ಜಾನು ಶೀರ್ಷಾಸನ ಕುಳಿತುಕೊಂಡು ಅಭ್ಯಾಸ ಮಾಡುವ ಆಸನವಾಗಿದೆ. ಈ ಆಸನದಲ್ಲಿ ತಲೆಯನ್ನು ಮುಂದಕ್ಕೆ ಬಾಗಿಸಿ ಮೊಣಕಾಲಿನ ಹತ್ತಿರ ತರಲಾಗುತ್ತದೆ.

ಜಾನು ಎಂದರೆ “ಮಂಡಿ” ಶಿರ್ಷ ಎಂದರೆ “ತಲೆ” ಆಸನ ಅಂದರೆ “ಭಂಗಿ”. ನಮ್ಮ ತಲೆ ಅಥವಾ ಹಣೆಯನ್ನು ಮಂಡಿಗೆ ತಾಗಿಸುವುದನ್ನು ಜಾನು ಶೀರ್ಷಾಸನ ಎನ್ನುವರು. ಈ ಆಸನ ಮಾಡುವುದರಿಂದ ನಮ್ಮ ತೊಡೆ ಸಂದಿ, ಭುಜಗಳ ಭಾಗ ಮತ್ತು ಮಂಡಿ ಭಾಗಗಳ ಸ್ನಾಯುಗಳು ಬಲಗೊಳ್ಳತ್ತವೆ.

ಮಾಡುವ ವಿಧಾನ:

1) ಮಂಡಿ ಮುಂದೆ ಚಾಚಿ ಬೆನ್ನು ಮತ್ತು ಕತ್ತು ನೇರವಾಗಿರಿಸಿ ದಂಡಾಸನದಲ್ಲಿ ಕುಳಿತುಕೊಳ್ಳಿ.

2)ಎಡಗಾಲನ್ನು ಮಡಚಿ ಎಡ ಪಾದ ಬಲತೋಡೆಯ ಪಕ್ಕ ತೆಗೆದುಕೊಂಡು ಬನ್ನಿ.

3) ಉಸಿರು ತೆಗೆದುಕೊಳ್ಳುತ್ತ (ಪೂರಕ) ಎರಡು ಕೈಯನ್ನು ತಲೆಯ ಮೇಲಕ್ಕೆ ನೇರವಾಗಿ ಎತ್ತಿ.

4) ಈಗ ಉಸಿರನ್ನು ಸಂಪೂರ್ಣವಾಗಿ ಹೊರಹಾಕುತ್ತಾ ( ರೇಚಕ) ನಿಧಾನವಾಗಿ ಮುಂದಕ್ಕೆ ಬಾಗಿ. ನಿಮ್ಮ ಎರಡು ಕೈ ಹಸ್ತದಿಂದ ಬಲಗಾಲಿನ ಪಾದವನ್ನು ಹಿಡಿದುಕೊಳ್ಳಿ. ಹಣೆಯನ್ನು ಮಂಡಿಗೆ ತಾಗಿಸಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ ಐದು ಬಾರಿ ಆಳವಾಗಿ ಉಸಿರಾಟ ನಡೆಸಿ.

5) ನಂತರ ಉಸಿರು ತೆಗೆದುಕೊಳ್ಳುತ್ತಾ (ಪೂರಕ) ಮೇಲಕ್ಕೆ ಬಂದು ಹಾಗೆಯೇ ಉಸಿರನ್ನು ಹೊರ ಹಾಕುತ್ತಾ (ರೇಚಕ) ಕೈಯನ್ನು ಕೆಳಗೆ ಇಳಿಸಿ ಮತ್ತು ಕಾಲನ್ನು ನೇರಮಾಡಿ ಸ್ಥಿತಿಗೆ ಬಂದು ಇನ್ನೊಂದು ಬದಿಗೆ ಪುನರಾವರ್ತಿಸಿ.

ಬೆನ್ನು ಬಲಗೊಳ್ಳಲು ಪೂರ್ವೋತ್ತಾನಾಸನ

ಮಧುಮೇಹ ನಿಯಂತ್ರಣಕ್ಕೆ ಉಪಯುಕ್ತ ಪಶ್ಚಿಮೋತ್ತಾಸನ

ಉಪಯೋಗಗಳು:

1) ಭುಜಗಳು, ಬೆನ್ನೆಲುಬು ಮತ್ತು ತೊಡೆಗಳ ಭಾಗ ಬಲಗೊಳ್ಳುತ್ತದೆ.

2) ತೊಡೆಯ ಸ್ನಾಯುಗಳು ಹಾಗೂ ಕೀಲುಗಳು ಬಲಗೊಳ್ಳುತ್ತದೆ.

3) ಜೀರ್ಣಶಕ್ತಿ ವೃದ್ಧಿಸುತ್ತದೆ.

4) ಮುಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.

5) ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಸಮಸ್ಯೆ ನಿವಾರಿಸುತ್ತದೆ.

6) ಈ ಆಸನದ ಅಭ್ಯಾಸದಿಂದ ಲಿವರ್, ಕಿಡ್ನಿಯ ಆರೋಗ್ಯ ಉತ್ತಮಗೊಳ್ಳುತ್ತದೆ.

ವಾತ, ಬೆನ್ನು ನೋವು ಪರಿಹಾರಕ್ಕೆ ದಂಡಾಸನ

ಸೂಚನೆಗಳು:

ಕೆಳಬೆನ್ನು ನೋವು ಇರುವವರು, ಮಂಡಿಯಲ್ಲಿ ನೋವಿರುವಂತವರು, ಗರ್ಭಿಣಿಯರು ಹಾಗೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ಈ ಆಸನ ಮಾಡಬಾರದು.