ಕೋವಿಡ್ 19 ಕೊರೊನಾ ಬಿಕ್ಕಟ್ಟಿನಿಂದ ಹೊರಬರಲು ಭಾರತೀಯರೆಲ್ಲರೂ ದೇಶದ ಪರವಾಗಿ ನಿಂತಿದ್ದಾರೆ. ಹಲವರು ಅನೇಕ ರೀತಿಯಲ್ಲಿ ದೇಶಕ್ಕೆ, ತಮ್ಮ ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಅದರಲ್ಲಿ 15 ವರ್ಷದ ಯುವ ಕ್ರೀಡಾಪಟು ಹರದಿ ಬೂಟು ಮಾರಾಟ ಮಾಡಿ ಗಳಿಸಿದ 3.30 ಲಕ್ಷ ರೂ. ಹಣವನ್ನು ದೇಶಕ್ಕೆ ಅರ್ಪಿಸಿದ್ದಾರೆ. ಅಂದರೆ ಪ್ರಧಾನಿ ಪರಿಹಾರ ನಿಧಿಗೆ ಪಾವತಿಸಿದ್ದಾರೆ.

ನೊಯ್ಡಾದ ಅರ್ಜುನ ಭಾಟಿ ಸದ್ಯ ಕಿರಿಯರ ವಿಭಾಗದ ನಂ.1 ಗಾಲ್ಫ್ ಕ್ರೀಡಾಪಟು. ಅವರೇ ತಮ್ಮ ಹರಿದ ಬೂಟು ಮಾರಾಟ ಮಾಡಿದ್ದರಲ್ಲಿ ಬಂದ ಹಣವನ್ನು ದೇಶಕ್ಕೆ ಕೊಟ್ಟಿದ್ದಾರೆ. ಅಲ್ಲದೆ, “ನಾವು ಇರುತ್ತೇವೊ, ಇಲ್ಲವೊ ಗೊತ್ತಿಲ್ಲ. ಆದರೆ, ದೇಶ ಉಳಿಯಬೇಕು’ ಎನ್ನುವ ಸಂದೇಶದೊಂದಿಗೆ ತಮ್ಮ ದಾನದ ಸಂದೇಶವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 15 ವರ್ಷದ ಈ ಯುವ ಕ್ರೀಡಾಪಟು ಮಾರಾಟ ಮಾಡಿರುವ ಬೂಟಿನ ಹಿಂದೆ ಒಂದು ರೋಚಕ ಕತೆಯೇ ಅಡಗಿದೆ.

ಅದು 2018ರ ಯುಎಸ್ಎ ವಿಶ್ವ ಚಾಂಪಿಯನ್ ಶಿಪ್. ಆ ಸ್ಪರ್ಧೆಗೆ ಅರ್ಜುನ್ ಭಾಟಿ ಭಾಗವಹಿಸುವವರಿದ್ದರು. ಆದರೆ, ಚಾಂಪಿಯನ್ ಶಿಪ್ ಗಿಂತ ಒಂದು ದಿನ ಮೊದಲು ಎಡಗಾಲಿನ ಹೆಬ್ಬೆರಳಿಗೆ ಗಾಯ ಆಗಿ ರಕ್ತ ಸೋರಿತ್ತು. ಉಗುರಿನ ಬಳಿ ಗಾಯ ಆದರೆ ಎಷ್ಟು ನೋವಾಗುತ್ತದೆ ಎನ್ನುವುದು ಅನುಭವಿಸಿದವರಿಗೆ ಗೊತ್ತು. ಆ ಸಂದರ್ಭ ಬಹಳ ನೋವು ಅನುಭವಿಸಿರುವುದಾಗಿ ಅರ್ಜುನ್ ಭಾಟಿ ಹೇಳಿಕೊಂಡಿದ್ದಾರೆ.

ಗಾಯದ ನಡುವೆಯೇ ಸ್ಪರ್ಧೆಗೆ ಸಿದ್ಧರಾದ ಅರ್ಜುನ್ ಸ್ಪರ್ಧೆಯಲ್ಲಿ ಭಾವಹಿಸುವುದಕ್ಕಾಗಿ ಬೂಟಿನ ಒಂದು ಭಾಗ, ಅಂದರೆ ಹೆಬ್ಬೆರಳು ಇರುವ ಕಡೆ ಕತ್ತರಿಸಿರು. ಚೂರು ಕತ್ತರಿಸಿದ ಬೂಟು ಹಾಕಿಕೊಂಡೇ ಅರ್ಜುನ್  ಗಾಲ್ಫ್ ಆಡಿದರು. ಐದು ದಿನ ಅದೇ ಸ್ಥಿತಿಯಲ್ಲಿ ಶ್ರಮವಹಿಸಿ ಆಡಿದರು. ಕಾಲು ನೋವಿನ ನಡೆವೆಯೂ ಅರ್ಜುನ್ ಪೂರ್ತಿ ಟ್ರೋಫಿಯನ್ನು ಗೆದ್ದೇ ಬಿಟ್ಟರು. ಆ ದಿನ ಎಂದಿಗೂ ಮರೆಯದ ದಿನವಾಗಿತ್ತು. ಅದಕ್ಕಾಗಿಯೇ ಆ ಹರಿದ ಬೂಠನ್ನು ಕಾಪಾಡಿಕೊಂಡಿದ್ದಾಗಿ ಅರ್ಜುನ್ ಹೇಳಿಕೊಂಡಿದ್ದರು.

ಇಂದು ದೇಶ ಕಷ್ಟದ ಸ್ಥಿತಿಯಲ್ಲಿರುವ ಕಾರಣಕ್ಕೆ ಆ ಹರಿದ ಬೂಟನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ವನಿಶ ಪ್ರಧಾನ ಎನ್ನುವವರು 3.30 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ. ಆ ಎಲ್ಲ ಹಣವನ್ನು ಅರ್ಜುನ್ ಪ್ರಧಾನಿ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. 15 ವರ್ಷದ ಈ ಕ್ರೀಡಾಪಟುವಿನ ದೇಶ ಪ್ರೇಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡಾಡಿದ್ದಾರೆ. “ನಿಮ್ಮ ದೇಶ ಸೇವೆ ಇತರರಿಗೂ ಪ್ರೇರಣಾದಾಯಕವಾಗಿದೆ’ ಎಂದು ಅರ್ಜುನ ಅವರನ್ನು ಮೋದಿ ಹೊಗಳಿ ಟ್ವೀಟ್ ಮಾಡಿದ್ದಾರೆ.

ದೆಹಲಿ ಮೂಲದ ಅರ್ಜುನ್ ಅವರು 2014 ಸೆಪ್ಟೆಂಬರ್ 7 ರಂದು ಜನಿಸಿದ್ದಾರೆ. 2016 ಮತ್ತು 2018ರ ಯುಎಸ್ ಕಿಡ್ಸ್ ಜೂನಿಯರ್ ಗಾಲ್ಫ್ ವರ್ಡ್ ಚಾಂಪಿಯನ್ ಶಿಪ್, 2019ರ ಯುಎಸ್ ಕಾಲ್ ಅವೇ ಕಿಡ್ಸ್ ಜೂನಿಯರ್ ಗಾಲ್ಫ್ ವರ್ಡ್ ಚಾಂಪಿಯನ್ ಶಿಪ್ ಗೆದ್ದಿದ್ದಾರೆ.