ಇತ್ತೀಚೆಗೆ ಬಿದಿರು ಉತ್ಪನ್ನಗಳು ಬಹಳ ಬೇಡಿಕೆ ಗಳಿಸುತ್ತಿದೆ. ಒಂದು ಕಾಲದಲ್ಲಿ ನಿರ್ಲಕ್ಷö್ಯಕ್ಕೆ ಒಳಗಾಗಿದ್ದ ಬಿದಿರು ಲಕ್ಷ ಲಕ್ಷ ರೂ. ಆದಾಯ ತಂದುಕೊಡುತ್ತಿದೆ. ಅದಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹ ಕೂಡ ಕೊಡುತ್ತಿದೆ. ಹಾಗಾಗಿ ಎಲ್ಲೆಡೆ ಬಿದಿರು ಕೃಷಿ ಎನ್ನುವ ಹೊಸ ಉದ್ಯಮವೇ ಶುರುವಾಗಿದೆ. ಒಮ್ಮೆ ಈ ಕೃಷಿ ಮಾಡಿದರೆ 80 ವರ್ಷಗಳ ವರೆಗೆ ನಿರಂತರವಾಗಿ ಆದಾಯ ಪಡೆಯಬಹುದು ಎನ್ನುವುದು ಕೂಡ ಸಾಬೀತಾಗಿದೆ.

ಹಾಗಾದರೆ, ಬಿದಿರು ಬೆಳೆಯುವುದು ಹೇಗೆ, ಅದರಿಂದ ಹಣ ಗಳಿಸುವುದು ಹೇಗೆ, ಬಿದಿರು ಸಸಿಗಳು ಎಲ್ಲಿ ಸಿಗುತ್ತವೆ, ಮಾರುಕಟ್ಟೆ ಹೇಗಿದೆ, ಬಿದಿರು ಕೃಷಿ ಮಾಡಿದರೆ ಎಷ್ಟು ವರ್ಷಗಳು ದುಡಿಬೇಕು, ಎಷ್ಟು ವರ್ಷ ಆದಾಯ ಬರುತ್ತದೆ, ಬಿದಿರು ಸಾಗಾಟ ಮಾಡುವುದು ಹೇಗೆ, ಅದನ್ನು ಬೆಳೆಸಿ ಕಟಾವು ಮಾಡಲು ಕಾನೂನು ತೊಂದರೆ ಇದೆಯೇ ಇದೆಲ್ಲ ಮಾಹಿತಿ ಈ ಲೇಖನದಲ್ಲಿದೆ.

ಬಿದಿರು ಬುಟ್ಟಿ, ಬಿದಿರಿನ ಮೊರ, ಬಿದಿರು ಬಂಬುಗಳಿAದ ಮಾಡಿದ ಏಣಿ, ಪೀಠೋಪಕರಣ, ಆಟಿಕೆಗಳು, ಕಿಟಕಿ ಪರದೆ, ಚಾಪೆ, ಕುರ್ಚಿ ಹೀಗೆ ಅನೇಕ ಉತ್ಪನ್ನಗಳಿಗೆ ಭಾರೀ ಡಿಮಾಂಟ್ ಇದೆ. ಆದರೆ, ಅದಕ್ಕೆ ತಕ್ಕಷ್ಟು ಬಿದಿರು ಸಿಗುತ್ತಿಲ್ಲ. ಹಾಗಾಗಿ ಬಿದಿರು ಕೃಷಿ ಮಾಡುವವರಿಗೆ ಭರ್ಜರಿ ಅವಕಾಶ ದೊರೆತಿದೆ. ಆದರೆ, ಬಿದಿರು ಒಂದು ಕೃಷಿ ಬೆಳೆಯೇ ಅಲ್ಲ, ಅದೊಂದು ಕಾಡು ಸಸ್ಯ ಎನ್ನುವುದೇ ಬಹುತೇಕ ರೈತರ ವಾದ. ಆದರೆ, ಬಿದಿರನ್ನು ಬೆಳೆದರೆ ರೈತರ ಬಾಳೂ ಬಂಗಾರವಾಗುತ್ತದೆ. ಇದನ್ನು ಹಿಸಿರು ಹೊನ್ನು (ಚಿನ್ನ) ಎನ್ನುವ ಮಾತು ಈಗ ಶುರುವಾಗಿದೆ.

