lumpy skin disease: ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲಂಪಿ ಸ್ಕನ್ ಡಿಸೀಜ್) ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. 

ಇದನ್ನೂ ಓದಿ: ತುಳಸಿ ಕೃಷಿ: ಒಂದೇ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ

ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ (ಸೊಳ್ಳೆ, ನೊಣ, ಉಣ್ಣೆ ಇತ್ತಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ.

ಇದನ್ನೂ ಓದಿ: ಪಶುಗಳಲ್ಲಿ ತೊನ್ನು: ಭಯ ಬೇಡ: ಡಾ. ಎನ್.ಬಿ.ಶ್ರೀಧರ

ಇದನ್ನೂ ಓದಿ: GOOD NEWS: ರೈತರಿಗೆ ಮತ್ತೊಂದು ಸಬ್ಸಿಡಿ ಯೋಜನೆ

lumpy skin disease

ಚರ್ಮಗಂಟು ರೋಗದ ಲಕ್ಷಣಗಳು:

• ಅತಿಯಾದ ಜ್ವರ (105-180 )ಕಣ್ಣುಗಳಿಂದ ನೀರು ಸೋರುವುದು.

• ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕಂಟುವುದು.

• ಜಾನುವಾರುಗಳ ಚರ್ಮದ ಮೇಲೆ 2-5 ಸೆ.ಮೀ.ನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ.

ಇದನ್ನೂ ಓದಿ: ಬಿದಿರು ಕೃಷಿಯಲ್ಲಿದೆ ಭರಪೂರ ಆದಾಯ

• ಹಾಲಿನ ಇಳುವರಿ ಕಡಿಮೆಯಾಗುವುದು ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ. ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು.

• ಮಿಶ್ರತಳಿ ಜರ್ಸಿ,ಹೆಚ್.ಎಫ್. ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ.

ಇದನ್ನೂ ಓದಿ: ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ

ರೋಗ ಹರಡುವಿಕೆ:

• ಸೊಳ್ಳೆ, ಉಣ್ಣೆ , ನೊಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ

• ಕಲುಷಿತಗೊAಡ ನೀರು ಹಾಗೂ ಆಹಾರದಿಂದ

• ಜಾನುವರುಗಳ ನೇರ ಸಂಪರ್ಕದಿAದ

• ರೋಗ ಹರಡುವಿಕೆ ಪ್ರಮಾಣ 10-20% ರಷ್ಟು ಹಗೂ ರೋಗದ ಸಾವಿನ ಪ್ರಮಾಣ 1-5% ಇರುತ್ತದೆ.

ಇದನ್ನೂ ಓದಿ: ಬೇಡಿಕೆಯ ಸಿರಿಧಾನ್ಯ ಬಿತ್ತನೆಗೆ ರೈತರಿಗೆ ಇಲ್ಲಿದೆ ಅವಕಾಶ

ಚರ್ಮಗಂಟು ರೋಗದ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ:

• ಈ ರೋಗವು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಹಾಗೂ ಈ ರೋಗಕ್ಕೆ ಯಾವುದೇ ಲಸಿಕೆ ಲಭ್ಯವಿರುವುದಿಲ್ಲ

• ಜಾನುವಾರುಗಳಿಗೆ ರೋಗದ ಲಕ್ಷಣಗಳ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ.

• ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು.

• ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಶಿಯಂ ಪರಮಾಂಗನೇಟ್ ದ್ರಾವಣದಿಂದ ತೊಳೆದು ಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸುವುದು.

ಇದನ್ನೂ ಓದಿ: ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ?

• ರೋಗ ಹರಡುವುದನ್ನು ತಡೆಯಲು ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸುವುದು.

• ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು.

• ಹಸಿರು ಮೇವು, ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು.

• ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5-6 ಬಾರಿ ಕುಡಿಸಬೇಕು.

• ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು.

• ಈ ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಇತರೆ ಕೀಟಗಳಿಂದ ಮುಖ್ಯವಾಗಿ ಹರಡುವುದರಿಂದ ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಹಾಗೂ ಫಾರ್ಮಾಲಿನ್(1%)ಫಿನೈಲ್(2%) ಅಥವಾ ಸೋಡಿಯಂ ಹಾಪೀಕ್ಲೊರೈಡ್ (2%) ದಿನಕ್ಕೆ ೨ ಬಾರಿ ಸಿಂಪಡಿಸಬೇಕು.

• ರೋಗಗ್ರಸ್ಥ ಜಾನುವಾರು ಮರಣ ಹೊಂದಿದ್ದಲ್ಲಿ ಆಳವಾದ ಗುಂಡಿಯಲ್ಲಿ ಹೂಳಬೇಕು ಹಾಗೂ ಹೆಚ್ಚಿನ ಮಾಹಿತಿ, ಚಿಕಿತ್ಸೆಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.