
ಕೂದಲು ಉದುರುವುದನ್ನು ತಡೆಯಲು ಸರ್ವಾಂಗಾಸನ

ಸರ್ವಾಂಗಾಸನ “ಆಸನಗಳ ತಾಯಿ” ಎಂತಲೂ ಕರೆಯುತ್ತಾರೆ. ಶರೀರದ ಸರ್ವಾಂಗಗಳಿಗೆ ಆರೋಗ್ಯವನ್ನು ನೀಡುವಂತ ಉತ್ತಮ ಆಸನ.
ಮಾಡುವ ವಿಧಾನ:
1) ಕಾಲುಗಳನ್ನು ನೀಳವಾಗಿ ಮುಂದೆ ಚಾಚಿ ಬೆನ್ನು ಕೆಳಗೆಮಾಡಿ ಶವಾಸನದಲ್ಲಿ ಮಲಗಿ, ಕೈಗಳು ತೊಡೆಯ ಪಕ್ಕ ಸಲ್ಲಿರಿಸಿ, ಹಸ್ತ ಮೇಲ್ಮುಖವಾಗಿ ಇರಲಿ.
2) ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಕಾಲುಗಳನ್ನು ಮತ್ತು ಸೊಂಟವನ್ನು ನಿಧಾನವಾಗಿ ಮೇಲಕ್ಕೆತ್ತಿ ತಲೆ ಇರುವ ದಿಕ್ಕಿನತ್ತ ಚಾಚಿ.
3) ಕೈಗಳನ್ನು ಸೊಂಟಕ್ಕೆ ಆಧಾರವಾಗಿರಿಸಿ ಕಾಲುಗಳನ್ನು 90 ಡಿಗ್ರಿ ಅಂಶ ಕೋನದಲ್ಲಿ ಮೇಲಕ್ಕೆ ನೇರವಾಗಿ ನಿಲ್ಲಿಸಿ.
4) ತೊಡೆ , ಮೀನಖಂಡ, ಪಾದ ಒಂದೇ ಸರಳ ರೇಖೆಯಲ್ಲಿರುವಂತೆ ನೋಡಿಕೊಳ್ಳಿ. ಎದೆಯನ್ನು ಹಿಗ್ಗಿಸಿ ಗದ್ದಕ್ಕೆ ತಾಗುವಂತಿರಿಸಿ ಪಾದಗಳ ಹೆಬ್ಬೆರಳನ್ನು ನೋಡುತ್ತಾ ಒಂದರಿಂದ ಐದು ನಿಮಿಷದ ವರೆಗೆ (ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ) ಅತ್ತಿತ್ತ ಅಲುಗಾಡದಂತೆ ಸ್ಥಿರವಾಗಿ ನಿಲ್ಲಿಸಿ ಸರಳವಾಗಿ ಉಸಿರಾಟ ನಡೆಸಿ.
5) ಈಗ ಮೊದಲು ನಿಮ್ಮ ಸೊಂಟದ ಭಾಗವನ್ನು ಕೆಳಗಿಳಿಸಿ. ಹಾಗೆ ನಿಧಾನವಾಗಿ ಕಾಲುಗಳನ್ನು ಕೆಳಗಿಳಿಸಿ ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.
ಉಪಯೋಗಗಳು:
1) ದೇಹ ಸಂಬಂಧಿ ಎಲ್ಲಾ ಕಾಯಿಲೆಗಳು ನಿವಾರಣೆಯಾಗುತ್ತದೆ.
2) ಕುತ್ತಿಗೆ ಮತ್ತು ಗಂಟಲು ಭಾಗಕ್ಕೆ ಹೆಚ್ಚಿನ ವ್ಯಾಯಾಮ ದೊರೆತು ಥೈರಾಯಿಡ್ ಹಾಗೂ ಪ್ಯಾರಾಥೈರಾಯ್ಡ್ ಗ್ರಂಥಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ.
3) ಈ ಆಸನ ಮಾಡುವುದರಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಅಧಿಕಗೊಂಡು ನೆನಪಿನ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
4) ಉಸಿರಾಟ, ಶ್ವಾಸನಾಳದ ತೊಂದರೆ, ಗಂತಲುಬೇನೆ ಹಾಗೂ ಅರ್ಧ ತಲೆನೋವು ನಿವಾರಣೆಯಾಗುತ್ತದೆ.
5) ಹಸಿವು ಹೆಚ್ಚಿಸುತ್ತದೆ.
6) ಕೂದಲು ಉದುರುವುದನ್ನು ನಿಲ್ಲಿಸಲು ಹೆಚ್ಚು ಸಹಾಯಕಾರಿ.
ಸೂಚನೆ:
ಬೆನ್ನು ನೋವು , ಸ್ಪಾಂಡಿಲೈಟಿಸ್ , ಹೃದಯ ಸಂಬಂಧಿ ತೊಂದರೆ , ತೀವ್ರ ರಕ್ತದೊತ್ತಡ , ಗರ್ಬಿಣಿಯರು ಮತ್ತು ಮಹಿಳೆಯರು ಮುಟ್ಟಿನ ಸಮಯದಲ್ಲಿ ಮತ್ತು ಗಂಟಲು ಅಥವಾ ಕಿವಿಯ ಸೋಂಕು ಇರುವಂತವರು ಈ ಆಸನ ಮಾಡಬಾರದು.