹಾಲು ಇಲ್ಲದೆಯೇ ಚಹಾದ ಆನಂದ ಸ್ವಾದಿಸಬಹುದು. ಸಕ್ಕರೆ ಕಾಯಿಲೆ ಇದ್ದವರೂ ಇದನ್ನು ಖುಷಿಯಾಗಿಯೇ ಬಳಸಬಹುದು. ಹಾಲು ಇಲ್ಲದೆ ಚಹಾ ಆಸ್ವಾದಿಸುವುದು ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಓದಿ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು

ನೀರಿಗೆ ಚಹಾಪುಡಿ ಹಾಕಿದ ಬಳಿಕ ಸಕ್ಕರೆ ಬದಲು ಬೆಲ್ಲ ಹಾಕಿ ಕುದಿಸಬೇಕು. ಸಣ್ಣ ಯಾಲಕ್ಕಿ, ಶುಂಠಿ ಚೂರು ಸೇರಿಸಿದರೆ ಹಾಲಿನಷ್ಟೇ ಸ್ವಾದಿಷ್ಟ ಚಹಾ ರೆಡಿ. ಎಲ್ಲ ಸಾಮಗ್ರಿಗಳನ್ನು ಸಮಪ್ರಮಾಣದಲ್ಲಿ ಬಳಸಿದರೆ ಬಿಸಿ ಬಿಸಿ ಚಹಾದ ಆನಂದವನ್ನು ಸ್ವಾದಿಸಬಹುದು.

ಅಂದಹಾಗೆ ಇದೇನು ಹೊಸ ಪದ್ಧತಿ ಅಲ್ಲ. ಗೋವಾ ರಾಜ್ಯದಲ್ಲಿ ಈ ರೂಢಿ ಹಲವು ವರ್ಷಗಳಿಂದ ಇದೆ. ಅಲ್ಲಿ ಸಕ್ಕರೆ ಬಳಸಿ ಕಪ್ಪು ಚಹಾ ಎಂದು ಸೇವಿಸುತ್ತಾರೆ. ವಿವಿಧ ಸುವಾಸನೆಯ ಚಹಾ ಪುಡಿಗಳನ್ನೂ ಅವರು ಬಳಸುತ್ತಾರೆ. ಸಕ್ಕರೆ ಬದಲು ಬೆಲ್ಲ ಬೆರೆಸಿದರೆ ಚಹಾ ಸ್ವಾದಿಷ್ಟವಾಗುತ್ತದೆ.

ಇದನ್ನೂ ಓದಿ: ಕೊರೊನಾ ಎದುರಿಸಲು ಮನೆಯಲ್ಲಿಯೇ ಶಕ್ತಿ ವೃದ್ಧಿಸಿಕೊಳ್ಳಿ: ಇಲ್ಲಿದೆ ವೈದ್ಯರ ಸಲಹೆ

ಬೆಲ್ಲದಿಂದ ಮಾಡಿದ ಕಪ್ಪು ಚಹಾ ಸೇವನೆಯಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚುತ್ತದೆ. ಹಾಲಿನ ಚಹಾದ ರೀತಿ ಪಿತ್ತ ಆಗುವುದಿಲ್ಲ. ಸಕ್ಕರೆ ಕಾಯಿಲೆಯ ಭಯ ಇಲ್ಲ. ಸಕ್ಕರೆಯ ಅಗತ್ಯವೂ ಇಲ್ಲ. ಬೆಲ್ಲ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಬೆಲ್ಲದ ಕಪ್ಪು ಚಹಾ ಆರೋಗ್ಯಕ್ಕೂ ಒಳ್ಳೆಯದು ಎನ್ನುವುದು ರೂಢಿಯಿಂದ ಬಂದ ಮಾತು.