ಬೆಳೆ ಸಮೀಕ್ಷೆಯಲ್ಲಿ ಆಗುತ್ತಿರುವ ಯಡವಟ್ಟುಗಳನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರಕಾರ ಈ ಬಾರಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದೆ. 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ರೈತರು ತಾವಾಗಿಯೇ ಸಮೀಕ್ಷೆ ಮಾಡಿಕೊಳ್ಳಬಹುದು.

ಈ ಸಮೀಕ್ಷೆ ಬಹಳ ಮುಖ್ಯವಾಗಿದ್ದು, ಮುಂದಿನ ಬೆಳೆ ಸಾಲ, ಸಾಲ ಮನ್ನಾ, ಬೆಳೆ ಹಾನಿ ಪರಿಹಾರ ಸೌಲಭ್ಯ ಎಲ್ಲದಕ್ಕೂ ಬಳಕೆಯಾಗಲಿದೆ. ಹಾಗಾಗಿ ಇದು ತೀರಾ ಮಹತ್ವದ್ದಾಗಿದೆ.

ರಾಜ್ಯ ಸರಕಾರ ಮಂಗಳವಾರ ಬೆಳೆ ಸಮೀಕ್ಷೆಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ರೈತರು ತಮ್ಮ ಆ್ಯಂಡ್ರಾಯಿಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಅದರ ಮೂಲಕ ತಮ್ಮ ಹೊಲದ ಬೆಳೆ ಮಾಹಿತಿಯನ್ನು ತಾವೇ ಆ್ಯಪ್ ನಲ್ಲಿ ಸಮೀಕ್ಷೆ ಬಾಡಬಹುದು.

ಇದನ್ನೂ ಓದಿ: ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

ಆಸಕ್ತ ಯುವಕರು ಬೆಳೆ ಸಮೀಕ್ಷೆ ಮಾಡಲು ರೈತರಿಗೆ ನೆರವಾಗಲು ಮುಂದೆ ಬಂದರೆ ಅವರಿಗೆ ಪ್ರತೀ ಒಬ್ಬ ರೈತರ ಸಮೀಕ್ಷೆಗೆ 10 ರಿಂದ 20 ರೂ.ವರೆಗೆ ಪ್ರೋತ್ಸಾಹಧನ ಕೂಡ ನೀಡಲಾಗುತ್ತದೆ. ಅಂಥ ಆಸಕ್ತ ಯುವಕರು ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಒಂದು ದಿನದ ತರಬೇತಿ ಪಡೆದುಕೊಳ್ಳಬೇಕು.

ಇದನ್ನೂ ಓದಿ: ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ- ಪ್ರೋತ್ಸಾಹಧನ ಹೆಚ್ಚಳ

ಸಾಲ, ಪರಿಹಾರಕ್ಕೆ ಬಳಕೆ

ರೈತರು ಮಾಡುವ ಈ  ಬೆಳೆ ಸಮೀಕ್ಷೆ ಮಾಹಿತಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ ಬಳಕೆಯಾಗಲಿದೆ. ಬೆಳೆ ವಿಮೆ, ಬೆಳೆ ಕಟಾವು ಪ್ರಯೋಗ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು, ಆರ್.ಟಿ.ಸಿಯಲ್ಲಿ ಬೆಳೆ ವಿವರ ದಾಖಲಾತಿ ಮಾಡುವುದಕ್ಕೂ ಆಧಾರವಾಗಲಿದೆ.

ಇದನ್ನೂ ಓದಿ: ಪಾಲಿಹೌಸ್ ಶೀಟ್ ಬದಲಾವಣೆಗೆ ಶೇ. 50 ಸಬ್ಸಿಡಿ

ಮುಖ್ಯವಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ವರದಿ ಸಿದ್ಧಪಡಿಸಲು, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ಮಾಹಿತಿ ಸಿದ್ದಪಡಿಸಲು ಮತ್ತು ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭಗಳಲ್ಲಿ ಬೆಳೆ ಸಮೀಕ್ಷೆಯ ಮಾಹಿತಿ ಬಳಕೆಯಾಗಲಿದೆ. ಹಾಗಾಗಿ ಈ ಸಮೀಕ್ಷೆ ಬಹಳ ಮುಖ್ಯಾಗಿದೆ ಎನ್ನುವುದು ಅಧಿಕಾರಿಗಳ ಸಲಹೆ.

ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ನಮೂದು ಮಾಡುವುದು ತಿಳಿಯದೆ ಇದ್ದರೆ, ಹಳ್ಳಿಗಳಲ್ಲಿರುವ ವಿದ್ಯಾವಂತ ಯುವಕರು ರೈತರ ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಹಳ್ಳಿಯ ರೈತ ಸಮುದಾಯಕ್ಕೆ ಬೆಳೆಗಳನ್ನು ತಂತ್ರಾಂಶದ ಮೂಲಕ ದಾಖಲಿಸಲು ಸಹಕರಿಸಬಹುದು ಎಂದು ರಾಜ್ಯ ಸರಕಾರ ಕೋರಿದೆ.

ಇದನ್ನೂ ಓದಿ: ಟಾರ್ಪಾಲಿನ (ತಾಡಪತ್ರಿ)ಗಾಗಿ ರೈತರಿಂದ ಅರ್ಜಿ ಆಹ್ವಾನ

ಸಮೀಕ್ಷೆ ಮಾಡುವುದು ಹೇಗೆ?

ಪ್ಲೇಸ್ಟೋರ್ “ಫಾರ್ಮರ್ ಕ್ರಾಪ್ ಸರ್ವೆ ಆ್ಯಪ್’ ಎಂದು ಟೈಪ್ ಮಾಡಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಜಿಲ್ಲೆ, ತಾಲೂ, ಹೋಬಳಿ, ಸರ್ವೆ ನಂಬರ್ ನಮೂದಿಸಿ ತಮ್ಮ ಹೊಲದ ಫೋಟೊ ತೆಗೆದು ಬೆಳೆ ನಮೂದಿಸಬೇಕು. ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ಫೋಟೊ ಸಹಿತ ಆ್ಯಪ್ ನಲ್ಲಿ ನಮೂದು ಮಾಡಬೇಕು.

ಇದನ್ನೂ ಓದಿ: ರೇಷ್ಮೆಗೆ ಬಂಗಾರದ ಬೆಲೆ: ತಜ್ಞರ ಭವಿಷ್ಯ

ಆಗಸ್ಟ್ 24ರೊಳಗೆ ಮಾಡಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವಿವರಗಳನ್ನ ಅಪ್ ಲೋಡ್ ಮಾಡಲು ಆಗಸ್ಟ್ 10 ರಿಂದ 24 ವರೆಗೆ ಸಮಯ ನಿಗದಿ ಮಾಡಲಾಗಿದೆ. ರೈತರು ಈ ದಿನಾಂಕಗಳೊಳಗೆ ತಮ್ಮ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು.

ಆ ದಿನ ಮೀರಿದರೆ ಅಂದರೆ, ಆಗಸ್ಟ್ 24ರ ನಂತರ ಖಾಸಗಿ ವ್ಯಕ್ತಿಗಳಿಂದ ಜಮೀನುಗಳ ಬೆಳೆ ಮಾಹಿತಿಯನ್ನು ಚಿತ್ರದೊಂದಿಗೆ ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ಅಪ್‍ಲೋಡ್ ಮಾಡಲಾಗುಗುತ್ತದೆ.

ಇದನ್ನೂ ಓದಿ: ಔಷಧಿ ಸಸ್ಯ ಕೃಷಿಗೆ ಭರ್ಜರಿ ಬೇಡಿಕೆ: ಆದಾಯದ ದ್ವಿಗುಣಕ್ಕೆ ಸರಳ ದಾರಿ

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ಲಿಂಕ್:  https://play.google.com/store/apps/details?id=com.csk.KariffTPKfarmer.cropsurvey