ದಿನಚರಿ ಅಥವಾ ಆಹಾರ ಪದ್ಧತಿಯಲ್ಲಿ ಬದಲಾವಣೆ ಆದಾಗ ಶುರುವಾಗುವ ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತವೆ. ಆಪ್ತರೊಡನೆ ಸಹಜವಾಗಿ ಸಮಯ ಕಳೆಯುವುದಕ್ಕೂ ಈ ಸಮಸ್ಯೆಗಳು ಮುಜುಗರ ಉಂಟು ಮಾಡುತ್ತಿರುತ್ತವೆ.

ಕೆಲವೊಮ್ಮೆ ಔಷಧಗಳು ಪಡೆದಾಗ ಈ ಕಾಯಿಲೆಗಳು ತಾತ್ಕಾಲಿಕವಾಗಿ ವಾಸಿಯಾಗುತ್ತವೆ. ಆದರೆ, ಯೋಗದಲ್ಲಿನ ಸರಳ ಆಸನದ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪಾದಹಸ್ತಾಸನ ಇದಕ್ಕೆ ಬಹಳ ಪರಿಣಾಮಕಾರಿ ಆಸನ ಎಂದು ಸಾಬೀತಾಗಿದೆ.

ಇದನ್ನೂ ಓದಿ: ಬೊಜ್ಜು ಕರಗಿಸಲು ಸೂರ್ಯನಮಸ್ಕಾರ ಉಪಯುಕ್ತ ಆಸನ

ಪಾದಹಸ್ತಾಸನದಲ್ಲಿ ಕಾಲುಬೇರಳು ಮತ್ತು ಕಾಲುಗಂಟುಗಳನ್ನು ಸ್ಪರ್ಶಿಸಲಾಗುತ್ತದೆ. ಈ ಆಸನದಲ್ಲಿ ನಮ್ಮ ಹಸ್ತ ಗಳನ್ನು ಪಾದಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತ ಎಂದು ಕರೆಯುತ್ತಾರೆ. ಇದು ಕೇವಲ ವಾಯು, ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಗೆ ಅಷ್ಟೇ ಅಲ್ಲದೆ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಈ ಆಸನದಿಂದ ಜೀರ್ಣಕ್ರಿಯೆ ಉತ್ತಮಗೊಂಡು ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಬಹುತೇಕ ನಿತ್ಯ ಜೀವನದಲ್ಲಿ ಈ ಆಸನದ ಬಂಗಿಯನ್ನು ಮಾಡುತ್ತಿರುತ್ತೇವೆ. ಆದರೆ, ಅದರ ಕ್ರಮಬದ್ಧವಾಗಿ ಹೇಗೆ ಮಾಡುವುದು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಕೆಳಗಿನ ವಿಡಿಯೊ ಮೂಲಕ ಆಸನದ ಕ್ರಮಬದ್ಧ ಪದ್ಧತಿ ತಿಳಿಯಬಹುದು.

ಇದನ್ನೂ ಓದಿ: ಯೋಗ ಎಂದರೇನು? ಸೂಕ್ಷ್ಮ ಯೋಗ ಮಾಡುವುದು ಹೇಗೆ?

ಪಾದಹಸ್ತಾಸನದ ಪ್ರಯೋಜನಗಳು

1)ವಾಯು,ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ನಿವಾರಣೆ.

2)ಬೆನ್ನುಹುರಿ ಮತ್ತು ಬೆನ್ನು ಹಿಂದಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ

3)ಬೆನ್ನು ಹುರಿ ನರಗಳನ್ನು ಉತ್ತೇಜಿಸುತ್ತದೆ.

4) ಮೇಟಬೋಲಿಸಂ ವೇಗವನ್ನು ಹೆಚ್ಚಿಸುತ್ತದೆ.

5) ನರವ್ಯೂಹವನ್ನೂ ಬಲಗೊಳಿಸುತ್ತದೆ.

6)ಉದರದ ಸ್ನಾಯು ಮತ್ತು ತೊಡೆಗಳ ಸ್ನಾಯುಗಳನ್ನು ಬಲಪಡಿಸುತ್ತದೆ.

7) ಜೀರ್ಣಕ್ರಿಯೆಗೆ ಉತ್ತಮ ಆಸನ.

8) ಸಾಯಾಟಿಕಾ ಸಮಸ್ಯೆಗಳ ನಿವಾರಣೆಗೆ ಇದು ಉತ್ತಮ.

ಪ್ರಮುಖ ಸೂಚನೆಗಳು

ಬೇನ್ನು ಹುರಿ ಸಮಸ್ಯೆ ಮತ್ತು ಉದರದ ಸಂಬಂಧಿ ತೊಂದರೆ ಇರುವವರು ಈ ಆಸನ ಮಾಡುವುದು ಸೂಕ್ತವಲ್ಲ.

ವಿಡಿಯೊ ಮೂಲಕ ಆಸನ ಕಲಿಯಿರಿ…

ಉಚಿತ: ನಿರಂತರ ಯೋಗ ಮಾಹಿತಿಗಾಗಿ ಕೆಂಪು ಬಣ್ಣದ ಬೆಲ್ ಬಟನ್ ಒತ್ತಿ ಉಚಿತ ಸಬ್ಸಕ್ರೈಬ್ ಆಗಿ