ಯೋಗ ಎನ್ನುವುದು ಒಂದು ದಿನ ಮಾಡುವ ಕಾಯಕವಲ್ಲ. ಈ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದು. ಜೊತೆಗೆ ಈ ಮಹತ್ವವಾದ ಯೋಗವನ್ನು ದಿನಕ್ಕೆ ಒಮ್ಮೆ ಆದರೂ ಅಳವಡಿಸಿಕೊಂಡರೆ ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಟ್ಟುಕೊಳ್ಳಬಹುದು.

ಬೆಳಗ್ಗೆ ಬೇಗ ಏಳುವುದೂ ಒಂದು ಯೋಗವೇ. ಸೂರ್ಯೋದಯದ ವೇಳೆಗೆ ಏಳುವುದರಿಂದಲೂ ಅರ್ಧ ಯೋಗ ಮಾಡಿದಷ್ಟು ಉಪಯೋಗ ಆಗುತ್ತದೆ. ಮಕ್ಕಳು ಬುದ್ಧಿವಂತರಾಗಬೇಕು. ವಯಸ್ಸಾದ ಮೇಲೆ ಸೊಂಟ, ಮೈ ನೋವು ಬರಬಾರು ಎಂದು ಹತ್ತಾರು ಔಷಧ ಬಳಸುತ್ತಾರೆ. ಅದರ ಪರಿಣಾಮ ಏನು ಎನ್ನುವುದು ಕೊರೊನಾ ವೈರಸ್ ಗೊತ್ತು ಮಾಡಿದೆ.

ಬುದ್ಧಿ, ದೇಹ, ಮನಸ್ಸು ಎಲ್ಲವನ್ನು ನಿಯಂತ್ರಿಸಿ ಆರೋಗ್ಯ ಕೊಡುವ ಶಕ್ತಿ ಯೋಗದಲ್ಲಿದೆ. ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಇದು ಭಾರತದ ಶಕ್ತಿ. ಅದನ್ನು ಮರಳಿ ಸ್ಥಾಪಿಸೋಣ.

ಯೋಗವೆಂದರೆ ‘ಜೋಡಿಸು’ ‘ಸೇರಿಸು’ ‘ಕೂಡಿಸು’ ಎಂಬ ಆರ್ಥ ಬರುತ್ತದೆ. ಯೋಗವೆಂದರೆ ‘ಸಮಾದಿ’ ‘ಉಪಾಯ’ ‘ಸಾಧನ’ ಎಂಬ ಅರ್ಥವೂ ಬರುತ್ತದೆ. ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ದಿ , ಭಾವನೆ, ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ.

ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. “ಯೋಗೋ ಉಪಾಯ ಉದ್ದಿಷ್ಟ:” ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆ “ಯೋಗಶ್ಚಿತ್ತ ವೃತ್ತಿ ನಿರೋಧ:” ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ.

ಋಷಿ ಪತಂಜಲಿಯವರು ಯೋಗದಲ್ಲಿ ಎಂಟು ಅಂಗಗಳನ್ನು ತಿಳಿಸಿದ್ದಾರೆ. ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.

ಸೂಕ್ಷ್ಮ ವ್ಯಾಯಾಮ
ಯಾವುದೇ ರೀತಿಯ ಯೋಗಾಸನ ಹಾಗೂ ಸೂರ್ಯ ನಮಸ್ಕಾರ ಮಾಡುವ. ಮೊದಲು ಸೂಕ್ಷ್ಮ ವ್ಯಾಯಾಮ ಮಾಡುವುದು ಅತ್ಯಂತ ಅವಶ್ಯಕ ಈ ಸೂಕ್ಷ್ಮ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದಲ್ಲಿನ ಎಲ್ಲಾ ಕೀಲುಗಳು ಸಡಿಲ ಗೊಳ್ಳುತ್ತದೆ. ಇದರಿಂದ ನಮ್ಮಲ್ಲಿ flexibility ಹೆಚ್ಚಿಸುತ್ತದೆ.

ದೇಹವು ಹಗುರ ಹಾಗೂ ಸಡಿಲ ಗೊಳ್ಳುತ್ತದೆ. ಹಾಗೆ ಕೀಲುಗಳು ಸಮಸ್ಯೆ ಬರದೆ ಇರುವ ಹಾಗೆ ತಡೆಗಟ್ಟಬಹುದು. ನಮ್ಮ ದೇಹದ ಎಲ್ಲಾ ಕೀಲುಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಕೀಲುಗಳು ಬಿಗಿತವನ್ನು ಸಡಿಲ ಗೊಳಿಸುತ್ತದೆ. ಈ ವ್ಯಾಯಾಮವನ್ನು ಸುಲಭವಾಗಿ ಆರಂಭಿಸೋಣ.

ಶ್ರೀ ಗಣೇಶ
ಯೋಗ ತರಬೇತುದಾರ