ಜಮೀನು ಖರೀದಿಸಿ ಕೃಷಿ ಮಾಡಬೇಕು ಎನ್ನುವವರಿಗಾಗಿ ಸಬ್ಸಿಡಿ ಸಾಲ ಯೋಜನೆಯೊಂದು ಕರ್ನಾಟಕದಲ್ಲಿ ಜಾರಿಯಲ್ಲಿದೆ. ಬಹುತೇಕರಿಗೆ ಯೋಜನೆಯ ಅರಿವಿಲ್ಲದೆ ಅರ್ಜಿ ಸಲ್ಲಿಕೆಯೇ ಕಡಿಮೆಯಾಗುತ್ತಿವೆ. ಈ ಯೋಜನೆಯಡಿ ಶೇ. 50 ರಷ್ಟು ಸಬ್ಸಿಡಿ ಸಾಲದೊಂದಿಗೆ ಎರಡು ಎಕರೆ ವರೆಗೆ ಜಮೀನು ಖರೀದಿಸಬಹುದು.

ಸರ್ಕಾರದ ಆದೇಶದ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತುರಾಮನಗರ ಜಿಲ್ಲೆಯಲ್ಲಿ ಕೃಷಿ ಜಮೀನು ಖರೀದಿಗೆ ಗರಿಷ್ಠ 20 ಲಕ್ಷ ರೂ. ವರೆಗೆ ನೆರವು ನೀಡಲಾಗುತ್ತದೆ. ಅದರಲ್ಲಿ ಶೇ. 50 ರಷ್ಟು ಸಬ್ಸಿಡಿ, ಉಳಿದ ಶೇ. 50 ರಷ್ಟು ಹಣವನ್ನು ಸಾಲದ ರೂಪದಲ್ಲಿ ಕೊಡಿಸಲಾಗುತ್ತದೆ.

ಉಳಿದ ಜಿಲ್ಲೆಗಳಲ್ಲಿ ಗರಿಷ್ಠ 15 ಲಕ್ಷ ರೂ.ವರೆಗೆ ನೆರವು ನೀಡಲಾಗುತ್ತದೆ. ಅದರಲ್ಲಿ ಶೇ. 50 ರಷ್ಟು ಸಬ್ಸಿಡಿ, ಉಳಿದ ಶೇ. 50 ರಷ್ಟು ಹಣವನ್ನು ಸಾಲದ ರೂಪದಲ್ಲಿ ಕೊಡಿಸಲಾಗುತ್ತದೆ. ಈ ನೆರವಿನಲ್ಲಿ ಕನಿಷ್ಠ 2.00 ಎಕರೆ ಖುಷ್ಕಿ ಅಥವಾ ಕನಿಷ್ಠ 1.00 ಎಕರೆ ತರಿ ಅಥವಾ ½ ಎಕರೆ (20 ಗುಂಟೆ) ಕಡಿಮೆಯಿಲ್ಲದಂತೆ ಭಾಗಾಯ್ತು ಜಮೀನನ್ನು ಖರೀದಿಸಿ ಕೊಡಲಾಗುತ್ತದೆ.

ಈ ಯೋಜನೆಗೆ ಭೂ ಒಡೆತನ ಯೋಜನೆ ಹೆಸರಿಸಲಾಗಿದೆ. ಯೋಜನೆಯಡಿ ಫಲಾನುಭವಿ ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ.ಮೀ ವ್ಯಾಪ್ತಿಯೊಳಗೆ ಜಮೀನನ್ನು ಫಲಾನುಭವಿಗೆ ಖರೀದಿಸಿ ಕೊಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ದರ ನಿಗದಿಪಡಿಸುತ್ತದೆ.

ಇದನ್ನೂ ಓದಿ: ಕೃಷಿ ಸ್ಟಾರ್ಟಪ್: ರೈತರ ಉತ್ಪನ್ನಗಳಿಗೆ ಭರ್ಜರಿ ಡಿಮಾಂಡ್

ಭೂ ಒಡೆತನ ಯೋಜನೆಯಡಿ ಅವಧಿಸಾಲವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ದಿ ನಿಗಮದಿಂದ ಮತ್ತು ಸಹಾಯಧನವನ್ನು ವಿಶೇಷ ಕೇಂದ್ರಿಯ ನೆರವು ಯೋಜನೆ ಅನುದಾನ ದಿಂದ ಭರಿಸಲಾಗುತ್ತಿದೆ. ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಸೌಲಭ್ಯವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ರೈತರ ಬೆಳೆ ರೈತರಿಂದಲೇ ಸಮೀಕ್ಷೆ: ಆ್ಯಪ್ ಬಿಡುಗಡೆ

ಸೌಲಭ್ಯ ಪಡೆಯುವುದು ಹೇಗೆ?

ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ಪ್ರತಿ ವರ್ಷ ವಿಧಾನಸಭಾ ಕ್ಷೇತ್ರವಾರು ಪರಿಶಿಷ್ಟ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಗುರಿ ನಿಗದಿಪಡಿಸಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.

ಇದನ್ನೂ ಓದಿ: ಈ ತಂತ್ರ ಬಳಸಿದರೆ ಕಬ್ಬಿಗೆ ಬಿಳಿನೊಣ ಕಾಡುವುದೇ ಇಲ್ಲ

ಹಾಗಾಗಿ ಶೇ. 50 ರಷ್ಟು ಸಬ್ಸಿಡಿ ಸಹಾಯಧನದೊಂದಿಗೆ ಕೃಷಿ ಜಮೀನು ಖರೀದಿಸಿ ಕೃಷಿ ಮಾಡಬೇಕು ಎನ್ನುವವರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ.