ಔಷಧ ಬಳಸದೆ ಥೈರಾಯಿಡ್ ಸಮಸ್ಯೆ, ಬೆನ್ನು, ಕುತ್ತಿಗೆ ನೋವು, ಪಕ್ಕೆಲಬುಗಳಲ್ಲಿನ ಕೊಬ್ಬು ಕರಗಿಸಲು ಅರ್ಧ ಕಟಿ ಚಕ್ರಾಸನ ಬಹಳ ಉಪಯುಕ್ತವಾಗಿದೆ.

ಅನಗತ್ಯವಾಗಿ ಔಷಧಗಳ ಮೊರೆ ಹೋಗಿ ಪದೇ ಪದೇ ಸಮಸ್ಯೆಗಳನ್ನು ಎದುರಿಸುವ ಬದಲು ಇದೊಂದು ಸರಳ ಆಸನವನ್ನು ನಿಯಮಿತವಾಗಿ ಮಾಡುವುದರಿಂದ ನೋವುಗಳಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ತೂಕ ಇಳಿಸಲು ಸೂರ್ಯ ನಮಸ್ಕಾರ

ಈ ಆಸನ ಹೇಗೆ ಮಾಡಬೇಕು ಎನ್ನುವ ವಿಡಿಯೊ ವಿವರಣೆ ಈ ಕೆಳಗೆ ನೀಡಲಾಗಿದೆ. ಅದಕ್ಕಿಂತ ಮೊದಲು ಆಸನದಿಂದ ಏನು ಲಾಭ, ಯಾರು ಮಾಡಬಹುದು, ಯಾರು ಮಾಡಬಾರದು ಎನ್ನುವುದನ್ನು ತಿಳಿದುಕೊಂಡರೆ ಹೆಚ್ಚು ಉತ್ತಮ.

ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಗೆ ಪಾದಹಸ್ತಾಸನ

ಅರ್ಧ ಕಟಿ ಚಕ್ರಾಸನ ಎಂದರೆ, ನಿಂತುಕೊಂಡು ಪಾರ್ಶ್ವಕ್ಕೆ  ಭಾಗುವ ಭಂಗಿಯಾಗಿದೆ. ಈ ಆಸನ ಬೆನ್ನು ನೋವಿನ ನಿಯಂತ್ರಣಕ್ಕೆ ತುಂಬಾ ಸಹಾಯಕಾರಿ. ಕಟಿ ಎಂದರೆ ಸೊಂಟ, ಸೊಂಟವನ್ನು ಅರ್ಧ ಚಕ್ರದ ರೀತಿಯಲ್ಲಿ ಭಾಗಿಸುವುದರಿಂದ ಇದನ್ನು ಅರ್ಧ ಕಟಿ ಚಕ್ರಾಸನ ಎನ್ನುವರು.

ವಿಡಿಯೊ ಮಾಹಿತಿ

ಉಪಯೋಗಗಳು

ಈ ಆಸನ ಬೆನ್ನು ನೋವಿಗೆ ಉತ್ತಮವಾಗಿದೆ. ಭುಜದ ಭಾಗ ಹಾಗೂ ಕುತ್ತಿಗೆ ಭಾಗ ಬಲಗೊಳ್ಳುತ್ತದೆ. ಪಿತ್ತಕೋಶ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಪಕ್ಕೆಲುಬು ಗಳಲ್ಲಿನ ಕೊಬ್ಬು ಕರಗುತ್ತದೆ. ಥೈರಾಯಿಡ್ ಸಮಸ್ಯೆಯಿಂದ ಬಳಲುವವರಿಗೆ ಮತ್ತು ಪದೇ ಪದೇ ಕುತ್ತಿಗೆ ನೋವಿಗೆ ಒಳಗಾಗುವವರಿಗೆ ಉತ್ತಮ ಆಸನ.

ಯೋಗ ಎಂದರೇನು?

ಸೂಚನೆ

ಅರ್ಧ ಕಟಿ ಚಕ್ರಾಸನ ವಾನ್ನು ತೀವ್ರಗತಿಯ ಬೆನ್ನು ನೋವು ಇರುವವರು ಆಚರಣೆ ಮಾಡಬಾರದು. ಸ್ಲಿಪ್ ಡಿಸ್ಕ್ ಸಮಸ್ಯೆ ಮತ್ತು ಸದ್ಯದಲ್ಲಿ ಬೆನ್ನು ಮತ್ತು ಹೊಟ್ಟೆ ಬಾಗದ ಸರ್ಜರಿ ಆದವರು ಈ ಆಸನ ಮಾಡಬಾರದು.