ಕೆಲವರಿಗೆ ಕುಳಿತುಕೊಳ್ಳುವಾಗ ಪ್ರಷ್ಠ ಭಾಗ, ಸೊಂಟ ಹಾಗೂ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನರದ ನೋವು, ವಾತ ಅಥವಾ ಸೊಂಟದ ಬೇನೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ . ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವವರು ದಂಡಾಸನ ಅಭ್ಯಾಸ ಮಾಡುವುದರ ಮೂಲಕ ಪರಿಹಾರ ಕಂಡು ಕೊಳ್ಳಬಹುದು.

ದಂಡಾಸನ ಎನ್ನುವುದು ಕೂತು ಮಾಡುವ ಆಸನಗಳಲ್ಲಿ ಪ್ರಾರಂಭಿಕ ಹಂತದ ಆಸನವಾಗಿದೆ. ದಂಡ ಎಂದರೆ ಕೋಲು, ಆಸನ ಎಂದರೆ ಭಂಗಿ ಎಂದರ್ಥ. ಈ ಆಸನ ಮಾಡುವ ಮೊದಲು ಅದರ ವಿಧಾನಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ.

ಮಾಡುವ ವಿಧಾನ

1) ಬೆನ್ನು ಮತ್ತು ಕತ್ತು ನೇರವಾಗಿಸಿ ನೆಲದ ಮೇಲೆ ಕುಳಿತುಕೊಳ್ಳಿ.

2) ನಿಮ್ಮ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ. ಕಾಲ್ಬೆರಳುಗಳು ಮೇಲ್ಮುಖವಾಗಿರಲಿ ಮತ್ತು ನಿಮ್ಮ ಎರಡು ಹಿಮ್ಮಡಿಗಳನ್ನು ನೆಲದ ಮೇಲೆ ಇರಿಸಿ.

3) ಎರಡು ಹಸ್ತ ಪ್ರಷ್ಠದ ಬದಿಗಿರಿಸಿ. ದೃಷ್ಠಿ ನೇರವಾಗಿರಲಿ.

4) ಸಂಪೂರ್ಣ ದೇಹದ ಭಾರವನ್ನು ಪ್ರಷ್ಠದ ಮೇಲಿರಿಸಿ ಹಾಗೂ ದೇಹ ಸಮತೋಲನ ವಾಗಿರುವಂತೆ ನೋಡಿಕೊಳ್ಳಿ.

5) ಮುಂದಕ್ಕೆ ನೋಡುತ್ತಾ 30 ಸೆಕೆಂಡುಗಳ ಕಾಲ ಇದೆ ಸ್ಥಿತಿಯಲ್ಲಿ ಇದ್ದು ನಂತರ ಶಿಥಿಲ ದಂಡಾಸನ ದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಬುದ್ಧಿ ಶಕ್ತಿ ಚುರುಕಾಗಲು ಏಕ ಪಾದ ಉತ್ಕಟಾಸನ

ಉಪಯೋಗಳು

1) ಮೈಯಲ್ಲಿ ಚುರುಕುತನ ಹೆಚ್ಚಿಸುತ್ತದೆ.

2) ಬೆನ್ನು ಮತ್ತು ಮೀನಖಂಡಗಳ ನೋವು ನಿವಾರಣೆಯಾಗುತ್ತದೆ.

3) ತೊಡೆಗಳಿಗೆ ಉತ್ತಮ ವ್ಯಾಯಾಮ ದೊರಯುತ್ತದೆ.

4) ವಾತ ಮತ್ತು ಸೊಂಟದ ಬೇನೆಯಿಂದ ಆಗುವಂತ ಸಮಸ್ಯೆಗಳ ನಿವಾರಣೆ.

5) ಒತ್ತಡ ನಿವಾರಿಸಿ ಏಕಾಗ್ರತೆ ವೃದ್ಧಿಸುತ್ತದೆ.

6) ದೇಹದ ನಿಲುವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

ತೊಡೆಯ ಬೊಜ್ಜು ಕರಗಿಸಲು ಈ ಅಭ್ಯಾಸ ಮಾಡಿ

ಸೂಚನೆಗಳು

ಸೊಂಟ ಮತ್ತು ಮಣಿಕಟ್ಟಿನ ಸಮಸ್ಯೆ ಇರುವವರು ಈ ಆಸನ  ಮಾಡಬಾರದು.

ಲೇಖನ: ಶ್ರೀ ಗಣೇಶ, ಯೋಗ ತರಬೇತುದಾರ.