ತೆಂಗು ಕೃಷಿಯಲ್ಲಿ ಇಳಿವರಿ ಕಡಿಮೆ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಅಗತ್ಯ ಇಲ್ಲ. ವೈಜ್ಞಾನಿಕ ಕೃಷಿ ಕೈಗೊಂಡರೆ ತೆಂಗು ಕೃಷಿಯಲ್ಲಿಯೂ ರೈತರು ಭರ್ಜರಿ ಲಾಭ ಪಡೆಯಬಹುದು. ಹೇಗೆ ನಾಟಿ ಮಾಡಬೇಕು, ನುಸಿ ರೋಗ, ಕಾಯಿ ಉದುರುವಿಕೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇಲ್ಲಿದೆ. ಸುಲಭ ಆದಾಯದ ದಾರಿ ಕಾಣಲು ರೈತರು ಸರಳ ಸೂತ್ರಗಳು ಅನುಸರಿಸಿದರೆ ಸಾಕು.

ತೆಂಗು ಕೃಷಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆದರೆ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಅದಕ್ಕೆ ಕಾರಣ ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸದೆ ಇರುವುದು.

ತೆಂಗು ಕೃಷಿಯಲ್ಲಿ ಎತ್ತರದ ತಳಿ ಮತ್ತು ಗಿಡ್ಡ ತಳಿ ಎಂದು ಎರಡು ವಿಧಗಳಿವೆ. ಅದರಲ್ಲಿ ಕೊಬ್ಬರಿಗಾಗಿ ಕೃಷಿ ಮಾಡುತ್ತಿದ್ದರೆ ಎತ್ತರದ ತಳಿಗಳನ್ನು ಬೆಳೆಯಬೇಕು. ಇದು 80ರಿಂದ 100 ವರ್ಷ ಬದುಕುತ್ತವೆ. 9 ಮೀಟರ್ ಅಂತರದಲ್ಲಿ ಈ ತಳಿಯನ್ನು ನಾಟಿ ಮಾಡಬೇಕು.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂ

ಎಳನೀರಿನಾಗಿ ತೆಂಗು ಕೃಷಿ ಮಾಡುತ್ತಿದ್ದರೆ ಗಿಡ್ಡ ತಳಿಯ ತೆಂಗು ಬೆಳೆಯುವುದು ಒಳ್ಳೆಯದು. 7.5 ಮೀಟರ್ ಅಂತರದಲ್ಲಿ ಈ ತಳಿಯ ಗಿಡಗಳನ್ನು ನಾಟಿ ಮಾಡಬೇಕು. ಇವು 50ರಿಂದ 60 ವರ್ಷ ಬದುಕುತ್ತವೆ. ಒಂದು ಎಕರೆಯಲ್ಲಿ ಸುಮಾರು 60-70 ಗಿಡ ನಾಟಿ ಮಾಡಬಹುದು.

ಇದರಲ್ಲಿಯೇ ಸುಧಾರಿತ ತಳಿಗಳು ಕೃಷಿ ಸಂಶೋಧನಾ ಕೇಂದ್ರಗಳು, ತೋಟಗಾರಿಕೆ ಇಲಾಖೆಗಳಲ್ಲಿ ಸಿಗುತ್ತವೆ. ರೈತರು ಅಲ್ಲಿಂದ ತೆಂಗಿನ ಗಿಡಗಳನ್ನು ಪಡೆಯಬಹುದು.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು

ಹೀಗೆ ನಾಟಿ ಮಾಡಿ
ಮೊದಲು ಮಣ್ಣು ಪರೀಕ್ಷೆ ಮಾಡಿಸಿ ಅದಕ್ಕೆ ಹೊಂದುವ ತಳಿ ಯಾವುದು ಎಂದು ತಿಳಿಬೇಕು. ಅಂದರೆ, ಎತ್ತರ ತಳಿಯೋ, ಗಿಡ್ಡ ತಳಿ ಯೋಗ್ಯವೋ ಎನ್ನುವುದು. ಒಂದು ಮೀಟರ್ ಆಳದ ಗುಂಡಿ ತೆಗೆದು ಮೇಲ್ಮಣ್ಣು ಹಾಗೇ ಇಟ್ಟುಕೊಂಡು ಗಿಡ ನೆಟ್ಟ ಬಳಿಕ 60 ಸೆ.ಮಿ. ನಷ್ಟು ಮೇಲ್ಮಣ್ಣನ್ನು ಹಾಕಬೇಕು. ಅದರ ಜತೆಗೆ ಪ್ರತಿ ಗಿಡಕ್ಕೆ 20 ಕೆಜಿ. ಸಗಣಿ ಗೊಬ್ಬರ, ಬೇವಿನ ಹಿಂಡಿ ಹಾಕಬೇಕು.

