ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಗೊಬ್ಬರ ತಯಾರಿಕೆ, ಪಂಪ್ ಸೆಟ್ ರಿಪೇರಿ ಸೇರಿದಂತೆ ಕೃಷಿ ಮತ್ತು ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜತೆಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯದ ನೆರವು ಸಹ ಕೊಡಿಸಲಾಗುತ್ತದೆ.

ಗ್ರಾಮೀಣ ಭಾಗದ ಯುವಕ, ಯುವತಿಯರು ಈ ತರಬೇತಿಯಲ್ಲಿ ಪಾಲ್ಗೊಂಡು ಸಾಲ ಪಡೆದು ಸ್ವಯಂ ಉದ್ಯೋಗ ಆರಂಭಿಸಬಹುದು. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ. ಅದಕ್ಕೆ ಆಸಕ್ತರಿಂದ ಅರ್ಜಿ ಅಹ್ವಾನಿಸಲಾಗಿದೆ.

ತೋಟ ಆರಂಭಿಸಲು ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ

18 ರಿಂದ 40 ವರ್ಷ ವಯಸ್ಸಿನೊಳಗಿನ ಯುವಕ, ಯುವತಿಯರು ಈ ತರಬೇತಿ ಪಡೆಯಲು ಅರ್ಜ ಸಲ್ಲಿಸಬಹುದು. ತರಬೇತಿ ಸಮಯದಲ್ಲಿ ಅಭ್ಯರ್ಥಿಗಳಿಗೆ ಊಟ ಹಾಗೂ ವಸತಿ ಸೌಲಭ್ಯಳನ್ನು ಕೂಡ ನೀಡಲಾಗುತ್ತದೆ. ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿರುತ್ತದೆ.

ಕೃಷಿಯಲ್ಲೇ ತಿಂಗಳ ಪಗಾರ; ನಗರ ಉದ್ದೋಗಕ್ಕೆ ಸೆಡ್ಡು ಹೊಡೆದ ಯುವ ರೈತ

ಏನೇನು ತರಬೇತಿ?

ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿಯುಳ್ಳ ಯುವಕ, ಯುವತಿಯರಿಗಾಗಿ ಕುರಿ ಸಾಗಾಣಿಕೆ, ಕೋಳಿ ಸಾಗಾಣಿಕೆ, ಹೈನುಗಾರಿಕೆ, ಎರೆಹುಳಗೊಬ್ಬರ ತಯಾರಿಕೆ, ಪಂಪ್‌ಸೆಟ್ ದುರಸ್ತಿ, ಬ್ಯೂಟಿಪಾರ್ಲಲರ್, ಟೀಲರಿಂಗ್, ಪಾಪಡ್, ಪಿಕಲ್ ಮತ್ತು ಮಸಾಲ ಪೌಡರ್, ಎಂಬ್ರಾಯಡರಿ ಹಾಗೂ ಫ್ಯಾಬ್ರಿಕ್ ಪೇಟಿಂಗ್, ಸೆಲ್ ಫೋನ್ ರಿಪೇರಿ, ಸರ್ವಿಸ್, ಎಲಕ್ಟ್ರಿಕಲ್ ಹೌಸ್ ವೈರಿಂಗ್, ಮೋಟಾರ ರಿವೈಂಡಿಗ್ ಇನ್ನಿತರ ತರಬೇತಿ ನೀಡಲಾಗುತ್ತದೆ.

ಔಷಧಿ ಸಸ್ಯ ಕೃಷಿಗೆ ಭರ್ಜರಿ ಬೇಡಿಕೆ: ಆದಾಯದ ದ್ವಿಗುಣಕ್ಕೆ ಸರಳ ದಾರಿ

ಸಾಲ ಸೌಲಭ್ಯ ಮಾಹಿತಿ

ತರಬೇತಿಯಲ್ಲಿ ಬ್ಯಾಂಕಿನ ಹಾಗೂ ವಿವಿಧ ಸರಕಾರಿ ಸೌಲಭ್ಯಗಳ ಮಾಹಿತಿ ನೀಡಲಾಗುತ್ತದೆ. ಆದರಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿಯುಳ್ಳ ಗ್ರಾಮೀಣ ಭಾಗದ ಯುವಕ ಯುವತಿಯರು ಸ್ವ ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ಬಿಪಿಎಲ್ ಪಡಿತರ ಚೀಟಿ, ಆಧಾರ ಕಾರ್ಡ್ ಹೊಂದಿರಬೇಕು.

ರೇಷ್ಮೆಗೆ ಬಂಗಾರದ ಬೆಲೆ: ತಜ್ಞರ ಭವಿಷ್ಯ

ತರಬೇತಿ ಸಮಯದಲ್ಲಿ ಅನುಭವ ಸೇರಿದಂತೆ ಇನ್ನಿತರ ಸಂಪೂರ್ಣ ವಿವರವನ್ನು ಆರ್‌ಸೇಟಿ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ,) ಸಂಸ್ಥೆಯಲ್ಲಿ ದೊರೆಯುವ ಅರ್ಜಿ ಫಾರಂನಲ್ಲಿ ತುಂಬಿ ‘ನಿರ್ದೇಶಕರು ಆರ್‌ಸೇಟಿ ಸಂಸ್ಥೆ, ನವೋದಯ ಶಾಲೆಯ ಎದುರಗಡೆ ಬಿಸಿಎಂ ಬಾಲಕರ ವಸತಿ ನಿಲಯ ಹತ್ತಿರ ರಾಜಮಾತದೇವಿ ದೇವಸ್ಥಾನ ಆಶಾಪೂರು ರಸ್ತೆ’ ಇವರಿಗೆ ಸಲ್ಲಿಸಬೇಕು.

ಉಚಿತವಾಗಿ ತೋಟ ಮಾಡಿ ನರೇಗಾ ಯೋಜನೆಯಡಿ ಹಣ ಗಳಿಸಿ

ಅರ್ಜಿ ಸಲ್ಲಿಸಲು ಕೊನೆ ದಿನ

ಅರ್ಜಿ ಸಲ್ಲಿಸಲು ಸೆಪ್ಟಂಬರ್ 10 ಕೊನೆಯ ದಿನಾಂಕವಾಗಿದೆ. ಮೊದಲು ಬಂದ 30 ರಿಂದ 35 ಅರ್ಜಿಗಳನ್ನು ಪರಿಗಣನೆಗೆ ತೆಗದುಕೊಳ್ಳಲಾಗುವುದು. ಆಸಕ್ತಿಯುಳ್ಳ ಗ್ರಾಮೀಣ ಯುವಕ, ಯುವತಿಯರು ಕೂಡಲೆ ಅರ್ಜಿ ಸಲ್ಲಿಸಬೇಕು.

ರೈತರಿಗೆ 5,000 ರೂ. ಆರ್ಥಿಕ ನೆರವು

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9108688333, 9449460288, 9110448595 ಸಂಪರ್ಕಿಸಬೇಕೆಂದು ರಾಯಚೂರು ಜಿಲ್ಲೆಯ ಎಸ್‌ಬಿಐ ಗ್ರಾ.ಸ್ವ.ಉದ್ಯೋಗ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.