ಬದಲಾದ ಜೀವನ ಶೈಲಿಯಿಂದ ಒಂದಿಲ್ಲೊಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಇತ್ತೀಚೆಗೆ ಶ್ವಾಸಕೋಶ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದಕ್ಕೆ ಪೂರಕವಾಗಿ ಉಸಿರಾಟ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅರ್ಧ ಚಕ್ರಾಸನ ಬಹಳ ಉಪಯುಕ್ತವಾಗಿವೆ.

ಅರ್ಧ ಚಕ್ರಾಸನ ಎಂದರೆ ನಮ್ಮ ದೇಹವನ್ನು ಸೊಂಟದ ಭಾಗದಿಂದ ಹಿಂದಕ್ಕೆ ಅರ್ಧ ಚಕ್ರದ ಆಕಾರದಲ್ಲಿ ಭಾಗಿಸುವ ಯೋಗದ ಭಂಗಿ. ಈ ಆಸನ ಮಾಡುವಾಗ ನಮ್ಮ ದೇಹ ಅರ್ಧ ಚಕ್ರ ಅಥವಾ ಅರ್ಧ ಗಾಲಿಯಂತೆ ಇರುವದರಿಂದ ಇದನ್ನು ಅರ್ಧ ಚಕ್ರಾಸನ ಎಂದು ಕರೆಯಲಾಗಿದೆ.

ಈ ಆಸನವನ್ನು ನಿಯಮಿತವಾಗಿ ಮಾಡುವುದರಿಂದ ಇದರ ಪ್ರಯೋಜನ ಪಡೆಯಲು ಸಾಧ್ಯವಿದೆ. ಆಸನದ ಬಗ್ಗೆ ಈ ಕೆಳಗಿನ ವಿಡಿಯೊದಲ್ಲಿ ಇನ್ನಷ್ಟು ಮಾಹಿತಿ ನೀಡಲಾಗಿದೆ.

ಉಪಯೋಗ

ಬೆನ್ನಿನ ಮೂಳೆಯನ್ನು ಸಡಿಲಗೊಳಿಸುತ್ತದೆ. ಬೆನ್ನಿನ ನರಗಳನ್ನು ಬಲಗೊಳಿಸುತ್ತದೆ. ಉಸಿರಾಟದ ಸಾಮರ್ಥ್ಯ ಹೆಚ್ಚಿಸುತ್ತದೆ. cervical spondylitis ನೋವನ್ನು ನಿವಾರಿಸುತ್ತದೆ. ಈ ಆಸನವನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಸತತವಾದ ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಶಾಶ್ವತ ಮುಕ್ತಿ ಹೊಂದಬಹುದು.

ಎಚ್ಚರಿಕೆ

ಅಧಿಕ ರಕ್ತದೊತ್ತಡ ಅಥವಾ ಅಧಿಕ ಒತ್ತಡದಿಂದ ನರಳುವ ಜನರು ಹಿಂದಕ್ಕೆ ಭಾಗುವಾಗ ಎಚ್ಚರಿಕೆ ವಹಿಸಬೇಕು. ತಲೆಸುತ್ತು(vertigo) ಇರುವಂಥವರು ಈ ಆಸನ ಮಾಡಬಾರದು.