ಬಾಲಾಸನ ಮೃದುವಾದ ವಿಶ್ರಾಂತಿಯ ಭಂಗಿಯಾಗಿದ್ದು ಒತ್ತಡವನ್ನು ಕಡಿಮೆ ಮಾಡಿ ನಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಈ ಆಸನ ನಮ್ಮ ದೇಹವನ್ನು ಕೇಂದ್ರೀಕರಿಸಲು ಸಹಾಯಮಾಡುತ್ತದೆ. ಹಾಗೆಯೇ ದೇಹದ ವಿವಿಧ ಭಾಗಗಳನ್ನು ನಿಧಾನವಾಗಿ ಹಿಗ್ಗಿಸಲು ಇದು ಉತ್ತಮ ಮಾರ್ಗವಾಗಿದೆ.

ಬಾಲಾಸನ ಮಾಡುವ ವಿಧಾನ:

ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ. ಎರಡು ಕಾಲುಗಳನ್ನು ಮಡಚಿ ವಜ್ರಾಸನ ಸ್ಥಿತಿಗೆ ಬನ್ನಿ. ನಿಮ್ಮ ಎರಡು ಮಂಡಿಗಳ ನಡುವೆ ಸ್ವಲ್ಪ ಅಂತರವಿರಲಿ. ಆಳವಾಗಿ ಉಸಿರು ತೆಗೆದುಕೊಳ್ಳುತ್ತಾ (ಪೂರಕ) ಎರಡು ಕೈಗಳನ್ನು ತಲೆಯ ನೇರ ಮೇಲಕ್ಕೆತ್ತಿ ಸಂಪೂರ್ಣವಾಗಿ ಉಸಿರನ್ನು ಹೊರಹಾಕಿ (ರೇಚಕ) ಮುಂದಕ್ಕೆ ಬಾಗಿ.

ಎರಡು ಹಸ್ತಗಳನ್ನು ಮತ್ತು ಹಣೆಯನ್ನು ನೆಲದಮಲೆ ಇರಿಸಿ 10 ರಿಂದ 15 ಸೆಕೆಂಡುಗಳ ಕಾಲ ಇದೇ ಸ್ಥಿತಿಯಲ್ಲಿ ಇರಿ. ನಂತರ ಉಸಿರು ತೆಗೆದುಕೊಳ್ಳುತ್ತಾ (ಪೂರಕ) ಮೇಲಕ್ಕೆ ಬನ್ನಿ. ಇದೇ ರಿತಿಯಾಗಿ 5 ರಿಂದ 6 ಬಾರಿ ಪುನರಾವರ್ತಿಸಿ.

ಉಪಯೋಗಗಳು:

1) ಆಯಾಸ ನಿವಾರಿಸಲು ಸಹಕಾರಿ.

2) ಒತ್ತಡ ಮತ್ತು ಆತಂಕ ಕಡಿಮೆ ಮಾಡಲು ಉತ್ತಮ ಭಂಗಿ.

3) ಪಾದಗಳು, ಸೊಂಟ ಮತ್ತು ಭುಜಗಳು ನಿಧಾನವಾಗಿ ವಿಸ್ತರಿಸುತ್ತದೆ.

4) ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ.

ಸೂಚನೆಗಳು:

ಗರ್ಭಿಣಿಯರು ಮತ್ತು ಮಂಡಿಯಲ್ಲಿ ನೋವಿರುವವರು ಈ ಆಸನ ಮಾಡಬಾರದು.

ಇದನ್ನೂ ಓದಿ