ಹೆಡೆ ಎತ್ತಿದ ಸರ್ಪದ ರೀತಿಯಲ್ಲಿ ಮಾಡುವ ಒಂದು ಯೋಗದ ಭಂಗಿಯೇ ಭುಜಂಗಾಸನ. ಈ ಆಸನ ಮಾಡುವ ಸಮಯದಲ್ಲಿ ಹೊಟ್ಟೆಯ ಮೇಲ್ಭಾಗವನ್ನು ಮೇಲಕ್ಕೆತ್ತುವುದರಿಂದ ಹೆಡೆ ಎತ್ತಿದ ಸರ್ಪದ ರೀತಿಯಲ್ಲಿ ಕಾಣುವುದು. ಅದಕ್ಕಾಗಿ ಭುಜಂಗಾಸನ ಎಂದು ಕರೆಯಲಾಗಿದೆ.

ಮಾಡುವ ವಿಧಾನ:

1) ಮೊದಲು ಬೋರಲಾಗಿ (ಮುಖ ಕೆಳಮಾಡಿ) ಹೊಟ್ಟೆಯ ಮೇಲೆ ಮಲಗಿಕೊಳ್ಳಿ.

2) ಎರಡು ಕೈಗಳನ್ನು ಮಡಚಿ. ನಿಮ್ಮ ಹಸ್ತ ಭುಜದ ಹತ್ತಿರ ತೆಗೆದುಕೊಂಡು ಬಂದು ಹಸ್ತ ಕೆಳಮುಖವಾಗಿ ಇರಿಸಿ.

3) ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ತಲೆ , ಕುತ್ತಿಗೆ , ಎದೆಯ ಭಾಗವನ್ನು ನಾಭಿಯವರೆಗೆ ಮೇಲಕ್ಕೆತ್ತಿ. ಬೆನ್ನನ್ನು ಕಮಾನಿನ ರೀತಿಯಲ್ಲಿ ಹಿಂದಕ್ಕೆ ಭಾಗಿಸಿ ಮೇಲಕ್ಕೆ ಅಥವಾ ಮುಂದಕ್ಕೆ ನೋಡುತ್ತಾ 10 ರಿಂದ 15 ಸೆಕೆಂಡುಗಳ ಕಾಲ ಹಾಗೆಯೇ ಇರಿ ( ಉಸಿರಾಟ ಸಹಜವಾಗಿರಲಿ).

4) ನಂತರ ಉಸಿರನ್ನು ಹೊರ ಹಾಕುತ್ತಾ ( ರೇಚಕ) ಹೊಟ್ಟೆಯ ಭಾಗ, ಎದೆ, ಹಾಗೂ ತಲೆಯನ್ನು ನಿಧಾನವಾಗಿ ಕೆಳಗೆ ತಂದು ಮಕರಾಸನದಲ್ಲಿ  ವಿಶ್ರಾಂತಿ ತೆಗೆದುಕೊಳ್ಳಿ.

ಪ್ರಯೋಜನಗಳು:

1) ಅಸಮರ್ಪಕ ಋತುಚಕ್ರದಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ಪ್ರಯೋಜನಕಾರಿ.

2) ಡಯಾಬಿಟಿಸ್ ಸಮಸ್ಯೆ ನಿವರಣೆಯಾಗುವುದು.

3) ಸಿಯಾಟಿಕಾ ಮತ್ತು ಆಸ್ತಮಾ ಸಮಸ್ಯೆ ನಿವರಣೆಯಾಗುವುದು.

4) ಜೀರ್ಣಕ್ರಿಯೆ ಮತ್ತು ಮೂತ್ರದ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

5) ಹೊಟ್ಟೆಯ ಭಾಗದ ಕೊಬ್ಬು ಕರಿಸಲು ಉತ್ತಮ ಆಸನ.

6) ಉಬ್ಬಸ ಮತ್ತು ಉಸಿರಾಟದ ತೊಂದರೆ ನಿವಾರಣೆಯಾಗುವುದು.

ಸೂಚನೆಗಳು:

ಬೆನ್ನು, ತೋಳುಗಳು ಮತ್ತು ಭುಜಗಳಲ್ಲಿ ಧೀರ್ಘಕಾಲದ ಗಾಯ, ಗರ್ಭಿಣಿಯರು ಮತ್ತು ಹೊಟ್ಟೆಯ ಭಾಗದಲ್ಲಿ ಶಸ್ತ್ರಚಿಕಿತ್ಸೆ ಆದವರು ಈ ಆಸನ ಮಾಡಬಾರದು.