ಮೀನುಮಾರಾಟಗಾರರಿಗೆ ಮೀನುಮಾರಾಟ ಮಾಡಲು ದ್ವಿಚಕ್ರ, ತ್ರಿಚಕ್ರ ,ನಾಲ್ಕು ಚಕ್ರವಾಹನ ಖರೀದಿಸಲು ಕ್ರಮವಾಗಿ ರೂ. 10,000, ರೂ. 30,000 ರೂ. 35000 ಸಹಾಯಧನ ವಿತರಣೆ ಮಾಡಲಾಗುತ್ತದೆ. ಬಿತ್ತನೆಗೆ ಯೋಗ್ಯವಾದ, ಮೀನುಮರಿಗಳನ್ನು ಲಭ್ಯತೆಗೆ  ಅನುಗುಣವಾಗಿ ವಿತರಿಸಲಾಗುತ್ತದೆ. ಪರಿಶಿಷ್ಟ ಜಾತಿ/ಪಂಗಡದ  ಫಲಾನುಭವಿಗಳಿಗೆ  ಮೀನುಗಾರಿಕೆಗೆ ಅಗತ್ಯವಿರುವ ಸಲಕರಣೆಗಳನ್ನು ಘಟಕ ವೆಚ್ಚ 10,000 ರೂ. ಉಚಿತ ವಿತರಣೆ  ಮಾಡಲಾಗುತ್ತದೆ.

ರಾಜ್ಯವಲಯ ಯೋಜನೆಗಳು:
ಮತ್ಸ್ಯ ಕೃಷಿ ಆಶಾ ಕಿರಣ: ರಾಜ್ಯ ಸರ್ಕಾರವು 2020-21 ನೇ ಸಾಲಿನಿಂದ ಅಯ್ದ  ಪೂರ್ಣಕಾಲಿಕ ಕೆರೆಗಳಲ್ಲಿ ಅರೆ ತೀವ್ರ ಮೀನು ಕೃಷಿ ಕೈಗೊಳ್ಳಲು ಮತ್ಸ್ಯ ಕೃಷಿ ಆಶಾ ಕಿರಣ ಯೋಜನೆ ಅನುಷ್ಠಾನಗೊಳಿಸಲು ಘೋಷಿಸಿದೆ. ಈ ಯೋಜನೆಯನ್ನು ಗ್ರಾಮ  ಪಂಚಾಯಿತಿ ಕೆರೆಗಳು ಮತ್ತು  ಖಾಸಗಿ ಕೆರೆಗಳಿಗೂ ವಿಸ್ತರಿಸಲಾಗಿದೆ.
ಕನಿಷ್ಠ 0.4 ಹೆಕ್ಟೇರ್ ಮತ್ತು ಗರಿಷ್ಠ 50 ಹೆಕ್ಟೇರ್  ಉಪಯುಕ್ತ ಜಲವಿಸ್ತೀರ್ಣವುಳ್ಳ ಗ್ರಾಮ  ಪಂಚಾಯಿತಿ ಹಾಗೂ  ಇಲಾಖೆ ಕೆರೆಗಳು ಮತ್ತು ಖಾಸಗಿ ಕ್ಷೇತ್ರದ ಕನಿಷ್ಠ 0.5 ಎಕರೆ ಜಲವಿಸ್ತೀರ್ಣ ಮೇಲ್ಪಟ್ಟ ಕೊಳಗಳನ್ನು ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಆಯ್ಕೆ ಮಾಡಬಹುದು.