ಈ ಹಿಂದೆ ಬಿದಿರು ಕಡಿಯಲು, ಸಾಗಿಸಲು ಮತ್ತು ಮಾರಾಟ ಮಾಡಲು ಸರ್ಕಾರದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ಬಿದಿರಿನ ಮೇಲಿದ್ದ ಎಲ್ಲ ಕಾನೂನು ನಿರ್ಬಂಧಗಳನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರ ತೆರವುಗೊಳಿಸಿದೆ. ಈಗ ಯಾರುಬೇಕಾದರೂ ಬಿದಿರು ಬೆಳೆದು ಮಾರಾಟ ಮಾಡಬಹುದು. ಅಲ್ಲದೆ, ಬಿದಿರು ಕೃಷಿ ಮಾಡಲು ಸರ್ಕಾರವೇ ಪ್ರೋತ್ಸಾಹ ಧನ ಕೊಡುತ್ತದೆ.

ಇದನ್ನೂ ಓದಿ: ಈರುಳ್ಳಿ ಬೆಳೆ ಬಗ್ಗೆ ನಿಮಗೆಷ್ಟು ಗೊತ್ತು?

ಬೆಳೆಯುವುದು ಹೇಗೆ?
ರಾಷ್ಟಿçÃಯ ಬಿದಿರು ಮಿಷನ್ ಅಥವಾ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಬಿದಿರು ಬೆಳೆಯುವ ರೈತರಾಗಿ ಹೆಸರು ನೋಂದಾಯಿಸಬೇಕು. ಬಿದಿರಿನ ಸಸಿಗಳನ್ನು ಸರ್ಕಾರವೇ ವಿತರಿಸುತ್ತದೆ. ತರಬೇತಿಯನ್ನೂ ನೀಡಲಾಗುತ್ತದೆ. ರಾಷ್ಟಿçÃಯ ಬಿದಿರು ಮಿಷನ್ ಅಡಿಯಲ್ಲಿ ಹೆಸರು ನೋಂದಾಯಿಸಿಕೊAಡ ಬೆಳೆಗಾರರಿಗೆ ಸರ್ಕಾರದಿಂದ 50 ಸಾವಿರ ರೂ.ವರೆಗೆ ಪ್ರೋತ್ಸಾಹಧನ ನೀಡುತ್ತದೆ.

ಭಾರತದಲ್ಲಿ ಸುಮಾರು 1400ಕ್ಕೂ ಅಧಿಕ ಬಿದಿರು ಜಾತಿಗಳಿವೆ. ಹೆಚ್ಚಿನ ತಳಿಗಳಲ್ಲಿ ಮುಳ್ಳುಗಳು ಇರುತ್ತವೆ. ಅದಕ್ಕಾಗಿಯೇ ಕೃಷಿ ವಿಜ್ಞಾನಿಗಳು ಅಂಗಾ0ಶ ಕೃಷಿ ತಂತ್ರಜ್ಞಾನ (ಟಿಷ್ಯುಕಲ್ಚರ್) ಬಳಸಿಕೊಂಡು ಹೈಬ್ರೀಡ್ ಸಸಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಳಿಗಳಲ್ಲಿ ಮುಳ್ಳುಗಳು ಇರುವುದಿಲ್ಲ. ಅಂಗಾ0ಶ ಕೃಷಿ ಮೂಲಕ ಬಿದಿರು ಬೆಳೆಯುವ ರೈತರಿಗೆ ಮಾತ್ರ ಸರ್ಕಾರದಿಂದ ಸಹಾಯಧನ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಅಧಿಕ ಆದಾಯ ತಂದು ಕೊಡುವ ಕುರಿ ಸಾಕಾಣಿಕೆ

ಬೆಳೆಯುವ ವಿಧಾನ
ಪ್ರತಿ ಗಿಡದ ನಡುವೆ 6 ಅಡಿ ಹಾಗೂ ಪ್ರತಿ ಸಾಲಿನ ನಡುವೆ 10 ಅಡಿಗಳ ಅಂತರ ಇರಬೇಕು. ಕಬ್ಬಿನ ಗದ್ದೆಯಂತೆ ಸಾಲುಗಳ ನಡುವೆ ಟ್ರಂಚ್ ತೆಗೆದು, ನೀರು ಹರಿಸಬೇಕು. ಬೇಸಿಗೆಯಲ್ಲಿ ಗಿಡಗಳ ಬಳಿ ತೇವಾಂಶ ಹಿಡಿದಿಡಲು ಹಸಿರೆಲೆ, ತೆಂಗು, ಅಡಕೆ ಗರಿಗಳನ್ನು ಟ್ರಂಚ್‌ಗೆ ಹಾಕಿ ಮಣ್ಣು ಮುಚ್ಚಬೇಕು. ಅದರ ಮೇಲೆ ನೀರು ಹಾಯಿಸಬೇಕು.

