ಸೂರ್ಯನಿಗೆ ಕೃತಜ್ಞತಾ ಪೂರ್ವಕವಾಗಿ ಅರ್ಪಿಸುವ ಆಸನಗಳ ಒಂದು ಗುಚ್ಚವೇ ಸೂರ್ಯ ನಮಸ್ಕಾರ. ಇದು ಶಿಥಿಲೀಕರಣ ವ್ಯಾಯಾಮ ಮತ್ತು ಆಸನಗಳ ನಡುವಿನ ಸಂಪರ್ಕ ಸೇತುವೆ. ಮಾನಸಿಕ ಒತ್ತಡ, ಬೊಜ್ಜು, ಮಹಿಳೆಯರಲ್ಲಿನ ಅನೇಕ ಸಮಸ್ಯೆಗಳಿಗೆ ಈ ಆಸನದಿಂದ ಪರಿಹಾರ ಪಡೆಯಬಹುದು.

ಸೂರ್ಯನಮಸ್ಕಾರ ಆಸನ ಮಾಡುವುದರ ಜತೆಗೆ ಆ ಆಸನದ ಪರಿಚಯ ಇಲ್ಲದೆ ಇದ್ದರೆ ಯೋಗವನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವಾಗದೆ ಹೋಗಬಹುದು. ಹಾಗಾಗಿ ಸೂರ್ಯನಮಸ್ಕಾರದ ಬಗ್ಗೆ ಸಂಕ್ಷಿಪ್ತವಾಗಿ ಇಲ್ಲಿ ಪರಿಚಯಿಸಲಾಗಿದೆ.

ಇದೆಲ್ಲವನ್ನು ಸರಿಯಾಗಿ ಓದಿಕೊಂಡು ಕೆಳಗಿನ ವಿಡಿಯೊ ಮೂಲಕ ಯೋಗಾಸನವನ್ನು ಅನುಸರಿಸುವುದು ಉತ್ತಮ. ಸೂರ್ಯ ನಮಸ್ಕಾರದ ಆರಂಭದಲ್ಲಿ ಈ ಮಂತ್ರವನ್ನು ಹೇಳುತ್ತಾರೆ.

ಇದನ್ನೂ ಓದಿ: ಯೋಗ ಎಂದರೇನು? ಸೂಕ್ಷ್ಮ ಯೋಗ ಮಾಡುವುದು ಹೇಗೆ?

“ಹಿರಣ್ಮಯೇನ ಪಾತ್ರೇಣ ಸತ್ಯಾಸ್ಯಾಪಿ ಹಿತಂ ಮುಖಂ
ತತ್ವಂ ಪೋಷನ್ ಅಪಾವ್ರಣು ಸತ್ಯ ಧರ್ಮಾಯ ದೃಷ್ಟಯೇ”

ಪ್ರತಿ ದಿನ ಸೂರ್ಯ ನಮಸ್ಕಾರ ಮಾಡುವುದರಿಂದ ನಮಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ವೃದ್ಧಿಯಾಗತ್ತದೆ. ಸೂರ್ಯ ನಮಸ್ಕಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಿ ಸಂಜೆ ಊಟವಾದ ಮೇಲೆ ಕನಿಷ್ಠ ಮೂರು ಗಂಟೆಯ ಬಳಿಕ ಮಾಡುವುದು ಒಳ್ಳೆಯದು.

ಮಲಬದ್ಧತೆ, ಅಜೀರ್ಣ,ಸಮಸ್ಯೆ ಇರುವವರು ದಿನಾ ಬೆಳಿಗ್ಗೆ ಸೂರ್ಯ ನಮಸ್ಕಾರ ಮಾಡಿದರೆ ಉತ್ತಮ ಪ್ರಯೋಜನ ಪಡೆಯಬಹುದು.

ಪ್ರಯೋಜನಗಳು

1) ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.

2)ಸ್ನಾಯುಗಳು ಬಲಗೊಳ್ಳುತ್ತವೆ.

3) ಸೌಂದರ್ಯವನ್ನು  ವೃದ್ಧಿಸುತ್ತದೆ.

4) ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

5) ಅನಿಯಮಿತ  ಮು ಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.

6) ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ.

7) ದೇಹಕ್ಕೆ ಅಧಿಕ ಆಮ್ಲಜನಕ ಪೂರೈಕೆ ಆಗುತ್ತದೆ ಇದರಿಂದಾಗಿ ರಕ್ತ ಸಂಚಲನ ಉತ್ತಮವಾಗಿ ನಡೆಯುತ್ತದೆ

ಎಚ್ಚರಿಕೆ

1) ಅಧಿಕ ರಕ್ತದೊತ್ತಡ ಇರವವರು ಮುಂಜಾಗ್ರತೆ ವಹಿಸಬೇಕು.

2) ಹರ್ಣಿಯ ಮತ್ತು ಜಠರದ ಹುಣ್ಣಿನ ನಿಂದ ಬಳಲುವವರು ಸೂರ್ಯ ನಮಸ್ಕಾರ ಮಾಡಬಾರದು.

3) ಸಾಯಾಟಿ ಕ , ಸಾರ್ವೈಕಲ್ ಸ್ಪಾಂಡಿಲೈಟಿಸ್, ತೀವ್ರ ಸಂದಿವಾತ ಇರುವವರು ಸೂರ್ಯ ನಮಸ್ಕಾರ ಮಾಡಬಾರದು.

4) ಸ್ತ್ರೀಯರು ಮಾಸಿಕ ಋತು ಚಕ್ರದ ಸಮಯ ಹಾಗೂ ಗರ್ಭಾವಸ್ಥೆ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡಬಾರದು.

ಇದನ್ನೂ ಓದಿ: ಯೋಗ ಎಂದರೇನು? ಸೂಕ್ಷ್ಮ ಯೋಗ ಮಾಡುವುದು ಹೇಗೆ?