ಈ ಯೋಜನೆಯಡಿ  ಅರೆ ತೀವ್ರ ಮೀನುಕೃಷಿ ಕೈಗೊಳ್ಳಲು 1 ಹೆಕ್ಟೇರ್ ಜಲವಿಸ್ತೀರ್ಣಕ್ಕೆ ರೂ.54000 ಘಟಕ ವೆಚ್ಚ ವಿದ್ದು (4000 ಬಲಿತ ಬಿತ್ತನೆ ಮರಿಗಳಿಗೆ ರೂ. 4000  ಮತ್ತು 2 ಟನ್ ಕೃತಕ ಆಹಾರಕ್ಕೆ ರೂ.50,000 ಒಟ್ಟು 54,000) ಘಟಕ  ವೆಚ್ಚದ ಶೇ.50 ರಷ್ಟು  ಅಂದರೆ ಪ್ರತಿ ಹೆಕ್ಟೇರ್ ಉಪಯುಕ್ತ ಜಲವಿಸ್ತೀರ್ಣಕ್ಕೆ ರೂ.27,000 ಸಹಾಯಧನವನ್ನಾಗಿ 3 ಕಂತುಗಳಲ್ಲಿ ನೀಡಲಾಗುವುದು.

ಸೀಗಡಿ ಮತ್ತು ಹಿನ್ನೀರು  ಮೀನು ಕೃಷಿಗೆ ಪ್ರೋತ್ಸಹ:
ಒಳನಾಡು ಜಲಸಂಪನ್ಮೂಲಗಳಲ್ಲಿ ಅರೆ ತೀವ್ರ ಮೀನು ಕೃಷಿಯಡಿ ಈಗಾಗಲೇ  ಬಳಸಲಾಗುತ್ತಿರುವ ಕಾಟ್ಲ, ರೋಹು, ಮೃಗಾಲ್ ಮತ್ತು ಸಾಮಾನ್ಯ ಗೆಂಡೆ ಮೀನಿನ  ತಳಿಗಳ ಜೊತೆಗೆ ಸಿಹಿನೀರು ಸೀಗಡಿ ಬೆಳಸಬಹುದಾಗಿದೆ.  ಈ ಯೋಜನೆ ಅನುಷ್ಠಾನಕ್ಕೆ ಉಂಟಾಗುವ ವೆಚ್ಚದ ಶೇ.50ರಷ್ಟು  ಗರಿಷ್ಠ ರೂ. 50,000 ಸಹಾಯಧನ ನೀಡಲಾಗುತ್ತದೆ.
ಫಲಾನುಭವಿಯು (ವ್ಯಕ್ತಿ/ಸಂಘ), ಇಲಾಖಾ ವ್ಯಾಪ್ತಿಗೆ/ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ಪೂರ್ಣಕಾಲಿಕ/ ದೀರ್ಘಕಾಲಿಕ ಕೆರೆಯ  ಮೀನು ಪಾಶುವಾರು ಹಕ್ಕನ್ನು  ಗುತ್ತಿಗೆ ಅಥವಾ ಟೆಂಡರ್ ಕಂ ಹರಾಜು ಮೂಲಕ ಪಡೆದಿರತಕ್ಕದ್ದು.

ಕನಿಷ್ಠ 6 ತಿಂಗಳುಗಳ ಕಾಲ 5 ಅಡಿಗಿಂತ ಹೆಚ್ಚು ನೀರಿನ ಮಟ್ಟ ಹೊಂದಿರಬೇಕು. ಜಲವಿಸ್ತೀರ್ಣದ ಶೇ.50 ರಷ್ಟು ಭಾಗವನ್ನು  ಉಪಯುಕ್ತ  ಜಲ ವಿಸ್ತೀರ್ಣ ಎಂದು ಪರಿಗಣಿಸುವುದು. ಕನಿಷ್ಠ 0.2 ಹೆಕ್ಟೇರ್  ಮತ್ತು ಗರಿಷ್ಠ 50 ಹೆಕ್ಟೇರ್ ಉಪಯುಕ್ತ ಜಲ ವಿಸ್ತೀರ್ಣವುಳ್ಳ ಇಲಾಖಾ ಕೆರೆಗಳು/ಗರಿಷ್ಠ 25 ಹೆಕ್ಟೇರ್ ಉಪಯುಕ್ತ  ಜಲವಿಸ್ತೀರ್ಣವುಳ್ಳ ಗ್ರಾಮ ಪಂಚಾಯತ್ ಕೆರೆಗಳು ಈ ಕಾರ್ಯಕ್ರಮದ  ಅನುಷ್ಠಾನಕ್ಕಾಗಿ ಆಯ್ಕೆ ಮಾಡಲಾಗುವುದು. 

