ಇದೇ ವರ್ಷದಿಂದ ಆರಂಭಿಸಿರುವ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನುಗಾರಿಕೆ ಇಲಾಖೆಯಿಂದ 2020-21ನೇ ಸಾಲಿನಲ್ಲಿ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಜತೆಗೆ ಉಪಕಸುಬಾಗಿ ಅಥವಾ ಪೂರ್ಣ ಪ್ರಮಾಣದಲ್ಲಿ ಮೀನು ಸಾಕಾಣಿಕೆ ಮಾಡಿ ಆದಾಯ ಗಳಿಸಬೇಕು ಎನ್ನುವ ಬಯಕೆ ಇರುವವರು ಈ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಬಹುದು.

ಲಾಕ್ ಘೋಷಣೆಯಾದ ಬಳಿಕ ರೈತರಿಗೆ ಘೋಷಣೆ ಮಾಡಿದ ಆರ್ಥಿಕ ನೆರವು ಸೌಲಭ್ಯದ ಭಾಗವಾಗಿ ಕೇಂದ್ರ ಸರ್ಕಾರವು ಪ್ರಸ್ತುತ ವರ್ಷದಿಂದ ಈ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದೆ. ಯೋಜನೆಯಡಿ ಮೀನುಗಾರರಿಗೆ ನೆರವು ನೀಡುವ ಸಲುವಾಗಿ ಕೇಂದ್ರ ಸರಕಾರ ಪ್ರಸಕ್ತ ವರ್ಷಕ್ಕೆ 20 ಸಾವಿರ ಕೋಟಿ ರೂ. ನಿಗದಿ ಮಾಡಿದೆ.

ಅದರಂತೆ ಯೋಜನೆಯಡಿ ಮೀನು ಕೃಷಿಕೊಳಗಳ ನಿರ್ಮಾಣ, ಬಯೋ ಫ್ಲಾಕ್ ಕೊಳ ನಿರ್ಮಾಣ, ಮೀನುಮರಿ ಉತ್ಪಾದನೆ ಹಾಗೂ ಪಾಲನಾ ಕೇಂದ್ರಗಳ ಸ್ಥಾಪನೆ, ಕ್ರೀಡಾ ಮೀನುಗಾರಿಕೆ, ಶೈತ್ಯೀಕರಿಸಿದ ವಾಹನಗಳು, ಆರ್.ಎ.ಎಸ್. ಘಟಕ ಸ್ಥಾಪನೆ, ಶೈತ್ಯಾಗಾರ / ಮಂಜುಗಡ್ಡೆ ಸ್ಥಾವರ ನಿರ್ಮಿಸುವುದು ಮತ್ತು ಅಲಂಕಾರಿಕ ಮೀನು ಉತ್ಪಾದಕ ಘಟಕ ಉಪಯೋಜನೆಗಳಡಿ ಫಲಾನುಭವಿಗಳು ಸಹಾಯಧನ ಪಡೆಯಬಹುದು.

ಯೋಜನೆಯಡಿ ಸಾಮಾನ್ಯ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುತ್ತದೆ. ಯೋಜನೆಯಡಿ ಸೌಲಭ್ಯ ಪಡೆಯುವ ಆಸಕ್ತಿ ಇರುವವರು ನಿಗದಿತ ನಮೂನೆಯಲ್ಲಿ ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: ಟಾರ್ಪಾಲಿನ (ತಾಡಪತ್ರಿ)ಗಾಗಿ ರೈತರಿಂದ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆ ಕಚೇರಿಯ ದೂರವಾಣಿ ಸಂಖ್ಯೆ 080-22864681/4604 ಅಥವಾ ಇ-ಮೇಲ್ ವಿಳಾಸ dfkarnataka@rediffmail.com ಮೂಲಕ ಸಂಪರ್ಕಿಸಬಹುದು. ಮೀನುಗಾರಿಕೆ ಇಲಾಖೆ ವೆಬ್ ಸೈಟ್ https://www.fisheries.karnataka.gov.in ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ತೋಟ ಆರಂಭಿಸಲು ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ

ಕಲಬುರಗಿ ಭಾಗದ ಜನರಿಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2 ಕಲಬುರಗಿ ಮೊಬೈಲ್ ಸಂಖ್ಯೆ 8861097281, ಚಿಂಚೋಳಿ ಮೊಬೈಲ್ ಸಂಖ್ಯೆ 7259984589, ಕಲಬುರಗಿ ಜಿಲ್ಲೆಯ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ 8050971404ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯ ಯೋಜನೆಗಳ ಕಿರು ಪರಿಚಯ