ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ 2020-21 ನೇ ಸಾಲಿನ ಅನುದಾನದಲ್ಲಿ ಕುರಿ ಸಾಕಾಣಿಕೆದಾರರಿಗೆ ಟೆಂಟ್ ಹಾಗೂ ಇತರ ಪರಿಕರಗಳನ್ನು ಉಚಿತವಾಗಿ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಜಿದಾರರು ಕನಿಷ್ಟ 20 ಕುರಿ ಅಥವಾ ಮೇಕೆಗಳನ್ನು ಹೊಂದಿರಬೇಕು. ನಿಗಮದಿಂದ ನೀಡಲಾದ ಪಾಸ್‍ಬುಕ್ ಗಳನ್ನು ಹೊಂದಿದ್ದು, ಸಂಚಾರಿ, ಅರೆಸಂಚಾರಿ ಅಥವಾ ವಲಸೆ ಕುರಿಗಾರರಾಗಿರಬೇಕು. ಅಲ್ಲದೆ, ನಿಗಮಕ್ಕೆ ನೊಂದಣಿಯಾಗಿರುವ ಸಹಕಾರ ಸಂಘದ ಸದಸ್ಯರಾಗಿರುವ ಬಗ್ಗೆ ಸಂಬಂಧಿಸಿದ ಪಶುವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಲಗತ್ತಿಸಬೇಕು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೋಂದಣಿಯಾಗಿರುವ ಐದು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಸಂಚಾರಿ, ವಲಸೆ ಕುರಿಗಾರರಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ.

ಇದನ್ನೂ ಓದಿ: ಟಗರು ಸಾಕಿ ತಿಂಗಳಿಗೆ ಲಕ್ಷಾಂತರ ಆದಾಯ ಗಳಿಸುವ ರೈತ

ಈ ಹಿಂದೆ ನಿಗಮದಿಂದ ಟೆಂಟ್‍ನ್ನು ಪಡೆದ ಫಲಾನುಭವಿ ಮತ್ತು ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಪಶು ವೈದ್ಯಾಧಿಕಾರಿಗಳು, ತಾಲ್ಲೂಕಿನ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಧಾರವಾಡದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಡು ಸಾಕಾಣಿಕೆಗೆ ತಳಿಗಳ ಜ್ಞಾನ