ಖಾಸಗಿ ಕ್ಷೇತ್ರದ (ಸ್ವಂತ ಕೊಳಗಳಲ್ಲಿ) ಕನಿಷ್ಠ 0.2 ಹೆಕ್ಟೇರ್ ರಿಂದ ಗರಿಷ್ಠ 2 ಹಕ್ಟೇರ್ ಜಲ  ವಿಸ್ತೀರ್ಣವರೆಗಿನ  ಕೊಳಗಳನ್ನು  ಆಯ್ಕೆ ಮಾಡಬಹುದು.  ಸ್ವಂತ ಕೊಳಗಲ್ಲಿ  ಸಹಿನೀರು ಸೀಗಡಿ/ಸಮುದ್ರ ಸೀಗಡಿ ಕೃಷಿ ಕೈಗೊಳ್ಳಲು ಪ್ರತಿ ಹೆಕ್ಟೇರ್ ಜಲವಿಸ್ತೀರ್ಣಕ್ಕೆ 10000 ಜುವೆನೈಲ್ ಸೀಗಡಿಮರಿಗಳನ್ನು  (ಎuveಟಿiಟes) ಬಿತ್ತನೆ ಮಾಡಲು ಹಾಗೂ  1 ಟನ್ ಕೃತಕ ಆಹಾರ ಉಪಯೋಗಿಸಲು  ಅವಕಾಶ  ಮಾಡಲಾಗಿದೆ. ಪ್ರಸ್ತುತ ಇರುವ  ದರಗಳ ಪ್ರಕಾರ 10,000 ಬಲಿತ ಸೀಗಡಿ ಮರಿಗಳಿಗೆ   ಮರಿ ಒಂದಕ್ಕೆ ರೂ. 4ರಂತೆ ಒಟ್ಟು  ರೂ.40,000 ಹಾಗೂ 1 ಟನ್ ಕೃತಕ ಆಹಾರಕ್ಕೆ ಪ್ರತಿ ಟನ್ ರೂ.60,000 ವೆಚ್ಚವಾಗುತ್ತದೆ.

ಹೀಗೆ ಪ್ರತಿ ಹೆಕ್ಟೇರ್ ಘಟಕ ವೆಚ್ಚ ರೂ.1,00,000 ಗಳಾಗಿರುತ್ತದೆ. ಈ ಯೋಜನೆಯಡಿ ಘಟಕ ವೆಚ್ಚದ ಶೇ.50 ರಷ್ಟು ಗರಿಷ್ಠ ರೂ.50,000 ಪ್ರತಿ ಹೆಕ್ಟೇರ್  ನೀಡಿ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಈಯೋಜನೆಯಡಿ ಗರಿಷ್ಠ 2 ಹೆಕ್ಟೇರ್‍ಗಳಲ್ಲಿ  ಸೀಗಡಿ ಕೃಷಿ ಕೈಗೊಳ್ಳಲು ಅವಕಾಶ ಮಾಡಲಾಗಿದ್ದು, ಒಬ್ಬ ಫಲಾನುಭವಿಗೆ ಗರಿಷ್ಠ ರೂ.1 ಲಕ್ಷ ಸಹಾಯಧನ ನೀಡಲಾಗುವುದು.

ಈ ಯೋಜನೆಗಳು ಸರ್ಕಾರ ನಿಗದಿಪಡಿಸಿರುವ ಗುರಿಯನ್ವಯ ಅನುಷ್ಠಾನಗೊಳ್ಳಲಿದ್ದು, ಮೊದಲು ಬಂದ ಫಲಾನುಭವಿಗಳಿಗೆ ಅದ್ಯತೆ ನೀಡಲಾಗುವುದು. ಆಸಕ್ತಿ ಇರುವ ಕೃಷಿಕರು ತಾಲ್ಲೂಕು ಮಟ್ಟದ  ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2 ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹದಾಗಿದೆ.