ಕೃಷಿಯಲ್ಲಿ ಹೊಸತನ ಮತ್ತು ಗ್ಯಾರಂಟಿ ಆದಾಯ ಹುಡುಕುತ್ತಿರುವವರಿಗೆ ಇಲ್ಲೊಂದು ಉಪಯುಕ್ತ ಮಾಹಿತಿ ಇದೆ. ಒಂದು ಲೀಟರ್ ಎಣ್ಣೆಗೆ 2000 ರೂಪಾಯಿ ವರೆಗೆ ದರ ಕೊಡುವ ತುಳಸಿ ಕೃಷಿ ಇತ್ತೀಚಿನ ರೈತರಿಗೆ ಯಶಸ್ಸು ತಂದುಕೊಡುತ್ತಿದೆ. ಪೂಜೆ ಮತ್ತು ಔಷಧವಾಗಿ ಬಳಸುವ ತುಳಸಿ ಬೆಳೆಯಲ್ಲೂ ರೈತರು ಲಾಭದಾಯಕ ಕೃಷಿ ಮಾಡಬಹುದು.

Tulasi agriculture

ಇದನ್ನೂ ಓದಿ: GOOD NEWS: ರೈತರಿಗೆ ಮತ್ತೊಂದು ಸಬ್ಸಿಡಿ ಯೋಜನೆ

ಔಷಧಿ ಸಸ್ಯಗಳ ಕೃಷಿಯಲ್ಲಿ ಹೆಚ್ಚಿನ ರೈತರು ಆಸಕ್ತಿ ತೋರುತ್ತಿದ್ದಾರೆ. ಅದರಲ್ಲಿ ಲಾಭ ಜಾಸ್ತಿ ಮತ್ತು ಬೇಡಿಕೆಯೂ ಅಧಿಕ ಎನ್ನುವುದು ವಿಶೇಷ. ಕೆಲ ರೈತರು ಹೆಕ್ಟೇರ್ ಗಟ್ಟಲೆ ಪ್ರದೇಶದಲ್ಲಿ ತುಳಸಿ ಬೆಳೆಯಲು ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ ಅದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ.

ಇದನ್ನೂ ಓದಿ: ಬಿದಿರು ಕೃಷಿಯಲ್ಲಿದೆ ಭರಪೂರ ಆದಾಯ

ತುಳಸಿ ಎಣ್ಣೆಗೆ ಬೇಡಿಕೆ

ತುಳಸಿಯನ್ನು ಮರಳು ಮಿಶ್ರಿತ ಭೂಮಿಯಲ್ಲಿ ಬೆಳೆಯಬಹುದು. ತುಳಸಿ ಕೃಷಿ ಮಾಡುವ ಮೊದಲು ಗದ್ದೆಯಿಂದ ನೀರು ತೆಗೆದು ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? ಪೂರ್ಣ ವಿವರ ಇಲ್ಲಿದೆ

ಒಸಿಮಮ್ ಬೆಸಿಲಿಕಮ್ ಎಂಬ ಜಾತಿಯ ತುಳಸಿಯನ್ನು ತೈಲ ಉತ್ಪಾದನೆಗಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಸುಗಂಧ ದ್ರವ್ಯಗಳು ಮತ್ತು ಔಷಧಿಗಳಿಗಾಗಿಯೂ ಈ ಜಾತಿಯ ತುಳಸಿಯ ಎಣ್ಣೆಯನ್ನು ಬಳಸಲಾಗುತ್ತದೆ.

ಕಾಸ್ಮೆಟಿಕ್ ಉದ್ಯಮದಲ್ಲಿ ತುಳಸಿ ಎಣ್ಣೆಗೆ ಹೆಚ್ಚಿನ ಬೇಡಿಕೆಯಿದೆ. ಜೂನ್-ಜುಲೈನಲ್ಲಿ ಬಿತ್ತಿದ ತುಳಸಿ ಬೆಳೆ ಚಳಿಗಾಲದ ಹೊತ್ತಿಗೆ ಉತ್ತಮ ಸ್ಥಿತಿಗೆ ಬರುತ್ತದೆ.

ಇದನ್ನೂ ಓದಿ: ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ

ಕೃಷಿ ಮಾಡುವುದು ಹೇಗೆ?

ತುಳಸಿ ಕೃಷಿ ಮಾಡುವ ಆಸಕ್ತಿ ಇರುವವರು ಹೆಚ್ಚಾಗಿ ಸೆಗಣಿ ಗೊಬ್ಬರವನ್ನು ಬಳಸುತ್ತಾರೆ. ಒಂದು ಹೆಕ್ಟೇರ್‌ನಲ್ಲಿ ಸುಮಾರು 20 ಟನ್ ಸೆಗಣಿ ಗೊಬ್ಬರವನ್ನು ಬಳಸಬೇಕು. ತುಳಸಿ ಬೀಜಗಳು ಅಥವಾ ಸಸ್ಯಗಳನ್ನು ನಾಟಿ ಮಾಡುವ ಪದ್ಧತಿ ಇದೆ. ನಾಟಿ ಮಾಡುವಾಗ ಪ್ರತೀ ಸಸ್ಯಗಳ ನಡುವೆ 10 ಸೆಂ.ಮೀ ಅಂತರ ಇರಬೇಕು.

ಇದನ್ನೂ ಓದಿ: ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ?

ತುಳಸಿ ಬೆಳೆದ ಕ್ಷೇತ್ರವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಸುಮಾರು 3 ರಿಂದ 4 ವಾರಗಳಲ್ಲಿ ಕಾಲಕಾಲಕ್ಕೆ ಕಳೆಯನ್ನು ಕೀಳುತ್ತಿರಬೇಕು. ಅದರಿಂದ ಕ್ಷೇತ್ರ ಉತ್ತಮವಾಗಿರುತ್ತದೆ.

ತುಳಸಿ ಎಣ್ಣೆಯ ಬೆಲೆ ಎಷ್ಟು?

ತುಳಸಿ ಗಿಡ ಚೆನ್ನಾಗಿ ಬೆಳೆದು ಸಿದ್ಧವಾದ ನಂತರ ಎಲೆಗಳನ್ನು ತೆಗೆಯಬೇಕು. ಭಟ್ಟಿ ಇಳಿಸುವ ವಿಧಾನದಿಂದ ತುಳಸಿ ಗಿಡ ಮತ್ತು ಎಲೆಗಳಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ.

ಸುಮಾರು ಒಂದು ಹೆಕ್ಟೇರ್‌ನಲ್ಲಿ 100 ಕೆಜಿಗಿಂತ ಹೆಚ್ಚು ಎಣ್ಣೆಯನ್ನು ಹೊರತೆಗೆಯಬಹುದು. ಕೊರೊನಾ ಅವಧಿಯಲ್ಲಿ ತುಳಸಿ ಎಣ್ಣೆಗೆ ಬೇಡಿಕೆ ಹೆಚ್ಚಿತ್ತು. ತುಳಸಿ ಬೆಳೆ ಸುಮಾರು 90 ದಿನಗಳಲ್ಲಿ ಸಿದ್ಧವಾಗುತ್ತದೆ. ಹಾಗಾಗಿ ನಿರಂತರ ಆದಾಯ ಗಳಿಸಬಹುದು.