ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರಿಗೆ ಇಲ್ಲಿದೆ ಸರಳ ಉಪಾಯ. ದೇಹವೂ ಸದೃಢವಾಗಬೇಕು. ಬುದ್ಧಿಶಕ್ತಿಯೂ ಚುರುಕಾಗಬೇಕು ಅಂಥವರು ಈ ಲೇಖವನ್ನು ಪೂರ್ತಿಯಾಗಿ ಓದಲೇ ಬೇಕು.

ಬುದ್ಧಿ ಚುರುಕಾಗಬೇಕು ಎಂದು ಹಲವು ಮಾರುಕಟ್ಟೆಯಲ್ಲಿ ಸಿಗುವ ಪೌಡರ್, ಇನ್ನೇನೋ ಔಷಧ ಬಳಸುತ್ತಾರೆ. ಇದೆಲ್ಲವು ಕೃತಕ. ಅಲ್ಲದೆ, ಅದು ದೇಹದ ಮೇಲೆ ಬೇರೆ ರೀತಿ ಪರಿಣಾಮ ಬೀರುತ್ತದೆ. ಹಾಗಾಗಿ ಯೋಗದ ಮೂಲಕ ಬುದ್ಧಿ ಶಕ್ತಿ ಹೆಚ್ಚಿಸಿಕೊಳ್ಳುವ ಜತೆಗೆ ದೇಹವನ್ನೂ ಸದೃಢವಾಗಿಸಬಹುದು.

ಇದನ್ನೂ ಓದಿ: ತೊಡೆಯ ಬೊಜ್ಜು ಕರಗಿಸಲು ಈ ಅಭ್ಯಾಸ ಮಾಡಿ

ಏಕ ಪಾದ ಉತ್ಕಟಾಸನ ಬುದ್ಧಿ ಶಕ್ತಿ ಚುರುಕಾಗಲು ಉತ್ತಮ ಆಸನ. ಒಂದೇ ಕಾಲಿನಲ್ಲಿ ಕುರ್ಚಿಯ ರೀತಿಯಲ್ಲಿ ಕುಳಿತುಕೊಳ್ಳುವ ಯೋಗದ ಭಂಗಿಯನ್ನು ಏಕ ಪಾದ ಉತ್ಕಟಾಸನ ಎನ್ನುತ್ತಾರೆ. ಆಸನ ಮಾಡುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ. ಜತೆಗೆ ಕಳಗಡೆ ವಿಡಿಯೊ ಸಹ ಇದೆ.

ಇದನ್ನೂ ಓದಿ: ಕಾಲು, ಬೆನ್ನು ನೋವು ನಿವಾರಣೆಗೆ ಪರೀವೃತ್ತ ತ್ರಿಕೋನಾಸನ

ಮಾಡುವ ವಿಧಾನ

ನೇರವಾಗಿ ಸ್ಥಿತಿ ತಾಡಾಸನದಲ್ಲಿ ನಿಂತುಕೊಳ್ಳಿ. ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎರಡು ಕೈಗಳನ್ನು ತಲೆಯ ನೇರ ಮೇಲಕ್ಕೆತ್ತಿ.ಈಗ ಬಲಗಾಲನ್ನು ಮಡಚಿ ಬಲ ಪಾದವನ್ನು ಎಡ ಮಂಡಿಯ ಮೇಲೆ ಇರಿಸಿ. ಉಸಿರನ್ನು ಹೊರ ಹಾಕುತ್ತಾ (ರೇಚಕ) ಕುರ್ಚಿಯ ರೀತಿಯಲ್ಲಿ ಕುಳಿತುಕೊಳ್ಳಿ.

ಇದನ್ನೂ ಓದಿ: ಸೊಂಟದ ಬೊಜ್ಜು ಕರಗಿಸಲು ತ್ರಿಕೋನಾಸನ

ಬೆನ್ನು ನೇರವಾಗಿರಲಿ. ನಿಮ್ಮ ದೃಷ್ಠಿ ನೇರವಾಗಿರಲಿ. ಇದೇ ಸ್ಥಿತಿಯಲ್ಲಿ ಐದು ಬಾರಿ ಆಳವಾಗಿ ಉಸಿರಾಟ ಮಾಡಿ. ನಂತರ ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಮೇಲಕ್ಕೆ ಬನ್ನಿ. ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಮ್ಮ ಕೈ ಮತ್ತು ಕಾಲನ್ನು ಕೆಳಗೆ ತೆಗೆದುಕೊಂಡು ಬಂದು ಇನ್ನೊಂದು ಬದಿಗೆ ಪುನರಾವರ್ತಿಸಿ.

ಇದನ್ನೂ ಓದಿ: ಯೋಗ ಆರಂಭಿಸುವುದು ಹೇಗೆ?

ಇದನ್ನೂ ಓದಿ: ಕಾಲು, ಮಂಡಿ ಬಲವರ್ಧನೆಗೆ ಪರಿವೃತ್ ಪಾರ್ಶ್ವ ಕೋನಾಸನ

ಉಪಯೋಗಗಳು

1)ನಿಮ್ಮ ಕಾಲುಗಳು ಮತ್ತು ತೊಡೆಗಳ ಬಾಗದ ಮಾಂಸಖಂಡ ಬಲಿಷ್ಟವಾಗುವುದು.

2)ಬೆನ್ನಿನ ಭಾಗಕ್ಕೆ ಉತ್ತಮ ವ್ಯಾಯಾಮ ಸಿಕ್ಕಿ ಬೆನ್ನಿನ ನರಗಳು ಚೈತನ್ಯ ಗೊಳ್ಳುವುದು.

3)ದೇಹದ ಸಮತೋಲನ ಹೆಚ್ಚಿಸಲು ನೆರವಾಗುತ್ತದೆ.

4)ಸೊಂಟದ ಭಾಗವನ್ನು ತೆರೆಯಲು ಉತ್ತಮ ಆಸನ.

5)ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುತ್ತದೆ.

ಇದನ್ನೂ ಓದಿ: ಪಕ್ಕೆಲುಬಿನ ಕೊಬ್ಬು ಕರಗಿಸಲು ಪಾರ್ಶ್ವ ಕೋನಾಸನ

ಸೂಚನೆ

ಕಡಿಮೆ ರಕ್ತದೊತ್ತಡ ಮತ್ತು ಮಂಡಿಯಲ್ಲಿ ನೋವಿರುವಂತವರು ಈ ಆಸನ ಮಾಡದೆ ಇರುವುದು ಒಳ್ಳೆಯದು.