ವರ್ಷಕ್ಕೆ 500 ಗ್ರಾಂ ಸಾರಜನಕ, 320 ಗ್ರಾಂ ರಂಜಕ, ಎರಡು ಕೆಜಿ. ಪೊಟ್ಯಾಶಿಂ, ಸಾವಯವ (ಸಗಣಿ) ಗೊಬ್ಬರ ಪ್ರತಿ ಗಿಡಕ್ಕೆ 50 ಕೆ.ಜಿ. ಹಾಕಬೇಕು. ಯೋಗ್ಯವಾದಷ್ಟು ನೀರು ಹಾಕಬೇಕು.

ಇದನ್ನೂ ಓದಿ: ಎಳನೀರ ಬಗ್ಗೆ ನಿಮಗೇನು ಗೊತ್ತು? ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು

ರೋಗ ನಿಯಂತ್ರಣ
ತೆಂಗಿನ ಮರದಲ್ಲಿ ಅಪೌಷ್ಠಿಕತೆ ಅಥವಾ ಸಮಗ್ರ ಪೋಷಕಾಂಶ ಸಿಗದೆ ಇದ್ದಾಗ ರೋಗಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ದೊಡ್ಡ ಸಮಸ್ಯೆಯಾಗಿರುವುದು ನುಸಿ ಕಾಟ. ಅದಕ್ಕೆ ತಜ್ಞರು ಹೇಳುವ ಪರಿಹಾರ ಇಲ್ಲಿದೆ.

ನುಸಿ ಕಾಟ ಇರುವ ತೆಂಗಿನ ಮರಕ್ಕೆ 1 ಕೆ.ಜಿ. ಯೂರಿಯಾ, 1.5 ಕೆ.ಜಿ. ಎಸ್ಎಸ್ ಪಿ, 2 ಕೆಜಿ ಪೊಟ್ಯಾಶ, 7.5 ಮಿಲಿ ಅಜಾದಿರೆಕ್ತಿನ್ ಮತ್ತು 7.5 ಮಿಲಿ ನೀರನ್ನು ಬೇರಿನ ಮುಖಾಂತರ ಕೊಡಬೇಕು. ಪೊಟ್ಯಾಶ ಹಾಕಿದರೆ ರೋಗ ನಿರೋಧಕ ಔಷಧ ಹೆಚ್ಚುತ್ತದೆ.

ಕೃಷಿಕನಾದ ಎಂ.ಎಸ್. ಧೋನಿ: ವಿಡಿಯೊ ಸಹಿತ ನೋಡಿ

ತೆಂಗಿನ ಮರದಿಂದ ಎರಡು ಅಡಿ ಬಿಟ್ಟು ಬೇರು ಉದ್ದವಾಗಿ ಕತ್ತರಿಸಿ ಪಾಲಿತಿನ್ ಬ್ಯಾಗ್ ನಲ್ಲಿ ಔಷಧ ಹಾಕಿ ರಬ್ಬರ್ ಅಂಟಿಸಬೇಕು. ಹೀಗೆ ಎರಡು ಮೂರು ಕಡೆ ಹಾಕಿದಾಗ ರೋಗ ವಾಸಿಯಾಗುತ್ತದೆ.

ಅಪೌಷ್ಟಿಕತೆ, ನೀರಿನ ಅಬಾವದಿಂದ ಕಾಯಿಗಳು ಉದುರುವುದೂ ಇದೆ. ಪರಾಗಸ್ಪರ್ಷ ಸರಿಯಾಗಿ ಆಗದೆ ಇದ್ದರೂ ಇಂಥ ಸಮಸ್ಯೆ ಆಗುತ್ತದೆ. ಅದಕ್ಕೆ ತೆಂಗು ಕೃಷಿ ಜತೆಯಲ್ಲಿಯೇ ಜೇನು ಸಾಕಾಣಿಕೆಯೂ ಮಾಡುವುದು ಉತ್ತಮ.

ಇಷ್ಟೆಲ್ಲ ಸೂತ್ರಗಳನ್ನು ಅನುಸರಿಸಿದರೆ ಹೆಚ್ಚಿನ ಇಳುವರಿ ಪಡೆದು ಆದಾಯ ಗಳಿಸಬಹುದು.