ಕರ್ನಾಟಕ ವಾರ್ತೆ: ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2022-23ನೇ ಸಾಲಿನ 10 ತಿಂಗಳ ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು, ತಂದೆ, ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ನೀಡಬೇಕು. 11 ಪುರುಷರು ಹಾಗೂ ಐದು ಜನ ಮಹಿಳೆಯರು ಸೇರಿ 16 ಜನರನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 18 ರಿಂದ 33 ವರ್ಷದೊಳಗಿರಬೇಕು. ಇತರೆ ಅಭ್ಯರ್ಥಿಗಳು 18 ರಿಂದ 30 ವರ್ಷದೊಳಗಿರಬೇಕು. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳು ರೂ.30 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ರೂ.15ಗಳನ್ನು ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ)ಹಾವೇರಿ ಇವರ ಹೆಸರಿನಲ್ಲಿ ಪೋಸ್ಟಲ್ ಆರ್ಡರ್(ಐಪಿಒ) ಅಥವಾ ಡಿಮ್ಯಾಂಡ್ ಡ್ರಾಪ್ಟ್ ಅರ್ಜಿ ಜೊತೆಗೆ ಲಗತ್ತಿಸಬೇಕು.

ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ

ಅರ್ಜಿ ನಮೂನೆಯನ್ನು ಇಲಾಖೆ ವೆಬ್‍ಸೈಟ್ https://horticulturedir.karnataka.gov.in ನಲ್ಲಿ ಅಥವಾ ತೋಟಗಾರಿಕೆ ಕಚೇರಿಯಲ್ಲಿ ಮಾರ್ಚ್ 15 ರಿಂದ ದಿನಾಂಕ 16-04-2022ರವರೆಗೆ ಪಡೆಯಬಹುದು. ಅರ್ಜಿ ಸಲ್ಲಿಸಲು ದಿನಾಂಕ 16-04-2022 ಕೊನೆಯ ದಿನವಾಗಿದೆ.

ಬಿದಿರು ಕೃಷಿಯಲ್ಲಿದೆ ಭರಪೂರ ಆದಾಯ

ದಿನಾಂಕ 18-04-2022ರ ಬೆಳಿಗ್ಗೆ 11 ಗಂಟೆಗೆ ಹಾವೇರಿ ಜಿಲ್ಲಾ ಆಡಳಿತ ಭವನದಲ್ಲಿರುವ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಆಯ್ಕೆಪಟ್ಟಿಯನ್ನು ದಿನಾಂಕ 20-04-2022 ರಂದು ಪ್ರಕಟಿಸಲಾಗುವುದು.

ಉಚಿತ ವಿದ್ಯುತ್ ಸಂಪರ್ಕ “ಬೆಳಕು” ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾವ) ಹಾವೇರಿ ಮತ್ತು ತಾಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? ಪೂರ್ಣ ವಿವರ ಇಲ್ಲಿದೆ