ಈ ರೀತಿ ನಾಟಿ ಮಾಡಿದರೆ, ಒಂದು ಎಕರೆಗೆ 900 ರಿಂದ 1000 ಬಿದಿರಿನ ಗಿಡಗಳನ್ನು ನೆಡಬಹುದು. 3 ವರ್ಷಗಳ ನಂತರ ಬಿದಿರು ಕಟಾವಿಗೆ ಸಿದ್ಧವಾಗುತ್ತದೆ. ಅಲ್ಲಿಂದಲೇ ಆದಾಯ ಆರಂಭ. ಒಂದು ಸಾವಿರ ಬಿದಿರಿನ ಗಿಡಗಳಿಂದ 40 ಟನ್ ಬಿದಿರು ತೆಗೆಯಬಹುದು. ಸದ್ಯ ಮಾರುಕಟ್ಟೆಯಲ್ಲಿ ಒಂದು ಟನ್ ಬಿದಿರಿಗೆ 5000 ರೂ. ಸಿಗಲಿದೆ.

ಒಂದು ಎಕರೆಗೆ ಮೊದಲ ವರ್ಷ 1.50 ಲಕ್ಷ ರೂ. ದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಪ್ರತೀ ವರ್ಷ ಅದಾಯ ಹೆಚ್ಚಾಗುತ್ತಲೇ ಹೋಗುತ್ತದೆ. ಸುಮಾರು 80-90 ವರ್ಷ ನಿರಂತರವಾಗಿ ಆದಾಯ ಪಡೆಯಬಹುದು. ಬಿದಿರು ಮಾರಾಟಕ್ಕೆ ಬೆಳೆಗಾರರು ಎಲ್ಲಿಗೂ ಹೋಗಬೇಕಿಲ್ಲ. ಬಿದುರು ಪೀಠೋಪಕರಣ ಮಾಡುವ ಕಂಪನಿಗಳು, ಉದ್ಯಮಿಗಳು ಅವರಾಗಿಯೇ ಹುಡುಕಿಕೊಂಡು ಬಂದು ಹಣ ಕೊಟ್ಟು ಖರೀದಿಸುತ್ತಾರೆ.

ಇದನ್ನೂ ಓದಿ: ತೆಂಗು ಕೃಷಿಯಲ್ಲಿ ಅಧಿಕ ಲಾಭ ಪಡೆಯುವುದು ಹೇಗೆ?

ಬಿದಿರು ಕೃಷಿಗೆ ಸಹಾಯಧನ:
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ರಾಷ್ಟಿçÃಯ ಬಾಂಬೂ ಮಿಷನ್, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪರಿಶಿಷ್ಟ ವರ್ಗದ ರೈತರು ಬಿದಿರು ಕೃಷಿಯನ್ನು ಮಾಡಲು ಪ್ರೋತ್ಸಾಹಿಸಲು ಪ್ರತಿ ಎಕರೆಗೆ ಪ್ರತಿ ವರ್ಷ 18 ಸಾವಿರ ರೂ.ಗಳಂತೆ ಮೂರು ವರ್ಷಗಳ ಕಾಲಾವಧಿಗೆ ಸಹಾಯಧನ ಒದಗಿಸುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಪಂಗಡದ ರೈತರು ಜಮೀನು ಹೊಂದಿರುವ ಕುರಿತು ಆರ್.ಟಿ.ಸಿ, ಅರಣ್ಯ ಹಕ್ಕು ಅಧಿನಿಯಮದಡಿ ಹಕ್ಕು ಪತ್ರ ಹೊಂದಿರಬೇಕು. ಜಾತಿ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. ಅರ್ಹ ರೈತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು.
ಉಳಿದ ವರ್ಗದ ರೈತರೂ ಬಿದಿರು ಕೃಷಿ ಮಾಡಲು ಅರ್ಜಿ ಸಲ್ಲಿಸಬಹುದು.