ಜನ್ಮ ದಿನವನ್ನು ಕೇಕ್ ಕತ್ತರಿಸಿ, ಹೊಸ ಬಟ್ಟೆ ಧರಿಸಿ ಆಚರಿಸುವ ಜನಗಳ ಮಧ್ಯೆ ಇಲ್ಲೊಬ್ಬ ಬಾಲಕ ಕೃಷಿ ಮಾಡಿ ಜನ್ಮ ದಿನ ಆಚರಿಸಿಕೊಂಡಿರುವುದು ವೈರಲ್ ಆಗಿದೆ. ಪುಟ್ಟ ಬಾಲಕ ತನ್ನ ಜನ್ಮ ದಿನದ ದಿನ ಹೊಲದಲ್ಲಿ ಬಿತ್ತನೆ ಮಾಡಿ ವಿಶೇಷವಾಗಿ ಗಮನ ಸೆಳೆದಿದ್ದಾನೆ.

ಕೃಷಿ ಬಗ್ಗೆ ಇರುವ ಬಾಲಕನ ಉತ್ಸಾಹ, ಪ್ರೀತಿ ರೈತ ಸುಮುದಾಯದ ಮಹತ್ವಕ್ಕೆ ಸಾಕ್ಷಿಯಾಗಿದೆ. ಬಿತ್ತನೆ ಬೀಜ ಇರುವ ಪುಟ್ಟ ಬುಟ್ಟಿಯನ್ನು ರೈತರಂತೆ ಕಂಕುಳಲ್ಲಿ ಹಿಡಿದು ಪುಟ್ಟ ಕೈಗಳಿಂದ ಹೊಲದ ಸಾಲಿನಲ್ಲಿ ಬಿತ್ತುತ್ತಿರುವ ಪರಿ ನೋಡುಗರಿಗೂ ಪುಳಕ ನೀಡುತ್ತದೆ.

ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಚಿರಾಗ ಪಾಟೀಲ್ ಇಂತದ್ದೊಂದು ವಿಶೇಷತೆಯಿಂದ ಸುದ್ದಿಯಾಗಿದ್ದಾರೆ. ಅವರ ತಂದೆ ಮಂಜು ಪಾಟೀಲ ವಕೀಲರಾಗಿದ್ದಾರೆ. ಚಿರಾಗ ಪಾಟೀಲ್ ತಮ್ಮದೇ ಹೊಲದಲ್ಲಿ ಕೃಷಿ ಕಾರ್ಮಿಕರ ಜತೆ ಸೇರಿ ಕೃಷಿ ಕೆಲಸ ಮಾಡಿದ್ದಾನೆ.

ಕಳ್ಳರಿಂದ ಗೋ ರಕ್ಷಿಸಲು ರೈತ ಮಾಡಿದ ಉಪಾಯ ವೈರಲ್

ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಇಂದಿನ ಕಾಲದಲ್ಲಿ ಬಾಲಕನೊಬ್ಬ ಜನ್ಮ ದಿನ ಅಪ್ಪನೊಂದಿಗೆ ಹೊಲಕ್ಕೆ ಬಂದು ಕೃಷಿ ಕಾಯಕ ಮಾಡಿರುವುದು ವಿಶೇಷತೆ ಎನಿಸಿದೆ. ಈ ಬಾಲಕ ಉಳಿದ ದಿನಗಳಲ್ಲಿಯೂ ಹೊಲದಲ್ಲಿಯೇ ಕೃಷಿ ಚಟುವಟಿಕೆ ಮಾಡುವುದನ್ನು ಇಷ್ಟಪಡುತ್ತಾನೆ. ತೆನೆ ಹೊತ್ತು ತರುವುದು, ಟ್ರ್ಯಾಕ್ಟರ್ ಸವಾರಿ ಮಾಡುವುದನ್ನು ಇಷ್ಟ ಪಡುತ್ತಾನೆ ಎನ್ನುತ್ತಾರೆ ಅವರ ತಂದೆ ಮಂಜುನಾಥ ಪಾಟೀಲ್.

ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ಖರ್ಚಿಲ್ಲದೆ ಕೀಟ ಹತೋಟಿ ಮಾಡುವ ಅಷ್ಟ ಸೂತ್ರಗಳು

ಕೊರೊನಾ ವೈರಸ್ ಕಾಲಿಟ್ಟ ಬಳಿಕ ಕಚೇರಿ, ಕಂಪನಿಗಳ ಕೆಲಸ ದುಬಾರಿಯಾಗಲಾರಂಭಿಸಿವೆ. ಹಾಗಾಗಿ ಹೆಚ್ಚಿನವರು ಕೃಷಿಯತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇನ್ನು ಕೆಲವರು ಕೃಷಿಯನ್ನೇ ಮುಖ್ಯ ಉದ್ಯೋಗವಾಗಿಸುವತ್ತ ಮುನ್ನಡೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಕೃಷಿ ಒಲವು ಬೆಳೆಯುತ್ತಿರುವುದು ರೈತ ಸಮುದಾಯದ ಹೆಮ್ಮೆ.