ಸದೃಢ ದೇಹ ಮತ್ತು ಮನಸ್ಸಿನ  ಆರೋಗ್ಯಕ್ಕೆ ಯೋಗಾಭ್ಯಾಸ ಅತ್ಯಂತ ಅವಶ್ಯ. ಆರೋಗ್ಯಯುತ ದೇಹ ಸಕಲ ಕಾರ್ಯ ಹಾಗೂ ಸರ್ವ ಯಶಸ್ಸಿಗೆ ಕಾರಣವಾಗುತ್ತದೆ. ವಜ್ರಾಸನ ಒಂದು ದ್ಯಾನದ ಭಂಗಿ. ಈ ಆಸನ ನಿಯಮಿತವಾಗಿ ಅಭ್ಯಾಸ ಮಾಡುತ್ತಾ ಬಂದಹಾಗೆ ದೇಹ ವಜ್ರದಷ್ಟು ಗಟ್ಟಿಯಾಗುತ್ತದೆ.

 ಮಾಡುವ ವಿಧಾನ:

1) ಮೊದಲು ನೆಲದಮೇಲೆ ಎರಡು ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಿ.

2) ಈಗ ನಿಮ್ಮ ಮಂಡಿಗಳನ್ನು ಒಂದೊಂದಾಗಿ ಮಡಚಿ ಪಾದಗಳನ್ನು ಪ್ರಷ್ಠದ ಹತ್ತಿರ ತನ್ನಿ.

3) ಮಂಡಿ ಒಂದಕ್ಕೊಂದು ಪರಸ್ಪರ ಕೂಡಿರಲಿ. ದೇಹದ ಸಂಪೂರ್ಣ ಭಾರ ಎರಡು ಹಿಮ್ಮಡಿಯ ಮೇಲಿರಿಸಿ. ಬೆನ್ನು ಮತ್ತು ಕತ್ತು ನೇರವಾಗಿರಲಿ. ಕೈಗಳನ್ನು ನೇರ ಮಾಡಿ ಹಸ್ತಗಳನ್ನು ಮಂಡಿಯ ಮೇಲಿರಿಸಿ. ವಜ್ರಾಸನ ಹೆಚ್ಚುಹೊತ್ತು ಅಭ್ಯಾಸ ಮಾಡುವುದರಿಂದ ದೇಹ ವಜ್ರದಷ್ಟು ಗಟ್ಟಿಯಾಗುತ್ತದೆ.

ಇದೇ ಸ್ಥಿತಿಯಲ್ಲಿ ನಿಮಗೆ ಸಾಧ್ಯವಾದಷ್ಟು ಹೊತ್ತು ಇದ್ದು ನಂತರ ಕಾಲುಗಳನ್ನು ಒಂದೊಂದಾಗಿ ಮುಂದೆ ಚಾಚಿ ಶಿಥಿಲ ದಂಡಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಉಪಯೋಗಗಳು:

1) ಕೀಲು ಮತ್ತು ಕಾಲುನೋವು ಗುಣವಾಗುತ್ತದೆ.

2) ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

3) ಬೆನ್ನು ಮೂಳೆ ಗೆ ಉತ್ತಮ ವ್ಯಾಯಾಮ ಸಿಗುತ್ತದೆ.

4) ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ.

5) ಮಂಡಿಯ ಆರೋಗ್ಯಕ್ಕೆ ಒಳ್ಳೆಯದು.

ಸೂಚನೆಗಳು:

ಮಂಡಿಯಲ್ಲಿ ಅಧಿಕ ನೋವು ಮತ್ತು ಮೊಣಕಾಲಿನ ಗಾಯಗಳ ಸಮಸ್ಯೆ ಇದ್ದರೆ ಈ ಆಸನ ಮಾಡಬಾರದು.